ಅನಂತಕುಮಾರ ನಿಧನಕ್ಕೆ ಸಂತಾಪ ಸೂಚಿಸಿದ ಬಿಜೆಪಿ ಮುಖಂಡರು

ಶಿಗ್ಗಾವಿ

        ಕೇಂದ್ರ ಸಚಿವ ಅನಂತಕುಮಾರ ನಿಧನ ಹೊಂದಿದ ಪ್ರಯುಕ್ತ ತಾಲೂಕ ಪಂಚಾಯತಿಯಲ್ಲಿರುವ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ದೇವಣ್ಣ ಚಾಕಲಬ್ಬಿ ನೇತೃತ್ವದಲ್ಲಿ ಬಿಜೆಪಿ ಚುನಾಯಿತ ಪ್ರತಿನಿಧಿಗಳು ಕಾರ್ಯಕರ್ತರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು.

          ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಸ್ಥಿತ್ವ ಬೇರೂರುವುದೇ ಎಂಬ ವಿಚಾರವಿದ್ದಾಗ ಆ ಸಂದರ್ಭದಲ್ಲಿ ಹೋರಾಟಗಳ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗು ಅನಂತಕುಮಾರ ಅವರ ಸಂಘಟಿತ ದುಡಿಮೆ ಇಲ್ಲದಿದ್ದರೆ ಇಂದು ಬಿಜೆಪಿ ಪಕ್ಷ ರಾಜ್ಯದಲ್ಲಿ ಉನ್ನತಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂದರು.

           ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಮಾತನಾಡಿ, ನಮ್ಮ ತಾಲೂಕಿನಲ್ಲಿ ಕೂಡಾ ಬಿಜೆಪಿ ಅಸ್ಥಿತ್ವಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಚಿವ ಅನಂತ ಕುಮಾರ ಕೂಡಾ ಪ್ರಮುಖರು ಎಂದರು. ಪುರಸಭೆ ಉಪಾಧ್ಯಕ್ಷ ಪರಶುರಾಮ ಸೊನ್ನದ ಮಾತನಾಡಿ, ರೈತರ ಮೇಲಿನ ಅವರ ವಿಶೇಷ ಕಾಳಜಿ ರಸಗೊಬ್ಬರ ಮಾಫಿಯಾಕ್ಕೆ ಜಗ್ಗದೇ ಬೇವು ಲೇಪಿತ ಯೂರಿಯಾ ತಂದದ್ದು ಅವರ ದಿಟ್ಟತನಕ್ಕೆ ಮತ್ತೊಂದು ನಿದರ್ಶನ ಎಂದರು. ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ, ಅವರು ನಮ್ಮ ಶಿಗ್ಗಾವಿಗೆ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರೊಂದಿಗೆ ಹಲವಾರು ಬಾರಿ ಬಂದು ಪಕ್ಷವನ್ನು ಬಲಪಡಿಸುವ ಮೂಲಕ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದರು ಅವರೊಂದಿಗೆ ಹಲವಾರು ಬಾರಿ ಮಾತನಾಡಿದ್ದೇ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, ಆವರ ಆತ್ಮಕ್ಕೆ ಶಾಂತಿ ದೊರಕಲಿ ಕುಟುಂಬ ವರ್ಗಕ್ಕೆ ನೊವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

         ಮಾಜಿ ಜಿಪಂ ಅಧ್ಯಕ್ಷ ಮಲ್ಲೇಶಪ್ಪ ಹರಿಜನ ಮಾತಾನಡಿ, ಶ್ರೀರಾಮಜನ್ಮ ಭೂಮಿ ಹೋರಾಟ ಹಾಗೂ ಈದ್ಗಾ ರಾಷ್ಟ್ರಧ್ವಜ ಹೋರಾಟಗಳಲ್ಲಿ ಸಚಿವ ಅನಂತ ಕುಮಾರ ಪಾತ್ರ ಪ್ರಮುಖವಾಗಿತ್ತು ಹಾಗೂ ಅವರು ರೈತರ ಬಗ್ಗೆ ವಿಶೇಷ ಕಾಳಜಿನ ಹೊಂದಿದ್ದರು ಎಂದರು.
ನವಿನ ಸಾಸನೂರ ಮಾತನಾಡಿ, ವಿದ್ಯಾರ್ಥಿ ಪರಿಷತ್ ಸಂಘಟನೆಯಿಂದ ಆರಂಭವಾದ ಅವರ ರಾಜಕೀಯ ಜೀವನ ಅವರನ್ನು ದೇಶದ ಒಬ್ಬ ಹಿರಿಯ ಹಾಗೂ ಮುತ್ಸದ್ದಿ ರಾಜಕೀಯ ನಾಯಕರನ್ನಾಗಿಸಿತು ಎಂದು ಹೇಳಿದರು.

         ಜಿಪಂ ಸದಸ್ಯರಾದ ಶೋಭಾ ಗಂಜಿಗಟ್ಟಿ, ಶಿವಾನಂದ ಮ್ಯಾಗೇರಿ, ಅರ್ಜಪ್ಪ ಲಮಾಣಿ, ಕಾಳಪ್ಪ ಬಡಿಗೇರ, ರಮೇಶ ಬೇಡ್ಕಿ, ಡಿ.ಎಸ್.ಎಸ್.ತಾಲೂಕಾದ್ಯಕ್ಷ ಹನಮಂತಪ್ಪ ಫ ಹರಿಜನ, ಪ್ರ.ಕಾ. ಸಂತೋಷ ದೊಡ್ಡಮನಿ, ಕುಮಾರಸ್ವಾಮಿ ಹಿರೇಮಠ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ, ಪ್ರತೀಕ. ಟಿ.ಕೆ, ಶಂಭು ನೆರ್ತಿ, ಪ್ರಕಾಶ ಬಡಿಗೇರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link