ತುಮಕೂರು
ಭಾರತೀಯ ಭಾಷಾ ಪತ್ರಿಕೆಗಳ ಒಕ್ಕೂಟದ ವಾರ್ಷಿಕ ಮಹಾಸಭೆಯು ಕೋಲ್ಕತ್ತಾದ ಬಾಂಡ್ರಿಯ ವಿಸಿಟೆಲ್ ಹೋಟೆಲ್ ನ ಸಭಾಂಗಣದಲ್ಲಿ ಆರಂಭವಾಗಿದ್ದು ಬುಧವಾರ ಸಭೆಯಲ್ಲಿ ಮುಂದಿನ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಪ್ರಜಾಪ್ರಗತಿ ದಿನ ಪತ್ರಿಕೆಯ ಎಸ್ ನಾಗಣ್ಣ ಅವರನ್ನು ಮುಂದುವರೆಸಿ ಅನುಮೋದಿ ಸಲಾಯಿತು. ಈ ಸಂದರ್ಭದಲ್ಲಿ ಇಲ್ನಾ ರಾಷ್ಟ್ರೀಯ ಅಧ್ಯಕ್ಷ ಪರೇಶ್ ನಾಥ್,ಉಪಾಧ್ಯಕ್ಷ ವಿವೇಕ್ ಗುಪ್ತಾ,ಪ್ರಕಾಶ್ ಪೊಹರೆ ಮುಂತಾದವರು ಉಪಸ್ಥಿತರಿದ್ದರು.
