ರೌಡಿಶೀಟರ್ ಸುಶಾಂತ್ ಕೊಲೆಗೈದ ಇಬ್ಬರು ಆರೋಪಿಗಳ ಬಂಧನ

0
28

ಬೆಂಗಳೂರು

      ರೌಡಿಶೀಟರ್ ಸುಶಾಂತ್ ಅಲಿಯಾಸ್ ಪೇಯಿ ಕೊಲೆಗೈದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

     ತಲಘಟ್ಟಪುರದ ಅರ್ಜುನ್ ಅಲಿಯಾಸ್ ಗಿಡ(26) ಯೋಗಿಶ್ ಅಲಿಯಾಸ್ ಅಬಿ(28) ಬಂಧಿತ ಆರೋಪಿಗಳಾಗಿದ್ದಾರೆ . ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ.

      ಎರಡು ವಾರಗಳ ಹಿಂದೆ ರೌಡಿಶೀಟರ್ ಸುಶಾಂತ್ ಸ್ನೇಹಿತರ ಜೊತೆ ಬಾರ್‍ಗೆ ಮದ್ಯಪಾನ ಮಾಡಲು ಹೊಡೆಯಲು ಹೋಗಿದ್ದ ವೇಳೆ ಸ್ನೇಹಿತರ ನಡುವೆ ಕುಡಿತದ ವಿಷಯಕ್ಕೆ ಗಲಾಟೆಯಾಗಿ ಸುಶಾಂತ್‍ನನ್ನು ಆತನ ಸ್ನೇಹಿತರಾದ ಅರ್ಜುನ್ ಹಾಗೂ ಯೋಗೀಶ್ ಕೊಲೆ ಮಾಡಿದ್ದರು.

     ಆರೋಪಿ ಗಿಡನಿಗೆ ಕೊಲೆಯಾದ ಪೇಯಿ ಕಳ್ಳ ಕಳ್ಳ ಎಂದು ಹಂಗಿಸುತ್ತಿದ್ದ ಇದೇ ವಿಚಾರವಾಗಿ ಜಗಳ ತೆಗೆದು ಇನ್ನಿಬ್ಬರ ಜೊತೆ ಸೇರಿ ಕೊಲೆ ಮಾಡಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ ಸುಬ್ರಹ್ಮಣ್ಯಪುರ ರೌಡಿಶೀಟರ್ ಆಗಿದ್ದ ಸುಶಾಂತ್ ಮೇಲೆ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೆಂಗೇರಿ, ಆರ್.ಆರ್ ನಗರ, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಸುಶಾಂತ್ ಮೇಲೆ ಪ್ರಕರಣಗಳಿವೆ.

     ಪಿಯು ವಿದ್ಯಾರ್ಥಿ ಸಾವು

       ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಪಿಯುಸಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಜಾನ್ ಆಸ್ಪತ್ರೆ ಬಳಿ ನಡೆದಿದೆ.

       ಚಾಮರಾಜಪೇಟೆ ಪ್ರವೀಣ್ ಕುಮಾರ್ (19)ಎಂದು ಮೃತಪಟ್ಟ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರವೀಣ್ ಬೆಳ್ಳಂದೂರಿನ ಖಾಸಗಿ ಕಂಪನಿಯೊಂದರಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದ. ಕೆಲಸ ಮುಗಿಸಿಕೊಂಡು ರಾತ್ರಿ 9.40ರ ವೇಳೆ ಸೇಂಟ್ ಜಾನ್ ಆಸ್ಪತ್ರೆಯ ಐಶ್ವರ್ಯ ಜಂಕ್ಷನ್ ಬಳಿ ಬೈಕ್‍ನಲ್ಲಿ ಮನೆಗೆ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಆಡುಗೋಡಿ ಸಂಚಾರ ಪೆÇಲೀಸರು ಕಾರು ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here