ಬೆಂಗಳೂರು
ಆರ್ ಟಿ ಒ ಅಧಿಕಾರಿಯ ಸಹಿಯನ್ನೇ ಫೋರ್ಜರಿ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಆನಂದ್ ಹಾಗೂ ಇಲಿಯಾಸ್ ಪಾಷಾ ಬಂಧಿತರು. ಬಂಧಿತರು ರಿಜಿಸ್ಟ್ರೇಷನ್ ಆದ ಹೊಸ ಆಟೋಗಳಿಗೆ ಪರ್ಮಿಟ್ ಕೊಡಿಸುವ ನೆಪದಲ್ಲಿ ಸುಲಿಗೆ ದಂಧೆ ನಡೆಸುತ್ತಿದ್ದರು. ಇವರು ಓದಿದ್ದು ಬರೀ ಎಸ್ಸೆಸ್ಸೆಲ್ಸಿ ಆದರೂ ಶಾಂತಿನಗರ ಆರ್ ಟಿ ಒ ಅಧಿಕಾರಿಯ ಸಹಿಯನ್ನೇ ಫೋರ್ಜರಿ ಮಾಡಿ ಪರ್ಮಿಟ್ ಕೊಡಿಸುತ್ತಿದ್ದರು.ಕೋರಮಂಗಲ ಪೊಲೀಸರು ಬಂಧಿತರಿಂದ 7 ಹೊಸ ಆಟೋ ಹಾಗೂ ನಕಲಿ ಸೀಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








