ಆರ್​ಟಿಒ ಅಧಿಕಾರಿಗಳ ಲಂಚತನಕ್ಕೆ ಬೀಳಲಿದೆ ಬ್ರೇಕ್: ಇನ್​ಸ್ಪೆಕ್ಟರ್​ಗಳಿಲ್ಲದೆಯೇ ಆಗಲಿದೆ ಎಫ್​ಸಿ

ಬೆಂಗಳೂರು

    ಆರ್​ಟಿಒ ಇನ್ಸ್‌ಪೆಕ್ಟರ್​ಗಳಿಲ್ಲದೆಯೇ ಇನ್ಮುಂದೆ ಆಗಲಿದೆ ಎಫ್​ಸಿ! ಎಫ್​ಸಿ ಮಾಡಲು ಸಾರಿಗೆ ಇಲಾಖೆ Automatic Testing Station (ATS) ತೆರೆದಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನೆಲಮಂಗಲ ಆರ್​ಟಿಒದಲ್ಲಿ ಎಟಿಎಸ್ ಸೆಂಟರ್​​ಗಳನ್ನು ತೆರೆಯಲಾಗಿದೆ. ಈ ಸೆಂಟರ್​​ಗಳಿಗೆ ವಾಹನಗಳನ್ನು ತೆಗೆದುಕೊಂಡು ಹೋದರೆ ಸಾಕು, ಆ ಮಷಿನ್​ಗಳೇ ವಾಹನಗಳಿಗೆ ಪಾಸ್ ಅಥವಾ ಫೇಲ್ ಸರ್ಟಿಫಿಕೇಟ್ ನೀಡುತ್ತವೆ. ಯಾವುದೇ ಆರ್​ಟಿಓ ಅಧಿಕಾರಿಗಳು, ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ ಮಾಡಿಸಿಕೊಳ್ಳಬಹುದು‌.

   ನಿಯಮಗಳ ಪ್ರಕಾರ, ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ ಎಫ್​ಸಿ ಮಾಡಿಸಬೇಕು. ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ನಂತರ ಐದು ವರ್ಷಕೊಮ್ಮೆ ಎಫ್​ಸಿ ಮಾಡಿಸಬೇಕು.

   ಇಂಜಿನ್ ಸೌಂಡ್,ಹೊಗೆ ತಪಾಸಣೆ,ಸ್ಪೀಡ್ ಗವರ್ನರ್,ಹೆಡ್ ಲೈಟ್,ಇಂಡಿಕೇಟರ್,ವೈಪರ್,ಹಾರನ್,ಬ್ರೇಕ್ ಲೈಟ್ಸ್,ಪೇಟಿಂಗ್,ಬಾಡಿ ಡೆಟೋರೆಟೆಡ್,ಟೈರ್​ಗಳ ತಪಾಸಣೆ,ವೆಹಿಕಲ್ ವೈಬ್ರೇಷನ್,ಇಂಜಿನ್ ಆಯಿಲ್ ಫಿಟ್ನೆಸ್ .

    ಈ ಹಿಂದೆ ಎಫ್​ಸಿಗೆ ಹೋಗುವ ವಾಹನಗಳಲ್ಲಿ ಎಲ್ಲಾ ಸರಿ ಇದ್ದರೂ ಆರ್​ಟಿಒ ಇನ್ಸ್‌ಪೆಕ್ಟರ್​ಗಳು ಏನಾದರೂ ಕಾರಣ ಹೇಳಿ ಎಫ್​ಸಿ ಫೇಲ್ ಮಾಡಿಸುತ್ತಿದ್ದರು. ಇದೀಗ ಈ ಎಟಿಎಸ್​ಗಳಿಂದ ಆ ರೀತಿ ಮಾಡಲು ಆಗುವುದಿಲ್ಲ. ಪ್ರತಿಯೊಂದನ್ನೂ ಈ ಮಷಿನ್​​ಗಳು ಪರಿಶೀಲನೆ ಮಾಡಲಿವೆ. ಈ ಮಷಿನ್ ಮೂಲಕ ಸ್ಥಳದಲ್ಲೇ ವಾಹನ ಮಾಲೀಕರಿಗೆ ಎಫ್​ಸಿ ಸರ್ಟಿಫಿಕೇಟ್ ದೊರೆಯುತ್ತದೆ. ಈ ಬಗ್ಗೆ ವಾಹನ ಮಾಲೀಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಹೊಸದಾಗಿ ಓಪನ್ ಆಗಿರುವ ಎಟಿಎಸ್ ಸೆಂಟರ್​ಗಳಿಂದ ವಾಹನ ಮಾಲೀಕರಿಗೆ ಕಿರಿಕಿರಿ ತಪ್ಪುವುದರ ಜತೆಗೆ ಹಣ ಉಳಿಯುವುದಂತೂ ಗ್ಯಾರಂಟಿ.

Recent Articles

spot_img

Related Stories

Share via
Copy link
Powered by Social Snap