ಬೆಂಗಳೂರು:
ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವ ಉದ್ದೇಶದಿಂದ ಜೆಡಿಎಸ್ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದು, ಸಚಿವ ರೇವಣ್ಣ ಕುಟುಂಬ ಕಾಂಗ್ರೆಸ್ ಮುಖಂಡ ಸಿ.ಎಸ್.ಪುಟ್ಟೇಗೌಡರನ್ನು ಭೇಟಿ ಮಾಡಿದೆ . ಚನ್ನರಾಯಪಟ್ಟಣದಲ್ಲಿರುವ ಸಿ.ಎಸ್.ಪುಟ್ಟೇಗೌಡ ನಿವಾಸಕ್ಕೆ ಪತ್ನಿ ಭವಾನಿ ರೇವಣ್ಣ ಹಾಗೂ ಅಭ್ಯರ್ಥಿ ಪ್ರಜ್ವಲ್ ಭೇಟಿ ನೀಡಿ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಜೊತೆಗೆ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಇದ್ದರು. ಪುಟ್ಟೇಗೌಡರ ಕಾಲಿಗೆ ಬೀಳೋದಕ್ಕೆ ಮುಂದಾದ ಪ್ರಜ್ವಲ್ ರೇವಣ್ಣರಿಗೆ ಪುಟ್ಟೇಗೌಡರು ನಮ್ಮ ಪಕ್ಷದ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ಹಿಂದೆ ಪುಟ್ಟೇಗೌಡರು ಹಲವು ವರ್ಷ ಜೆಡಿಎಸ್‍ನಲ್ಲೇ ಇದ್ದು ಗುರುತಿಸಿಕೊಂಡ ನಾಯಕರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
