ಖ್ಯಾತ ಸಾಹಿತಿ, ರಂಗಕರ್ಮಿ ಗಿರೀಶ್ ಕಾರ್ನಾಡ್ ಅಗಲಿಕೆ : ಸಂತಾಪ

 ತುಮಕೂರು
     ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟು ಕನ್ನಡದ ಹಿರಿಮೆಯನ್ನು ಉತ್ತುಂಗಕ್ಕೇರಿಸಿದ ಹೆಸರಾಂತ ಸಾಹಿತಿ, ರಂಗಕರ್ಮಿ, ಚಲನಚಿತ್ರ ಹಿರಿಯ ನಟ, ವಿಮರ್ಶಕ ಡಾ|| ಗಿರೀಶ್ ಕಾರ್ನಾಡ್ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ತಿಳಿಸಿದರು.
    ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಂದು ನಡೆಸಿ ಸಂತಾಪ ಸೂಚನಾ ಸಭೆಯಲ್ಲಿ ಅವರು ಮಾತನಾಡುತ್ತಾ, ಸಮಾಜದಲ್ಲಿ ವೈಚಾರಿಕತೆಯನ್ನು ಬಿಂಬಿಸುವ ಅವರ ಸಾಹಿತ್ಯ ಜನ-ಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಇದೆ.  ಚಲನಚಿತ್ರ ನಟ, ನಿರ್ದೇಶಕರಾಗಿ ಸಲ್ಲಿಸಿರುವ ಅವರ ಸೇವೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.   ಕನ್ನಡ ಭಾಷಾ ಲೋಕಕ್ಕೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು. 
    ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡಿ ಕಾರ್ನಾಡರು ರಚಿಸಿರುವ ಅಂಜುಮಲ್ಲಿಗೆ, ಯಯಾತಿ, ಹಯವದನ, ತಲೆದಂಡ, ನಾಗಮಂಡಲ ನಾಟಕ ಕೃತಿಗಳು ಭಾರಿ ಜನಪ್ರಿಯತೆ ಪಡೆದುಕೊಂಡಿವೆ.  ರಂಗಕರ್ಮಿಯಲ್ಲದೆ ಚಿತ್ರ ನಟನೆಯಲ್ಲೂ ಗುರುತಿಸಿಕೊಂಡಿದ್ದ ಇವರು ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ಕೆಲಸ ಮಾಡಿದ್ದರು. ಅವರ ನಿಧನವಾರ್ತೆ ಸಾಹಿತಿಗಳು, ರಂಗಕರ್ಮಿ, ನಾಟಕಕಾರರಿಗೆ ಅಪಾರ ನೋವಿನ ಸಂಗತಿಯಾಗಿದೆ.  ಎಂದು ತಮ್ಮ ಸಂತಾಪ ಸೂಚಿಸಿದರು.
     ಪತ್ರಕರ್ತ ರಾಮರೆಡ್ಡಿ ಅಳವಂಡಿ ಮಾತನಾಡಿ ನಾಟಕ, ಸಿನೆಮಾ, ಸಾಹಿತ್ಯ ಕ್ಷೇತ್ರ ಕೊಂಡಿಯಾಗಿದ್ದರು.  ಉತ್ತರ ಕರ್ನಾಟಕದ ಭಾಷೆಯ ಸೊಗಡಿನಿಂದ ಜನಮನ್ನಣೆ ಗಳಿಸಿದ್ದರು ಎಂದು ತಿಳಿಸಿದರು.
      ಈ ಸಂದರ್ಭದಲ್ಲಿ ಶ್ರೀಹರ್ಷ ಸೋರಲಮಾವು, ಆರ್.ಎಸ್.ಐಯ್ಯರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರ್. ನಾಗರಾಜ್, ನಿರ್ದೇಶಕರುಗಳಾದ ಸಿ.ಎಸ್. ಕುಮಾರ, ಸಿ. ರಂಗನಾಥ, ಸಿ.ಟಿ.ಎಸ್. ಗೋವಿಂದಪ್ಪ,  ಇತರೆ ಪದಾಧಿಕಾರಿಗಳು, ಸದಸ್ಯರು, ವಾರ್ತಾ ಇಲಾಖೆ ಸಿಬ್ಬಂದಿಗಳು, ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link