ಹಾವೇರಿ :
ಬೆಂಗಳೂರಿನ ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳಿಂದ ತಾಲೂಕಿನ ದೇವಗಿರಿ ಗ್ರಾಮದ ಲೇಖಕ ಪ್ರಕಾಶ ದಿಡಗೂರ ಸಿರಿಗನ್ನಡ ರಾಷ್ಟ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇತ್ತೀಚೆಗೆ ಬೆಂಗಳೂರಿನ ರವಿಂದ್ರ ಕಲಾ ಭವನದಲ್ಲಿ ನಡೆದ ಕರ್ನಾಟಕ ಸಾಹಿತ್ಯ-ಸಂಸ್ಕೃತಿ ಕಲಾ ಸಂಭ್ರಮ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.
ಕಳೆದ ಒಂದು ದಶಕದಿಂದ ಸಮಾಜದಲ್ಲಿ ಅಂಕು-ಡೊಂಕು ತಿದ್ದುವಂತ ಅತ್ಯುತಮ ನಾಟಕಗಳಾದ ಸಾಕು-ಮಗನ ಸವಾಲು, ಅಣ್ಣ ಕರಿಯಲಿಲ್ಲ, ತಂಗಿ ಬರಲಿಲ್ಲ, ರೈತನ ಕತ್ತು ಭೂಮಿಗೆ ಬಿತ್ತು ಸೇರಿದಂತೆ ಹತ್ತಾರು ನಾಟಕಗಳನ್ನು ರಚಿಸಿ ಪ್ರದರ್ಶನಗೊಳಿಸುವಲ್ಲಿ ಯಶಸ್ವಿಯಾದ ಹಿರಿಮೆಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇವರ ಸಾಧನೆಗೆ ಶಿವಾನಂದ ಮಾಳಿ, ಮಂಜುನಾಥ ಕನ್ನನಾಯ್ಕರ ಸೇರಿದಂತೆ ಗ್ರಾಮಸ್ಥರು ಶುಭಹಾರೈಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ