ಗುತ್ತಲ :
ರೈತರ ಏಳಿಗೆಗಾಗಿ ಸರ್ಕಾರದಿಂದ ಕೃಷಿ ಇಲಾಖೆಯ ಮುಖಾಂತರ ದೊರೆಯುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಪಡೆದುಕೊಳ್ಳುವಲ್ಲಿ ರೈತ ಬಾಂದವರು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ಹೇಳಿದರು.ಸಮೀಪದ ಹಾಂವಶಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಅಭಿವೃದ್ಧಿಗಾಗಿ ಸರ್ಕಾರ ಸಹಾಯಧನದಲ್ಲಿ ಬೀಜ ವಿತರಣೆ, ಸಾವಯವ ಗೊಬ್ಬರ, ಕ್ರೀಮಿನಾಶಕ ಮುಂತಾದ ಸೌಲಭ್ಯಗಳನ್ನು ನೀಡುತ್ತಿದ್ದು ರೈತರು ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.
ಆತ್ಮಾಧಿಕಾರಿ ಮಲ್ಲಿಕಾರ್ಜುನ ಗುಮ್ಮಡೆ ಮಾತನಾಡಿ, ಕೃಷಿ ಅಭಿಯಾನ ಕಾರ್ಯಕ್ರಮದ ಮುಖಾಂತರವಾಗಿ ರೈತರಿಗೆ ಕೃಷಿ ಹಾಗೂ ಕೃಷಿಗೆ ಸಂಬಂದಿತ ಇಲಾಖೆಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಸೂಕ್ತ ರೀತಿಯ ಮಾಹಿತಿಯನ್ನು ನೀಡಲಾಗುವುದು ಮತ್ತು ಫಸಲ್ ಭೀಮಾ ಯೋಜನೆಯ ಮಾಹಿತಿಯನ್ನು ಕೂಡಾ ನೀಡಲಾಯಿತು. ಇಂತಹ ಅಭಿಯಾನದ ಸದುಪಯೋಗವನ್ನು ರೈತ ಭಾಂದವರು ಪಡೆದುಕೊಂಡು ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಕೃಷಿ ಅಭಿಯಾನ ಗುತ್ತಲ ಹೋಬಳಿಯ ಪಟ್ಟಣ ಸೇರಿದಂತೆ ಹಾವನೂರ,ಕಂಚಾರಗಟ್ಟಿ, ಹಾಂವಶಿ, ನೆಗಳೂರ, ಹಾಲಗಿ, ಬಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಿ ರೈತರಿಗೆ ಮಾಹಿತಿಯನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಪರಮೇಶಗೌಡ್ರ ಪಾಟೀಲ, ನಿಂಗಪ್ಪ ಬಣಕಾರ, ನಾಗಪ್ಪ ತೋಟಗೇರ, ಹನುಮಂತ ಅಂಬಿಗೇರ, ಕುರವತ್ತೆಪ್ಪ ಮೈಲಾರ, ಗುಡ್ಡಪ್ಪ ಬನ್ನಿಮಟ್ಟಿ, ಮಂಜಪ್ಪ ಬಾರ್ಕಿ, ಮಲಕಪ್ಪ ಮೈಲಾರ ಹಾಗೂ ಮುಂತಾದ ರೈತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
