ಬಿಜೆಪಿ ಜಿಲ್ಲಾ ಘಟಕದಿಂದ ಪರಿಕ್ಕರವರಿಗೆ ಭಾವಪೂರ್ಣ ಶ್ರದ್ಧಾಂಜಲಿ..!!

ಹಾವೇರಿ :

         ನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಭಾರತದ ಮಾಜಿ ರಕ್ಷಣಾ ಸಚಿವರು ಹಾಗೂ ಗೋವಾ ರಾಜ್ಯ ಮುಖ್ಯಮಂತ್ರಿಗಳಾದ ಮನೋಹರ ಪರಿಕ್ಕರ ರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.ಪಕ್ಷದ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ಮಾತನಾಡಿ ಮನೋಹರ ಪರಿಕ್ಕರವರು ಭಾರತದ ರಕ್ಷಣಾ ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸದ್ದರು.

          ಹಾಗೂ ತಮ್ಮ ಅನಾರೋಗ್ಯದ ಅವಧಿಯಲ್ಲಿಯು ಸ್ಥೈರ್ಯವನ್ನು ಕಳೆದುಕೊಳ್ಳದೆ, ರಾಜ್ಯದ ಜವಾಬ್ದಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸದ್ದರು. ಪರಿಕ್ಕರವರ ಜೀವನ ಶೈಲಿಯಿಂದ ನಮ್ಮ ಪಕ್ಷದ ಕಾರ್ಯಕರ್ತರು ಕಲಿಯುವುದು ಬಹಳಷ್ಟು ಇದೆ. ವ್ಯಕ್ತಿ ಎಷ್ಟ ದೊಡ್ಡವನಾಗಿದ್ದರು ಸಾಮಾನ್ಯ ಜನರೊಂದಿಗೆ ಹೇಗೆ ಬೆರೆಯಬೇಕು ಎಂಬುದನ್ನು ಪರಿಕ್ಕರವನ್ನು ನೋಡಿ ಕಲಿಯಬೇಕು. ಅವರ ಅಗಲಿಕೆ ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರ ಕುಟುಂಬಕ್ಕೆ ಸಾವಿನ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

          ಈ ಸಂಧರ್ಭದಲ್ಲಿ ಸಿದ್ದರಾಜ ಕಲಕೋಟಿ, ರವಿ ಮೆಣಸಿನಕಾಯಿ, ಡಾ. ಸಂತೋಷ ಆಲದಕಟ್ಟಿ, ವಿಜಕುಮಾರ ಚಿನ್ನಿಕಟ್ಟಿ, ರಮೇಶ ಪಾಲನಕರ, ಪ್ರಕಾಶ ಉಜನಿಕೊಪ್ಪ, ಪ್ರಕಾಶ ಪತ್ತಾರ, ಬಸವರಾಜ ಮಾಸೂರ, ಬಸವರಾಜ ತುಪ್ಪದ, ಗಣೇಶ ಮಾವೂರಕರ, ಆನಂದ ಮಿಸಿಹೊನ್ನಪ್ಪನವರ, ಮಂಜುನಾಥ ತಾಂಡೂರ, ಸಲಿಂ, ನಿಂಗಪ್ಪ ಕೆಂಗನಿಂಗಪ್ಪನವರ, ನಿಂಗಪ್ಪ ಕರೆಮ್ಮನವರ, ಮಂಜಪ್ಪ ಹರಪನಹಳ್ಳಿ, ಹೇಮಂತ ಮರ್ಗಿ, ಹೊನ್ನಪ್ಪ ಅಗಸಿಬಾಗಿಲು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link