ತುರುವೇಕೆರೆ:
ತಾಲೂಕಿನ ಇತಿಹಾಸ ಪ್ರಸಿದ್ದ ಮಲ್ಲಾಘಟ್ಟ ಗಂಗಾಧರೇಶ್ವರ ಸ್ವಾಮಿ ದೇವಾಲಯದ 3 ಕಿ.ಮೀ ರಸ್ತೆಯನ್ನು ಡಾಂಬರೀಕೃತಗೊಳಿಸಲಾಗುತ್ತದೆ ಎಂದು ಶಾಸಕ ಮಸಲಾ ಜಯರಾಮ್ ತಿಳಿಸಿದರು.
ತಾಲೂಕಿನ ವೈ.ಟಿ.ರಸ್ತೆಯಿಂದ ಮಲ್ಲಾಘಟ್ಟಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಈ ವ್ಯಾಪ್ತಿಯ ರಸ್ತೆ ಹಲವು ವರ್ಷಗಳಿಂದ ಬರೀ ಮಣ್ಣಿನ ರಸ್ತೆಯಾಗಿತ್ತು, ಇದೀಗ ಎನ್,ಜಿ.ಎನ್.ಆರ್.ವೈ ( ನಮ್ಮ ಗ್ರಾಮ ನಮ್ಮ ರಸ್ತೆ) ಯೋಜನೆಯಡಿ 2.5 ಕೋಟಿ ವೆಚ್ಚದಲ್ಲಿ 3 ಕಿ,ಮೀ ಡಾಂಬರೀಕೃತ ರಸ್ತೆಯಾಗಿ ಮೇಲ್ದರ್ಜೆಗೆ ಏರುತ್ತಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡಲ್ಲಿ ಚಿಕ್ಕತುರುವೇಕೆರೆ, ಮಲ್ಲಾಘಟ್ಟ, ಬೆಸ್ತರಪಾಳ್ಯದ ಜನತೆ ಮುಖ್ಯರಸ್ತೆಯನ್ನು ಸಂಪರ್ಕಿಸಲು ಅನುಕೂಲ ವಾಗಲಿದೆ, ಇದರೊಂದಿಗೆ ಪಟ್ಟಣ ಜನತೆ, ಪ್ರವಾಸಿಗರು ಮಲ್ಲಾಘಟ್ಟ ಕೆರೆ, ಗಂಗಾಧರೇಶ್ವರ ದೇವಾಲಯಕ್ಕೆ ಹೋಗಲು ಸುಗಮ ಸಂಚಾರ ಏರ್ಪಡಲಿದೆ. ಶೀಘ್ರ ಕಾಮಗಾರಿ ಮುಗಿಸುವುದರೊಂದಿಗೆ ಗುಣಮಟ್ಟ ಕಾಯ್ದುಕೊಳ್ಳಲು ಸಂಬಂಧಿಸಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರಲ್ಲಿ ತಿಳಿಸಲಾಗಿದೆ ಎಂದರು.
ಈ ಸಂದರ್ಬದಲ್ಲಿ ಇಂಜಿನಿಯರ್‍ಗಳಾದ ತೇಜುಮೂರ್ತಿ, ಮುನಿಶ್ಯಾಮಯ್ಯ, ಗುತ್ತಿಗೆದಾರರಾದ ಸತೀಶ್, ಜೋತಿಷಿ ದೇವರಾಜು, ಮುಖಂಡ ಈಶಣ್ಣ, ರಾಜಣ್ಣ, ಕೆಂಪರಾಜು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ