ರಾಣಿಬೆನ್ನೂರು
ಹಾವೇರಿ ಜಿಲ್ಲೆಯ ಬ್ಯಾಡಗಿ ನಗರದಲ್ಲಿ 2ನೇ ದಿನವಾದ ಭಾನುವಾರದಂದು ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಜನರ ಭರವೋ ಭರವಾಗಿದ್ದುದ್ದು ಕಂಡು ಬಂದಿತು. ಜಿಲ್ಲಾ ಸಾಹಿತ್ಯ ಪರಿಷತ್ತಿನ್ನ ಅಧ್ಯಕ್ಷರೆಂದು ಹೇಳಿಕೋಳ್ಳುತ್ತಿರುವ ಲಿಂಗಯ್ಯ ಹಿರೇಮಠ ರವರು ಜಿಲ್ಲೆಯ ಸಾಹಿತಿಗಳನ್ನು, ಕವಿಗಳನ್ನು, ಲೇಖಕರನ್ನು, ವಿವಿಧ ಸಂಘಟನೆಗಳ ಸಂಘಟಿಕರನ್ನು ಸಂರ್ಪೂಣ ಕಡೆಗಣಿಸಿರುವರೆಂಬುದಕ್ಕೆ ಬ್ಯಾಡಗಿ ನಗರದಲ್ಲಿ ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಕಂಡು ಜನರ ಭರವೇ ಜಿವಂತ ಸಾಕ್ಷಿಯಾಗಿತ್ತು.
ಹುಚ್ಚ ಮಹ್ಮದ ಬಿನ್ ತುಘಲಕ್ಕನ ರಾಜಕಾರಣ ಹೇಗಿತ್ತು ಎಂಬುದನ್ನು ನೆನಪಿಸಿ ಕೊಂಡರೆ ಸಾಕು. ಆತನ ರಾಜಕೀಯ ದುರಾಡಳಿತವನ್ನೆಲ್ಲಾ ಎತ್ತಿತೋರಿಸುವ ಹಾಗೂ ಅದರ ಅನುಭವವನ್ನೆಲ್ಲಾ ಜಿಲ್ಲೆಯ ಸಮಸ್ತ ಸಾಹಿತಿಗಳಿಗೆ 2 ದಿನಗಳಕಾಲ ಉಣಬಡಿಸಿದ್ದಾರೆ ಹಾವೇರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೆಂದು ಹೇಳಿಕೊಳ್ಳುತ್ತಿರುವ ಲಿಂಗಯ್ಯನವರು.
ಕೆಂಪುಬಣ್ಣದ ಖಾಲಿ ಕುಚ್ರ್ಚಿಗಳಿಗೆ ಸಾಹಿತ್ಯ ಬೋಧನೆ:- ರಾಜ್ಯದಲ್ಲಿಯೇ ಕೆಂಪು ಮೆಣಸಿನ ಕಾಯಿ ಮಾರುಕಟ್ಟೆಯನ್ನು ಹೊಂದಿರುವ ಹಾಗೂ ಏಷಿಯಾ ಖಂಡದಲ್ಲಿಯೇ ತನ್ನ ಛಾಪನ್ನು ಮೂಡಿಸಿಕೊಂಡಿರುವ ಬ್ಯಾಡಗಿ ನಗರದಲ್ಲಿ ನಡೆದ ಜಿಲ್ಲಾ 11ನೇ ಸಾಹಿತ್ಯ ಸಮ್ಮೆಳನ ನಡೆದದ್ದು ಸಾಹಿತಿಗಳಿಗಾಗಿ, ಜನರಿಗಾಗಿ, ಸಾಹಿತ್ಯಾಸಕ್ತರಿಗಾಗಿ ನಡೆಯಲಿಲ್ಲ. ಕೇವಲ ಬ್ಯಾನರ್ ಮತ್ತು ಕೆಲವು ಪತ್ರಿಕೆಗಳಲ್ಲಿ ಪ್ರಚಾರಕ್ಕಾಗಿ ಮಾತ್ರ ನಡೆದಿದ್ದೆ ಎಂದು ಅನೇಕ ಸಂಘಟನೆಗಳ ಹೋರಾಟಗಾರರು, ಸಾಹಿತ್ಯಾಸಕ್ತರು 2 ದಿನಗಳ ಕಾಲ ನಡೆದ ಸಮ್ಮೆಳನವನ್ನು ಕುರಿತು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ಕಳೆದ 3 ವರ್ಷಗಳ ಹಿಂದೆ ನಡೆದ ಜಿಲ್ಲಾ ಕಸಾಪ ಚುನಾವಣೆಯಲ್ಲಿ ತಮಗೆ ಮತ ನೀಡಿರು ಹಾಗೂ ಮುಂದಿನ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶ್ರಮಿಸುತ್ತಿರುವವರೆಂದು ತಾವು ಗುರುತಿಸಿಕೊಂಡಿರುವ ತಮ್ಮ ಜಾತಿ-ಜನಾಂಗದವರಿಗೆ ಮಾತ್ರ ಜಿಲ್ಲಾ ಕಸಾಪ ಅಧ್ಯಕ್ಷ ಮಣೆ ಹಾಕಿದ್ದಾರೆಂಬುದಕ್ಕೆ ಬ್ಯಾಡಗಿ ನಗರದಲ್ಲಿ 2 ದಿನ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ಜೀವಂತ ಸಾಕ್ಷಿಯಾಗಿದೆ.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರ ಮಾತಿಗೆ ಉತ್ತರ:- ಭಾನುವಾರ ನಡೆದ 4 ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಮಾರುತಿ ಶಿಡ್ಲಾಪುರ ರವರು ಮಾತನಡುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ 3 ಸಾವಿರ ಕಸಾಪ ಆಜೀವ ಸದಸ್ಯರಿದ್ದಾರೆ. ಇಂದು ಸಮ್ಮೇಳನಕ್ಕೆ ಜನರು ಬರದಿರುವುದು ವಿಷಾದನಿಯವೆನ್ನುತ್ತಾರೆ.
ಬ್ಯಾಡಗಿಯಲ್ಲಿ ನಡೆದ ಜಿಲ್ಲಾ ಸಮ್ಮೇಳನ ಕುರಿತು ಮುದ್ರಿಸಿದ್ದ ಆಮಂತ್ರಣಪತ್ರಿಕೆ ಬ್ಯಾಡಗಿ ತಾಲೂಕಿನ ಹಾಗೂ ನಗರದ ಸಾವಿರಾರು ಜನ ಕಸಾಪ ಆಜೀವ ಸದಸ್ಯರಿಗೇ ಮುಟ್ಟಿಲ್ಲ ?. ಎಂದಮೇಲೆ ಜಿಲ್ಲೆಯ ಹಾಗೂ ಬ್ಯಾಡಗಿ ತಾಲೂಕಿನ ಜನ ಹೇಗೆ ಬರುತ್ತಾರೆ ?. ಸಮ್ಮೇಳನಕ್ಕೆ ಎಂದು ಮಾರುತಿ ಶಿಡ್ಲಾಪುರವರ ವಿರುದ್ದ ಅನೇಕ ಸಾಹಿತಿಗಳು, ಸಂಘಟಿಕರು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ಲಿಂಗಯ್ಯನವರ ಗುಂಪಿನ ಸಮ್ಮೇಳನ :- ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷರೆಂದು ಹೇಳಿಕೊಳ್ಳುತ್ತಿರುವ ಲಿಂಗಯ್ಯ ಬಿ ಹಿರೇಮಠ ರವರು ಜಿಲ್ಲೆಯ ಕಸಾಪ ಅಜೀವ ಸದಸ್ಯರನ್ನು, ಸಮಸ್ತ ಸಾಹಿತಿಗಳನ್ನು, ಕಲಾವಿಧರನ್ನು, ಲೆಖಕರನ್ನು, ಕವಿಗಳನ್ನು, ಚುಟುಕು ಸಾಹಿತ್ಯದ ಸಮಸ್ತ ಸದಸ್ಯರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಅಣತಿಗೆ ತಕ್ಕಂತೆ ಕುಣಿಯುವ ಕೇವಲ ಬೆರಳೆಣಿಕೆಯ ಶಿಕ್ಷಕರೆಂಬ ಹಾಗೂ ರಾಜಕೀಯ ಮುಖಂಡರಂತೆ ವರ್ತಿಸುತ್ತಿರುವ ಗೋಮುಖ ವ್ಯಾಘ್ರರಂತಹ ಮೂರ್ಖರ ಕೈಯಲ್ಲಿ ಆಡಳಿತ ಹಾಗೂ ಸಮ್ಮೇಳನ ಯಶಸ್ವಿಗೊಳಿಸುವ ಜವ್ಹಾಬ್ದಾರಿಯನ್ನು ನೀಡಿದ್ದಾರೆ. ಆದ ಕಾರಣ ಸಮ್ಮೇಳನಕ್ಕೆ ಜಿಲ್ಲೆಯಿಂದಾಗಲಿ ಬ್ಯಾಡಗಿ ತಾಲೂಕಿನಿಂದಾಗಲಿ ಸಾಹಿತಿಗಳು, ಸಾಹಿತ್ಯಾಸಕ್ತರು ಬಂದಿಲ್ಲವೆಂದು, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವಿಣ ಶೆಟ್ಟಿ ಬಣದ ಅಧ್ಯಕ್ಷ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಆರೋಪಿಸುತ್ತಿದ್ದಾರೆ.