ಸ್ವಯಂ ಪ್ರೇರಣೆಯಿಂದ ಹಿರಿಯರನ್ನು ಗೌರವಿಸಿ: ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ

ಬಳ್ಳಾರಿ. 

      ಕುಟುಂಬಗಳಲ್ಲಿ ಹಿರಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪರಿಸರ ನಿರ್ಮಾಣವಾಗಬೇಕು. ಅಂತಹ ಕುಟುಂಬ ಸದಾ ಸುಖಿಯಾಗಿರುತ್ತದೆ. ಸಾರ್ವಜನಿಕರು ಮತ್ತು ಮಕ್ಕಳು ತಮ್ಮ ತಂದೆ-ತಾಯಿಯರನ್ನು ಮತ್ತು ಹಿರಿಯರನ್ನು ಸ್ವಯಂ ಪ್ರೇರಣೆಯಿಂದ ಗೌರವಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ತಿಳಿಸಿದರು.

     ನಗರದ ಡಾ ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗಾರಿಕರ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶ್ರಮಪಟ್ಟಿರುತ್ತಾರೆ ಅವರ ಸಂತೋಷದಿಂದ ನೋಡಿಕೊಳ್ಳವುದು ಅವರ ಮಕ್ಕಳ ಕರ್ತವ್ಯವಾಗಿದೆ. ಹಿರಿಯರ ಅನುಭವ ಇಂದಿನ ಮುಕ್ಕಳಿಗೆ ಮುಖ್ಯವಾಗಿದೆ ಎಂದು ಹೇಳಿದ ಅವರು ಹಿರಿಯರೊಂದಿಗೆ ಪ್ರೀತಿಯಿಂದ ಮತ್ತು ಗೌರವದಿಂದ ವರ್ತಿಸಿ ಎಂದರು.

     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಎಸ್.ಬಿ.ಹಂದ್ರಾಳ್ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ನಮ್ಮ ದೇಶದ ಸಂಸ್ಕøತಿ ಮತ್ತು ಹಿರಿಯನ್ನು ಗೌರವಿಸುವುದನ್ನು ಕಲಿಸಬೇಕು. ಸಮಾಜದಲ್ಲಿ ಹಿರಿಯರನ್ನು ಅರ್ಥ ಮಾಡಿಕೊಳ್ಳುವುದರೊಂದಿಗೆ ಗೌರವದಿಂದ ಕಾಣುವ ಪ್ರವೃತ್ತಿ ಬೆಳಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಕಾನೂನು ಅರಿವು ಹೊಂದಿರಬೇಕು. ಹಿರಿಯ ನಾಗರಿಕರಿಗೆ ಕಾನೂನು ಸೇವಾ ಪ್ರಧಿಕಾರವು ಎಲ್ಲಾ ರೀತಿಯ ಕಾನೂನು ನೆರವು ಸೌಕರ್ಯ ಸವಲತ್ತುಗಳನ್ನು ಒದಗಿಸಿದೆ. ಮನೆಯಲ್ಲಿ ಹಿರಿಯರಿಗೆ ಗೌರವ ಸ್ಥಾನ ಮಾನ ಹಾಗೂ ಜೀವನಾಂಶ ಸೌಕರ್ಯ ದೊರಕಬೇಕು. ಈ ಸಂಧ್ಯಾಕಾಲದ ವಯಸ್ಸಿನವರೊಂದಿಗೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರು

     ಬಳ್ಳಾರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಸೋಮಶೇಖರ ರೆಡ್ಡಿ ಅವರು ಮಾತನಾಡಿದರು. ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗೇಶ್ ಬಿಲ್ವಾ ಅವರು ಸ್ವಾಗತಿಸಿ, ವಂದಿಸಿದರು.

      ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಲ್ಲನಗೌಡ, ವಿಕಲಚೇತನ ಕಲ್ಯಾಣ ಅಧಿಕಾರಿ ಮಹಾಂತೇಶ್, ಉಮಾಪತಿಗೌಡ, ಹಿರಿಯ ನಾಗರಿಕರು, ಮಕ್ಕಳು, ಸಾರ್ವಜನಿಕರು ಹಾಗೂ ಇತರೆ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.

      ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಹಿರಿಯ ನಾಗರಿಕರಿಗೆ ಹಾಗೂ ಶತಾಯಿಷಗಳಾದ 100 ವರ್ಷದ ಸಾಲಮ್ಮ, 101 ವರ್ಷದ ಈರಪ್ಪ ಹಾಗೂ 75 ವರ್ಷದ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ನಿವೃತ್ತ ದೈಹಿಕ ಶಿಕ್ಷಕ ಜಿ.ಸತ್ಯನಾರಾಯಣ, ಹಿರಿಯರಾದ ಶ್ರೀಮತಿ ಎನ್.ನಾಗರತ್ನಮ, ಕರಿಸಬಪ್ಪ, ನಾಗಮ್ಮ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ರೀಡೆಗಳು ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನೀಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap