ತುಮಕೂರು:
ತುಮಕೂರು ನಗರದ ಹೊರವಲಯದ ಮಲ್ಲಸಂದ್ರದ ಹತ್ತಿರದಲ್ಲಿ ಭೀಕರವಾದ ರಸ್ತೆ ಅಪಘಾತ ನಡೆದಿದೆ.ಅತಿಯಾಗಿ ಕುಡಿದು ಟಿಪ್ಪರ್ ಓಡಿಸುತ್ತಿದ್ದ ಚಾಲಕ ತನ್ನ ಮುಂದೆ ಹೊಗುತ್ತಿದ್ದ ಎಕ್ಸ್ ಯು ವಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಹೋಗಿ ಟಾಟಾ ಏಎಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 5 ಜನ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಮಲ್ಲಸಂದ್ರದ ಬಳಿ ನಡೆದಿದೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ