ಬೆಂಗಳೂರು
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ರನ್ ವೇ ಅನ್ನು ಮುಂದಿನ 8 ತಿಂಗಳುಗಳ ಕಾಲ ಸ್ಥಗಿತಗೊಳ್ಳಲಿದೆ ೆಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ರನ್ ವೇ (09ಎಲ್/27ಆರ್)ಯನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಮಾರ್ಚ್ 26ರಿಂದ ನವೆಂಬರ್ವರೆಗೆ ರನ್ವೇ ಬಂದ್ ಆಗಿರಲಿದೆ.ಈ ಅವಧಿಯಲ್ಲಿ ಇತ್ತೀಚೆಗೆ ಕಾರ್ಯಾರಂಭಗೊಂಡಿರುವ ನೂತನ ರನ್ವೇ ’09ಆರ್/27 ಎಲ್’ ಲಭ್ಯವಿರುತ್ತದೆ. ರನ್ವೇ ಕಾಮಗಾರಿಯಿಂದ ವಿಮಾನಗಳ ಹಾರಾಟ, ನಿಲ್ದಾಣದ ಕಾರ್ಯಾಚರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಾಧಿಕಾರ ತನ್ನ ಪ್ರಕಟಣೇಯಲ್ಲಿ ತಿಳಿಸಿದೆ.
ರನ್ ವೇ ಕಾಮಗಾರಿ ಹಿನ್ನೆಲೆಯಲ್ಲಿ ನಿಲ್ದಾಣವು ಅಗತ್ಯ ಸಿದ್ಧತೆಗಳನ್ನು ನಿಯಮಾನುಸಾರ ಮಾಡಿಕೊಳ್ಳುವ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶನ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
