ಚಿತ್ರದುರ್ಗ:
ಪುರುಷರ ಕ್ರೌರ್ಯಕ್ಕೆ ಒಳಗಾಗಿ ಅತ್ಯಾಚಾರಕ್ಕೀಡಾದ ಮಹಿಳೆ ಅವಮಾನಿತಳಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮಧ್ಯಪ್ರದೇಶದ ಅತ್ಯಚಾರಕ್ಕೋಳಗಾದ ಸಂತ್ರಸ್ಥೆ ಮಮತ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸರ್ಕಾರಿ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿಗ್ನಿಟಿ ಮಾರ್ಚ್(ಸ್ವಾಭಿಮಾನಿ ಯಾತ್ರೆ) ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯ ಮೇಲೆ ಪುರುಷರು ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರದಂತಹ ಕ್ರೌರ್ಯವನ್ನು ನಿರಂತರವಾಗಿ ಎಸೆಯುತ್ತಿದ್ದು, ಕಾನೂನಿನ ರಕ್ಷಣೆ ಇದ್ದಾಗ್ಯೂ ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದು ಸಾಮಾನ್ಯವಾಗಿದೆ. ಇಂತಹ ಮಹಿಳೆಯರು ಅವಮಾನಿತರಾಗಿ ಆತ್ಮಹತ್ಯೆಯ ದಾರಿ ಹಿಡಿಯಬಾರದೆಂದು ತಪ್ಪೆಂದು ಹೇಳಿದರು.ಮಹಿಳೆಯರಿಗೆ ಕಾನೂನು ರಕ್ಷಣೆ ಇದ್ದು, ಪ್ರಜ್ಞಾವಂತ ಪುರುಷರು ಬೆಂಬಲಕ್ಕಿರುವುದರಿಂದ ಮಹಿಳೆ ಆತಂಕಕ್ಕೊಳಗಾಗಬಾರದೆಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುವಂತಹ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ನಿಯಂತ್ರಿಸಲು ಸರ್ಕಾರ ಗಟ್ಟಿಯಾದ ಕಾನೂನು ಜಾರಿಮಾಡಿದ್ದು, ಅವುಗಳಲ್ಲಿ ಫೋಕ್ಸೋ ಅಂತಹ ಕಾಯ್ದೆ ಅತ್ಯುತ್ತಮವಾದದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಘಟಿತ ಹಾಗೂ ಅಸಂಘಟಿತ ಮಹಿಳೆಯರ ಮೇಲೆ ವ್ಯವಸ್ಥಿತವಾದ ಲೈಂಗಿಕ ಶೋಷಣೆಗಳು ನಡೆಯುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಮಹಿಳೆಯರು ಜಾಗೃತರಾಗಬೇಕು. ಅಸಂಘಟಿತ ವಲಯಗಳಲ್ಲಿ ಪುರುಷರ ಆಮಿಷಕ್ಕೆ ಒಳಗಾಗಿ ಅತ್ಯಾಚಾರದಂತಹ ಘಟನೆಗಳಲ್ಲಿ ಶೋಷಣೆಗೊಳಪಡುವ ಮಹಿಳೆಯರ ರಕ್ಷಣೆಗೆ ಸರ್ಕಾರ ಕಾನೂನಿನ ನೆರವು ನೀಡಿದ್ದು, ಇದನ್ನು ಬಳಸಿಕೊಂಡು ಮಹಿಳೆಯರು ತಮ್ಮ ರಕ್ಷಣೆ ಮಾಡಿಕೊಳ್ಳಬೇಕೆಂದು ಹೇಳಿದ ಅವರು ಕೌಟುಂಬಿಕ ದೌರ್ಜನ್ಯ ಪರಸ್ಪರ ಅಪನಂಬಿಕೆ ಮತ್ತು ಮಹಿಳೆಯನ್ನು ಶೋಷಣೆ ಮಾಡಲು ಬೇರೆ ಬೇರೆ ಮಾರ್ಗಗಳನ್ನು ಪುರುಷರು ಬಳಸುವಂತಹದ್ದನ್ನು ಹಲವು ಪ್ರಕರಣಗಳಲ್ಲಿ ನೋಡುತ್ತೇವೆ. ಆದರೆ ಮಹಿಳೆಯರಿಗೆ ಬೇರೆಯವರ ರಕ್ಷಣೆಗಿಂತಲೂ ತಮ್ಮ ರಕ್ಷಣೆಯನ್ನು ತಾವೇ ರಕ್ಷಣೆ ಮಾಡಿಕೊಳ್ಳಬೇಕೆಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ನಟರಾಜ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುವಂತಹ ಅತ್ಯಾಚಾರ ಪ್ರಕರಣಗಳಿಂದ ಸಮಾಜ ತಲೆ ತಗ್ಗಿಸಬೇಕು ಮತ್ತು ಮಹಿಳೆಯರು ಕೆಲಸ ಮಾಡುವಂತಹ ಸ್ಥಳಗಳಲ್ಲಿ ಕಾನೂನಿನ ನೆರವು ನೀಡುವುದು ಅಗತ್ಯ ಎಂದು ಹೇಳಿದರು.
ಬಾಂಬೆ ಇಂದ ಡೆಲ್ಲಿಗೆ ಹೊರಟಿರುವ ಮಹಿಳೆಯರ ಸ್ವಾಭಿಮಾನಿ ಯಾತ್ರೆಯು ಘನತೆ, ಸ್ವಾಭಿಮಾನ, ಮಹಿಳೆಯರಿಗೆ ರಕ್ಷಣೆ ನೀಡುವ ಯಾತ್ರೆಯಾಗಿದ್ದು, ಯಾತ್ರೆಯನ್ನು ಬೆಂಬಲಿಸುವಂತದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜಸ್ಥಾನದ ಅತ್ಯಾಚಾರಕ್ಕೊಳಗಾಗಿ ರಾಷ್ಟ್ರ ವ್ಯಾಪಿ ಸುದ್ಧಿ ಮಾಡಿದ್ದ ಭ್ರೂವರಿ ದೇವಿ ಸಭೆಯಲ್ಲಿ ಉಪಸ್ಥಿತರಿದ್ದು, ಅತ್ಯಾಚಾರಕ್ಕೊಳಗಾಗಿ ಸಂತ್ರಸ್ಥ ಮಹಿಳೆಗೆ ಕಾನೂನು ನೆರವು ನೀಡುವಂತೆ ಹೋರಾಟ ಮಾಡಿದ ಪ್ರತಿಫಲವೇ ದೇಶಾದ್ಯಂತ ಹೊಸ ಹೊಸ ಕಾನೂನುಗಳು ಜಾರಿಗೆ ಬಂದು ಮಹಿಳೆಯರಿಗೆ ರಕ್ಷಣೆ ಸಿಕ್ಕಿದೆ ಎಂದು ಹೇಳಿದರು.
ಡಿಗ್ನಿಟಿ ಜಾಥಾದ ಸ್ವಾಗತ ಸಮಾರಂಭದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅನ್ನಪೂರ್ಣ ವಿಶ್ವಸಾಗರ್, ನಿರ್ದೇಶಕರ ಆರ್. ವಿಶ್ವಸಾಗರ, ಸಿಡಬ್ಲ್ಯೂಸಿ ಕಮಿಟಿಯ ಅಧ್ಯಕ್ಷ ಡಾ. ಪ್ರಭಾಕರ್ ಪತ್ರಕರ್ತರ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ನರೇನಹಳ್ಳಿ ಅರುಣ್ ಕುಮಾರ್, ಚಿತ್ರದುರ್ಗ ಅಲ್ಟ್ರಾಸಿಟಿ ಕಮಿಟಿಯ ಅಧ್ಯಕ್ಷರಾದ ನರಸಿಂಹಮೂರ್ತಿ ಉಪಾಧ್ಯಕ್ಷರಾದ ಸಿರಿಗೆರೆ ಶಿವಣ್ಣ, ಶಿವಪ್ರಸಾದ್, ಬಸವರಾಜ್ ಬೇವಿನ ಮರದ, ಕುಮಾರ್ ಮತ್ತು ವಿದ್ಯಾರ್ಥಿ ನಿಲಯದ ನಿಲಯಪಾಲಕಿ ಶ್ರೀಮತಿ ಯಶೋಧ ಇವರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
