ಸಂಶೋಧನೆ ಕೇವಲ ಮೆಚ್ಚುಗೆಗೆ ಸೀಮಿತವಾಗಬಾರದು: ಡಾ.ಅಶ್ವತ್ ನಾರಾಯಣ

ಬೆಂಗಳೂರು

    ದೇಶದಲ್ಲಿ ನಡೆಯುವ ಎಲ್ಲಾ ಸಂಶೋಧನೆಗಳು ಜ್ಞಾನವನ್ನು ವೃದ್ಧಿಸುವ ಹಾಗೂ ತಿಳುವಳಿಕೆಯನ್ನು ಹೊರೆಗೆ ಹಚ್ಚುವ ನಿಟ್ಟುನಲ್ಲಿರಬೇಕೇ ಹೊರತು ಕೇವಲ ಮೆಚ್ಚುಗೆಯ ಸಂಶೋಧನೆ ಸೀಮಿತ ವಾಗಬಾರದು ಎಂದು ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್ ಅಭಿಪ್ರಾಯಪಟ್ಟರು.

   ನಗರದ ಕಮ್ಯುನಿಟಿ ಸೆಂಟರ್ ಆಫ್ ಎಜ್ಯುಕೇಷನ್ ಇನ್ಸ್ಟಿಟ್ಯೂಟ್ ನ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.ಜ್ಞಾನವು ಶಿಕ್ಷಣದಿಂದ ಲಭ್ಯವಾಗು ತ್ತದೆಯೋ ಹೊರತು ವ್ಯಕ್ತಿ ಆರಾಧನೆಯಿಂದಲ್ಲ.ವಿಶ್ವದಲ್ಲಿ ಜ್ಞಾನಾರ್ಜನೆ ನಿರಂತರ ಪ್ರಕ್ರಿಯೆ ಎಂದು ಅವರು ಹೇಳಿದರು.

    ಪ್ರಪಂಚದಾದ್ಯಂತ ನಡೆಯುವ ಸಂಶೋಧನೆಗಳು ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಇರಲಿ.ಯಾರದೋ ವ್ಯಕ್ತಿ ಯನ್ನು ಮೆಚ್ಚಿಸುವ ರೀತಿಯಲ್ಲಿ ಇರಬಾರದು.ತಿಳುವಳಿಕೆಯನ್ನು ಹೆಚ್ಚಿಸುವ ಸಂಶೋಧನೆಗಳಿಗೆ ಶಿಕ್ಷಣ ಸಂಸ್ಥೆ ಗಳು ಸಹಾಯ ಮಾಡಬೇಕು.ಸಮಸ್ಯೆ ಪರಿಹಾರಕ್ಕೆ ಸರಳ ಸ್ವರೂಪದ ಶಿಕ್ಷಣ ನೀಡಬೇಕು.

    ಶಿಕ್ಷಣ ಕೇವಲ ಡಿಗ್ರಿಗೆ ಮಾತ್ರ ಸೀಮಿತ ವಾಗಬಾ ರದು.ಈ ದಾರಿ ಯಲ್ಲಿ ನಡೆಯೋ ಕೆಲಸವನ್ನು ಕಮ್ಯುನಿಟಿ ಸೆಂಟರ್ ಮಾಡುತ್ತಿವೆ.ಪ್ರತಿಯೊಬ್ಬರ ಬದುಕು ರೂಪಿಸಲು ಶಿಕ್ಷಣ ನೆರವಾಗಲಿ.ಪ್ರತಿಯೊಬ್ಬರ ಭಾವನೆಗಳಿಗೆ ಪೂರಕ ವಾದ ಶಿಕ್ಷಣ ಲಭ್ಯವಾಗುವಂತೆ ಮಾಡೋಣ.ಒಂದು ಸರ್ಕಾರವಾಗಿ ನಮ್ಮ ಪ್ರಯತ್ನ ನಾವು ಮಾಡುತ್ತೇವೆ.ಇದಕ್ಕೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡಲಿ.ಶಾಂತಿ,ನೆಮ್ಮದಿ,ಸಮಾಧಾನ ಕೊಡುವ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಕಮ್ಯುನಿಟಿ ಸೆಂಟರ್ ಆಫ್ ಎಜುಕೇಷನ್ ಇನ್ಸ್ಟಿಟ್ಯೂಟ್ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು

    ಇದೇ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು,ಸೇವಾ ಮನೋಭಾವದಿಂದ ಶಿಕ್ಷಣ ನೀಡುತ್ತಿರುವ ಕಮ್ಯುನಿಟಿ ಸೆಂಟರ್ ಕೆಲಸ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.ಕೇವಲ ಹಣಗಳಿಕೆಯೇ ಕೆಲವು ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಬಾರದು.ತಳಹಂತದ ವಿದ್ಯಾರ್ಥಿಗಳ ಪರವಾದ ನಿಲುವು ವ್ಯಕ್ತಪಡಿಸಲು ಶಿಕ್ಷಣ ಸಂಸ್ಥೆಗಳು ಮುಂದಾಗಲಿ ಎಂದು ಅವರು ಕರೆ ನೀಡಿದರು.

    ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ವ್ಯವಸ್ಥೆ ಬದಲಾವಣೆ ಆಗಲಿ.ಸರ್ಕಾರವೇ ಎಲ್ಲಾ ಮಾಡಲಿ ಎನ್ನುವ ಧೋರಣೆ ಮಾತ್ರ ಬೇಡ.ಶಿಕ್ಷಣ ಸಂಸ್ಥೆಗಳು ಸರ್ಕಾರದ ಜೊತೆಗೆ ಕೈಜೋಡಿಸಿದಾಗ ಮಾತ್ರ ನಮ್ಮ ಗುರಿ ಸಾಧನೆಯಾಗಲಿದೆ.ಸೇವಾ ಮನೋ ಭಾವ,ಸಾಮೂಹಿಕ ಪ್ರಗತಿ,ಬಡವರ ಪರ ಚಿಂತನೆ ನಮ್ಮ ಶಿಕ್ಷಣದ ಆದ್ಯತೆ ಆಗಲಿ.ಈ ನಿಟ್ಟಿನಲ್ಲಿ ಕಮ್ಯುನಿಟಿ ಸೆಂಟರ್ ಪ್ರಗತಿ ಪರ ಚಿಂತನೆಯನ್ನು ಸಾಕಾರ ಮಾಡಿಕೊಂಡು ಸಾಗಲಿ ಎಂದು ರಾಮಲಿಂಗರೆಡ್ಡಿ ಅವರು ಶುಭ ಹಾರೈಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link