ವೀರ ಯೋಧರಿಗೆ ಭಾವಪೂರ್ಣ ಶ್ರಧಾಂಜಲಿ!

ಕೊಟ್ಟೂರು

        ಜಮ್ಮುಕಾಶ್ಮಿರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರಗಾಮಿಗಳು ಭಾರತೀಯ ವೀರ ಯೋಧರನ್ನು ಹತ್ಯೆಗೈದದ್ದನ್ನು ಖಂಡಿಸಿ ಇನಲ್ಲಿ ಹಸಿರು ಹೊನಲು ತಂಡ ಯುವ ಬ್ರಿಗೇಡ್, ಹಾಗೂ ಕೊಟ್ಟೂರೇಶ್ವರ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳು ಮೆಣದಬತ್ತಿ ಹಿಡಿದು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು.

        ಪಟ್ಟಣದ ಉಜ್ಜಿನಿ ಸರ್ಕಲ್‍ನಿಂದ ನೂರಾರು ಜನರು ಕೈಯಲ್ಲಿ ಮೆಣದ ಬತ್ತಿಹಿಡಿದುಕೊಂಡು ಗಾಂಧಿ ಸರ್ಕಲ್, ಬಸ್ ನಿಲ್ದಾಣಕ್ಕೆ ತಲುಪಿದ ಮೆರವಣಿಗೆಯಲ್ಲಿ ಉಗ್ರಗಾಮಿಗಳಿಗೆ ದಿಕ್ಕಾರ ಕೂಗಿ ಭಾರತೀಯ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಭಾವಪೂರ್ಣ ಶ್ರಧಾಂಜಲಿ ಸಲ್ಲಿಸಿದರು..

          ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು 40 ಸೈನಿಕರನ್ನು ಮೋಸದಿಂದ ಹತ್ಯೆ ಮಾಡಿರುವುದಕ್ಕೆ ಪ್ರಾತೀಕವಾಗಿ 400 ಪಾಕಿಸ್ತಾನಿ ಸೈನಿಕರನ್ನು ಉಗ್ರಾಮಿಗಳನ್ನು ನಮ್ಮ ಸೈನಿಕರು ಹತ್ಯೆಗೈಯಲ್ಲಿದ್ದಾರೆ ಎಂದು ಮೆರವಣಿಗೆ ನಿರತರು ಜಯ ಘೋಷಕೂಗಿದರು.

         ಹುತಾತ್ಮ ಯೋಧರಿಗೆ ಶ್ರಧಾಂಜಲಿ ಮೆರವಣಿಯಲ್ಲಿ ಹಸಿರು ಹೊನಲು ತಂಡ ವಿವಿಧ ಸಂಘಟನೆಗಳು, ನಾಗರಿಕರು ಗಾಂಧಿ ವೃತ್ತದಲ್ಲಿ ಚಿಕ್ಕ ಮಗುವಿನ ಕೈಯಲ್ಲಿ ಮೇಣದ ಬತ್ತಿ ಕೊಟ್ಟು ಕೆಲ ನಿಮಿಷಗಳ ಕಾಲ ಮೌನಾಚರಿಸಿ ಮಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದ್ದು ನೆರೆದಿದ್ದ ಜನರ ಗಮನ ಸೆಳೆಯಿತು.

         ಈ ಸಂದರ್ಭದಲ್ಲಿ ಯೋಗ ಗುರು ನಾಗರಾಜ್ ಬಂಜಾರ, ಸಿ.ಆರ್. ಬಸವರಾಜ, ಪ.ಪಂ. ಸದಸ್ಯ ಹೆಚ್. ವಿನಯಕುಮಾರ್, ದಲಿತ ಮುಂಖಡ ಟಿ.ಕೊಟ್ರೇಶ್, ಬುಲ್ ಶ್ರೀನಿವಾಸ, ಅಟವಳಿಗಿ ದಂತೋಷ್ , ವಿಕ್ರಂ, ಮಬರದ ನಾಗರಾಜ್, ಪತ್ತಿಕೊಂಡ ಪ್ರಶಾಂತ, ಪಿಹೆಚ್. ಬಸವರಾಜ್, ಡಾ,ರಾಕೇಶ, ಟಿ.ಎಂ.ಕೃಷ್ಣಸಿಂಗ್, ಮಲ್ಲಿಕಾರ್ಜುನ, ಅಜಿತ್ ಕುಮಾರ ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link