ಸಾಲಮನ್ನಾ ರಸೀದಿ ಪಡೆಯಲು ಸರತಿ ಸಾಲಿನಲ್ಲಿ ಹಣ ತುಂಬುತ್ತಿರುವ ರೈತರು

ಹರಪನಹಳ್ಳಿ

        ಅನಿಧಿಕೃತ ಅಕ್ರಮಿಸಿರುವ ಜಮೀನನ್ನು ಸಕ್ರಮಗೊಳಿಸಲು ಹಾಗೂ ಸಾಲಮನ್ನಾ ರಸೀದಿ ಪಡೆಯಲು ರಾಜ್ಯ ಸರ್ಕಾರ ಬ್ಯಾಂಕ್ ಮೂಲಕ ಹಣ ಪಾವತಿಸಿ ಅರ್ಜಿ ಅಹ್ವಾನಿಸಿದ್ದು ಫಲವಾಗಿ ಸಾರ್ವಜನಿಕರು ಬ್ಯಾಂಕ್ ಮುಂದೆ ಬೆಳಿಗ್ಗೆ 9 ಗಂಟೆಯಿಂದ ಸರತಿ ಸಾಲಿನಲ್ಲಿ ಹಣ ತುಂಬುತ್ತಿದ್ದಾರೆ.

        ಬೆಳಿಗ್ಗೆಯಿಂದ ಸಂಜೆಯಾದರೂ ರೈತರು ಅರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬ್ಯಾಂಕ್ ಪ್ರವೇಶ ಮಾಡಲು ಕ್ಯೂ ಹಚ್ಚಿದ್ದಾರೆ. ಬ್ಯಾಂಕ್ ಸಿಬ್ಬಂದಿ ಬ್ಯಾರಿಕೇಡ್ ನಿರ್ಮಿಸಿ ಶಾಮಿಯಾನ ಹಾಕಿ ಖುರ್ಚಿಗಳನ್ನು ಹಾಕಿರುವ ದೃಶ್ಯ ಕಂಡುಬಂತು. ಕೆಲ ರೈತರು ನಿಂತು ಸುತ್ತಾಗಿ ಬೇಸತ್ತು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಾ ಕಾಲಕಳೆದರೂ. ಸರತಿಯಲ್ಲಿ ಅರ್ಜಿ ಶುಲ್ಕ ರೂ.100 ಹಣ ತುಂಬಲು ಹರಸಾಹಸ ಮಾಡುತ್ತಿರುವುದಾಗಿ ರೈತ ಕವಸರ ಊರಪ್ಪ ತಮ್ಮ ಆಳಲು ತೋಡಿಕೊಂಡರು

           ಬ್ಯಾಂಕ್ ವ್ಯವಸ್ಥಾಪಕ ಎಸ್.ಹರೀಶ್ ಮಾತನಾಢಿ, ಬಗರಹುಕ್ಕುಂ ಹಾಗೂ ಸಾಲಮನ್ನಾ ಪ್ರಯುಕ್ತ ನೂರಾರು ರೈತರು ಬ್ಯಾಂಕಿಗೆ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಎರಡು ಪ್ರತ್ಯೇಕ ಕೌಂಟರ್‍ಗಳನ್ನು ತೆರಯಲಾಗಿದ್ದು 450ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈಗಾಗಲೇ 8ಸಾವಿರ ಅರ್ಜಿಗಳಿಗೆ ಚಲನ್ ನೀಡಲಾಗಿದೆ. ನಾಳೆಯಿಂದ ಕಸಬಾ ನಾಡ ಕಛೇರಿಯಲ್ಲೂ ಬ್ಯಾಂಕ್‍ವತಿಯಿಂದ ಒಂದು ಕೌಂಟರ್ ತೆರೆಯಲಾಗುತ್ತಿದೆ. ಸಾಲಮನ್ನಾಕ್ಕೆ ಅರ್ಜಿ ಸಲ್ಲಿಸಲು ಜ.19ರವರೆಗೆ ಕಾಲವಕಾಶವಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link