ತಾವರೇಕೆರೆ
ತನ್ನ ಜಮೀನಿನ ಅಭಿವೃದ್ಧಿಗೆಂದು ಕೈ ಸಾಲ ಹಾಗೂ ಬ್ಯಾಂಕಿನಲ್ಲಿ ಮಾಡಿದ್ದ ಸಾಲವನ್ನು ತೀರಿಸಲಾಗದೆ ರೈತನೊಬ್ಬ ನೇಣು ಹಾಕಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ತಾವರೇಕೆರೆಯ ಗೋಮಾರದಹಳ್ಳಿಯಲ್ಲಿ ನಡೆದಿದೆ.
ಗೋಮಾರದಹಳ್ಳಿ ಗ್ರಾಮದ ನರಸಿಂಹಮೂರ್ತಿ (40) ಎಂಬ ರೈತ ಜನ್ನ ಜಮೀನಿನಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದು ಈ ಎರಡೂ ಕೊಳವೆ ಬಾವಿಗಳು ವಿಫಲಗೊಂಡಿದ್ದವು. ಜಮೀನಿನ ಅಭಿವೃದ್ಧಿಗೆಂದು ಕೆ.ಜಿ.ಬಿ. ಬ್ಯಾಂಕಿನಲ್ಲಿ 1.60 ಲಕ್ಷ ರೂ ಸಾಲ ಮಾಡಿದ್ದಲ್ಲದೆ ಕೈಸಾಲ ಕೂಡಾ ಮಾಡಿದ್ದನು ಎನ್ನಲಾಗಿದ್ದು ಸಾಲ ತೀರಿಸಲಾಗದೆ ತನ್ನ ಜಮೀನಿನಲ್ಲಿನ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ