ಹಾವೇರಿ :
ಕಾಂಗ್ರೇಸ್ ಪಕ್ಷದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿಆರ್ ಪಾಟೀಲ ಅವರ ಪರವಾಗಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ನಗರದಲ್ಲಿ ಬಾರಿ ಬಿರುಸಿನ ಪ್ರಚಾರ ಕೈಗೊಂಡರು. ಡಿಆರ್ ಪಾಟೀಲ ಜನಪರ ಕಾಳಜಿ ಹೊಂದಿದ್ದು, ಜನಸೇವೆಯೇ ಅವರ ಜೀವಾಳವಾಗಿದೆ.
ನಿರಂತರವಾಗಿ ಜನರ ಸಂಪರ್ಕದಲ್ಲಿರುವ ಜನಪ್ರತಿನಿಧಿಯ ಅವಶ್ಯಕತೆ ಇದೆ. ನಿಮ್ಮೆಲ್ಲರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮವಹಿಸಲಿದ್ದಾರೆ. ಗಾಂಧಿ ತತ್ವದ ಸಿದ್ಧಾಂತದಡಿ ಕೆಲಸ ಮಾಡೋ ಡಿಆರ್ ಪಾಟೀಲ ಗೆಲ್ಲಿಸುವಂತೆ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಂಎಂ ಹಿರೇಮಠ.ಪ್ರೇಮಾ ಎಸ್ ಪಾಟೀಲ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.