ಸಾಧನೆಗೆ ಮರಳಿ ಯತ್ನಿಸದಿರುವುದೇ ಸೋಲು

ದಾವಣಗೆರೆ:

        ಜೀವನದಲ್ಲಿ ಒಮ್ಮೆ ಸೋತ ನಂತರ, ಹತಾಶರಾಗಿ ಸಾಧನೆಗೆ ಮರಳಿ ಪ್ರಯತ್ನಿಸದಿರುವುದೇ ಸೋಲು ಆಗಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೆಜಿನ ಸಹಾಯಕ ಪ್ರಾಧ್ಯಾಪಕ ವೆಂಕಟೇಶ್ ಬಾಬು ತಿಳಿಸಿದರು.

        ನಗರದ ಎ ಆರ್ ಎಂ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಕೌಶಲ್ಯ ಕೋಶದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

        ಸನಾವು ಮಾಡುವ ಯಾವುದೇ ಕೆಲಸ ಪ್ರಯತ್ನ ವಿಫಲವಾಗುವುದು ಸೋಲಲ್ಲ. ವಿಫಲವಾದ ನಂತರ ಮತ್ತೆ ಪ್ರಯತ್ನಿಸದಿರುವುದೆ ಸೋಲು ಆಗಲಿದೆ.ಸ ಇಂದು ನಿಜವಾದ ಸಾಧಕನು ತಾನು ಮಾಡುವ ಕೆಲಸ ಕಾರ್ಯಗಳಲ್ಲಿ ಸಂಭವಿಸುವ ವಿಫಲತೆಗಳಿಗೆ ಬೇಸರ ಗೊಳ್ಳುವುದಿಲ್ಲ ವಿಫಲತೆಯನ್ನು ಎದುರಿಸಿ ಸತತ ಪ್ರಯತ್ನವನ್ನು ಮಾಡಿ ಸಾಧನೆಯನ್ನು ಮಾಡುತ್ತಾನೆ ಎಂದರು.

       ವಿದ್ಯಾರ್ಥಿಗಳು ಜೀವನದ ಗುರಿಯನ್ನು ನಿಖರವಾಗಿಸಿಕೊಂಡು, ಸತತ ಪ್ರಯತ್ನವನ್ನು ಆತ್ಮವಿಶ್ವಾಸದಿಂದ ನಂಬಿಕೆಯಿಂದ ಛಲದಿಂದ ಪ್ರಯತ್ನ ಪಟ್ಟರೆ ಜೀವನದಲ್ಲಿ ಸಾಧನೆ ಸಾಧ್ಯವಾಗಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಬಹುದು ಅವಮಾನವನ್ನು ಸಹಿಸಿ ಅನುಮಾನಗಳಿಗೆ ಎಡೆ ಕೊಡದೆ ಸತತ ಪ್ರಯತ್ನಪಟ್ಟರೆ ಮುಂದಿನ ದಿನಗಳಲ್ಲಿ ಅವರಿಗೆ ಸನ್ಮಾನ ಸಿದ್ಧ ಎಂದು ಹೇಳಿದರು

       ಬಸವಣ್ಣ, ಅಂಬೇಡ್ಕರ್, ರಮೇಶ್ ಅರವಿಂದ್, ಸಚಿನ್, ಅಣ್ಣಾ ಹಜಾರೆ, ಎಡಿಸನ ಟಾಟವರು ಇಂಥ ನೂರಾರು ಸಾಧಕರು ಕಷ್ಟಗಳನ್ನು ಅನುಭವಿಸಿದ ಮೇಲೆ ಸಾಧನೆ ಮಾಡಿದ್ದಾರೆ ಅವರ ಜೀವನವನ್ನು ಮಾದರಿಯಾಗಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಿ.ಎಚ್.ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐ ಕ್ಯೂ ಎ ಸಿ ಸಂಚಾಲಕ ಆಂಜಿನಪ್ಪ , ವಾಣಿಜ್ಯ ಶಾಶ್ತ್ರ ಮುಖ್ಯಸ್ಥ ಜಯರಾಂ ನಾಯಕ್, ಪ್ರಾದೇಶಿಕ ಪ್ರಾಧ್ಯಾಪಕ ಮೌನೇಶ್, ರವಿ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link