ವಿಶೇಷ ಅನುದಾನ ಬಿಡುಗಡೆಗೆ ಡಿಸಿಎಂಗೆ ಶಾಸಕರ ಮನವಿ..!

ಮಧುಗಿರಿ

     ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕಾರದ ಆದಾಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ರಾಜ್ಯದ ಆರ್ಥಿಕ ಸ್ಥಿತಿಗತಿಯೂ ಕಠಿಣವಾಗಿದೆ ಎಂದು ಉಪ ಮುಖ್ಯಮಂತ್ರಿ ಎಂ. ಗೋವಿಂದ ಕಾರಜೋಳ ತಿಳಿಸಿದರು.ಜಿಲ್ಲೆಯ ಪಾವಗಡ ಪಟ್ಟಣಕ್ಕೆ ತರೆಳುವ ಮಾರ್ಗ ಮಧ್ಯೆ ಪಟ್ಟಣದ ನಿರೀಕ್ಷಣಾ ಮಂದಿರದ ಸಭಾಂಗಣಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಬಿಜೆಪಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಕಳೆದ ಆಗಸ್ಟ್‍ನಲ್ಲಿ ಪ್ರವಾಹ ಉಂಟಾಗಿದ್ದರಿಂದ 35 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ. ಇದೀಗ ಕೊರೊನಾ ಸಾಂಕ್ರಮಿಕ ರೋಗ ಹರಡದಂತೆ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ಸರ್ಕಾರದ ಭೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ.

     ರಸ್ತೆ, ಸೇತುವೆಗಳ ತುರ್ತು ದುರಸ್ಥಿಗಾಗಿ 750 ಕೋಟಿ ಬಿಡುಗಡೆ ಮಾಡಿದ್ದು, ಇದರ ಕಾಮಗಾರಿ ಪ್ರಗತಿಯಲ್ಲಿದೆ. 20-21ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಲಾಕ್ ಡೌನ್ ನಿಂದಾಗಿ ಹೊಸ ಕಾಮಗಾರಿಗಳಯನ್ನು ಪ್ರಾರಂಭಿಸಿಲ್ಲ, ವಲಸೆ ಕಾರ್ಮಿಕರು ಅವರ ತವರು ರಾಜ್ಯಗಳಿಗೆ ತೆರಳಿರುವ ಪರಿಣಾಮ ಕೆಲಸಗಳು ತಾತ್ಕಾಲಿವಾಗಿ ಸ್ಥಗಿತಗೊಂಡಿವೆ. ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದರು.

     ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕಾಂಗ್ರೇಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರಾಗಿದ್ದ 22 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಬಿ.ಜೆ.ಪಿ ಸರ್ಕಾರ ತಡೆಯೊಡ್ಡಿದೆ. ತಕ್ಷಣ ಈ ವಿಶೇಷ ಅನುಧಾನವನ್ನು ಬಿಡುಗಡೆ ಮಾಡಬೇಕೆಂದು ಉಪಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

     ಸಮಾಜ ಕಲ್ಯಾಣ ಇಲಾಖಾ ವಾರ್ಡನ್ ಸಿಬ್ಬಂದಿಗಳು ಇಲಾಖೆಯಲ್ಲಿ 1985ರ ಸಿ ಅಂಡ್ ಆರ್ ನಿಯಮಗಳ ಬದಲಾವಣೆ ಕೋರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಬೇರ್ಪಟ್ಟಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಿ ಅಂಡ್ ಆರ್ ನಿಯಮಗಳ ರೀತಿಯಲ್ಲಿ ವಾರ್ಡನ್‍ಗಳಿಗೆ ಮುಂಬಡ್ತಿ ನೀಡಬೇಕೆಂದು ಜಿಲ್ಲಾ ವಾರ್ಡನ್‍ಗಳ ಸಂಘದ ವತಿಯಿಂದ ಚಂದ್ರಶೇಖರ್ ರೆಡ್ಡಿ ಹಾಗೂ ನೌಕರರ ಸಂಘದ ಖಜಾಂಚಿ ಚಿಕ್ಕರಂಗಪ್ಪ ಸಚಿವರಿಗೆ ಮನವಿ ಸಲ್ಲಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಎ.ನಾರಾಯಣ ಸ್ವಾಮಿ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ಡಾ.ಕೆ.ವಂಶಿಕೃಷ್ಣ, ಲೋಕೊಪಯೋಗಿ ಇಲಾಖೆಯ ಇಇ ವಿರೂಪಾಕ್ಷಯ್ಯ ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿ ದೇವಿ, ಡಿವೈಎಸ್‍ಪಿ ಪ್ರವೀಣ್, ತಹಶೀಲ್ದಾರ್ ಡಾ.ಜಿ.ವಿಶ್ವನಾಥ್, ಇಒ ದೊಡ್ಡಸಿದ್ದಪ್ಪ, ಮುಖ್ಯಾಧಿಕಾರಿ ಅಮರನಾರಾಯಣ, ಜಿ.ಪಂ ಸದಸ್ಯ ಹೆಚ್.ಕೆಂಚಮಾರಯ್ಯ, ತಾಲ್ಲೂಕು ಬಿ.ಜೆ.ಪಿ ಮಂಡಳಾಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ ಮುಖಂಡರಾದ ಡಾ.ಲಕ್ಷ್ಮಿಕಾಂತ, ಪುರಸಭೆ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್ ಬಾಬು, ಕೆ.ನಾರಾಯಣ, ನರಸಿಂಹಮೂರ್ತಿ,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link