ತುಮಕೂರು
ರೈತರು ವಾಯುಗುಣ ವೈಪರಿತ್ಯಕ್ಕೆ ಹೊಂದಿಕೊಳ್ಳುವಂತಹ ಕೃಷಿಯನ್ನು ಮಾಡಲು ಮುಂದಾಗಬೇಕು, ಪ್ರತಿದಿನದ ಹವಾಗುಣ ದತ್ತಾಂಶಗಳನ್ನು ಸಾಮಾನ್ಯ ರೈತರೂ ಸಂಗ್ರಹಿಸಿಟ್ಟುಕೊಂಡು ಅವುಗಳ ಆಧಾರದ ಮೇಲೆ ಕೃಷಿ ಮಾಡಿದಾಗ ಮಾತ್ರ ವಾಯಗುಣ ವೈಪರಿತ್ಯದಿಂದ ತಪ್ಪಿಸಿಕೊಂಡು ಯಶಸ್ವಿಯಾಗಲು ಸಾಧ್ಯ ಎಂದು ಕೃಷಿವಿಜ್ಞಾನಿ ಡಾ.ಹೆಚ್.ಮಂಜುನಾಥ್ ಹೇಳಿದರು.ಸಹಜ ಬೇಸಾಯ ಶಾಲೆಯ 12ನೇ ಸಭೆಯಲ್ಲಿ ಮಾತನಾಡಿದರು.
ಸಹಜ ಬೇಸಾಯ ಆಂದೋಲನವು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಕೃಷಿ ಮತ್ತು ಪರಿಸರಗಳೆರಡನ್ನು ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡುತ್ತಿದೆ. ರೈತರಿಗೆ ಮುಂದಿನ ತಿಂಗಳು ಮೇ 01 ರಂದು ಹವಾಗುಣ ದತ್ತಾಂಶಗಳಾದ ದೈನಂದಿನ ತೇವಾಂಶ, ಮಳೆ ಮಾಪನ, ಮಣ್ಣಿನ ತೇವಾಂಶ, ಮುತ್ತಾದವುಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ತುಮಕೂರು ವಿಜ್ಞಾನ ಕೇಂದ್ರದಲ್ಲಿ ನಡೆಸಲು ಮುಂದಾಗಿದೆ ಆಸಕ್ತ ರೈತರು ನೊಂದಾಯಿಸಿಕೊಳ್ಳಲು(7899650308) ಸಹಜ ಬೇಸಾಯ ಶಾಲೆ ಸಂಚಾಲಕರಾದ ಸಿ.ಯತಿರಾಜು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜಲ ಸಾಕ್ಷರತೆಯನ್ನು ಜೀವನಾಡಿ ಯುವಜನರೊಟ್ಟಿಗೆ ಸೇರಿ ಮಾಡಲು ಮುಂದಾಗಿದ್ದು, ಈಗಾಗಲೇ ಚಿಕ್ಕನಾಯಕನಹಳ್ಳಿ ತಮ್ಮಡಿಹಳ್ಳಿ ಬೆಟ್ಟದಲ್ಲಿ ಜಲಾನಯನ ಕಾರ್ಯಕ್ರಮವನ್ನು ಸ್ಥಳೀಯ ಸಮುದಾಯಗಳನ್ನು ಒಟ್ಟುಗೂಡಿಸಿಕೊಂಡು ಕಳೆದೊಂದು ವರ್ಷದಿಂದ ಮಾಡುತ್ತಾ ಬಂದಿದ್ದೇವೆಂದು ರಾಮಕೃಷ್ಣಪ್ಪ ಮತ್ತು ಇಂದಿರಮ್ಮರವರು ಹೇಳಿದರು.
ಕರ್ನಾಟಕ ರಾಜ್ಯಕ್ಕೆ ಸಹಜ ಬೇಸಾಯ ನೀತಿಯನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದ್ದು ನೀತಿ ರೂಪಿಸುವ ತಜ್ಞರು ಸಣ್ಣ ಗುಂಪುಗಳಲ್ಲಿ ಕೆಲಸಮಾಡುತ್ತಿದ್ದು ಅದನ್ನು ಸಾರ್ವಜನಿಕ ಚರ್ಚೆಗೆ ಇಡಲಾಗುವುದೆಂದು ಜ್ಯೋತಿರಾಜ್ ತಿಳಿಸಿದರು. ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಯಶಸ್ವಿಯಾಗಿ ನಡೆಯುತ್ತಿದ್ದು ರಾಜ್ಯದ ಬೇರೆ-ಬೇರೆಕಡೆಗಳಿಂದ ಕಲಿಕಾರ್ಥಿಗಳು ಆಸಕ್ತಿ ತೋರಿಸಿದ್ದಾರೆ, ಇಲ್ಲಿ ಅನೇಕ ಮಳೆಯಾಶ್ರಿತ ಪ್ರಯೋಗಶೀಲತೆಗಳು ನಡೆಯುತ್ತಿವೆ, ಉತ್ತಮ ಮಾದರಿಗಳನ್ನು ರೋಪಿಸಲಾಗುತ್ತಿದೆ ಎಂದು ಕೋರ್ಸ್ ನ ಸಂಯೋಜಕ ವಿವೇಕ್ ಮಾತನಾಡಿದರು.
ಸಭೆಯಲ್ಲಿ ಸಹಜ ಬೇಸಾಯಗಾರ ರವೀಶ್, ಡಾ,ನಾಗೇಂದ್ರ, ಪ್ರೀತಮ್ ಸಿ ರಾಜ್, ಕೆ.ಪಿ.ಮಧುಸೂದನ್, ರಶ್ಮಿ.ಹೆಚ್.ಎನ್ ಸಿದ್ದೇಶ್ ರವರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








