ಐತಿಹಾಸಿಕ ಸಾಂಸ್ಕೃತಿಕ ಸಮಾರೋಪ ಸಮಾರಂಭ

ಬಳ್ಳಾರಿ:

      ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿಯ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 24/02/2019 ರಂದು ಸಾಯಂಕಾಲ ಅದ್ದೂರಿಯಾಗಿ ಸಮಾರೋಪಗೊಂಡಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಕೆ.ತಿಮ್ಮಪ್ಪ ಅವರು ದೇಶದ, ಸಮಾಜದ ಶಾಂತಿ ನೆಮ್ಮದಿ ಕಾಪಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿ ಸಂಘಟಿಸಬೇಕೆಂದು ಪ್ರತಿಪಾದಿಸಿದರು.

      ವೀ.ವಿ.ಸಂಘದ ಅಧ್ಯಕ್ಷರಾದ ಶ್ರೀ ಉಡೇದ ಬಸವರಾಜ ಮಾತನಾಡಿ ಮುಂಬರುವ ದಿನಗಳಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವೀ.ವಿ.ಸಂಘದ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಇನ್ನು ಉತ್ತಮವಾಗಿ ಸಂಘಟಿಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಹೆಚ್.ಎಂ.ವೀರಭದ್ರಶರ್ಮ, ಕಾರ್ಯದರ್ಶಿಗಳಾದ ಶ್ರೀ ಚೋರನೂರು ಕೊಟ್ರಪ್ಪನವರು, ಸಹ-ಕಾರ್ಯದರ್ಶಿಗಳಾದ ಶ್ರೀ ಕೆ.ವೀರೇಶಗೌಡರು, ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಅರವಿ ಬಸವನಗೌಡರು, ಶ್ರೀ ಕೆ.ಎಂ.ಮಹೇಶ್ವರಸ್ವಾಮಿ, ಶ್ರೀ. ಜೆ. ಎಸ್. ಬಸವರಾಜ, ಶ್ರೀ ಕಣ್ಣಿ ರಾಜಶೇಖರ, ಡಾ. ಸೋಮೇಶ್ವರ ಗಡ್ಡಿ, ಶ್ರೀ. ಕೆ. ರಾಮನಗೌಡ, ಶ್ರೀಮತಿ ಅಂಗಡಿ ಶಶಿಕಲಾ, ಶ್ರೀ ಮೋಹನರೆಡ್ಡಿ ಹಾಗೂ ಸಂಘದ ಎಲ್ಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು. ವೀ.ವಿ.ಸಂಘ ವಿವಿಧ ಶಾಲಾ ಕಾಲೇಜುಗಳ ಕಲಾತಂಡಗಳು ಕಾರ್ಯಕ್ರಮಕ್ಕೆ ಮೆರಗು ತಂದವು.

     ರಂಭದಲ್ಲಿ ಕಟ್ಟಡ ಸಮೀತಿ ಅಧ್ಯಕ್ಷರಾದ ಶ್ರೀ ಕೆ.ಉಮಾಶಂಕರ ಇವರು ಸ್ವಾಗತಿಸಿದರು.ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ.ಎಂ.ಶರಣಗೌಡ ಇವರು ವಂದನಾರ್ಪಣೆಯನ್ನು ನೆರವೇರಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ವಿಕ್ರಂ ಪಿ ಹಿರೇಮಠ ಹಾಗೂ ಶ್ರೀಮತಿ ಹೇಮ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಅನುಕೃಪಾ ಇವರು ಪ್ರಾರ್ಥನೆ ನೆರವೇರಿಸಿದರು.

      ಸಾಂಸ್ಕೃತಿಕ ಉತ್ಸವದ ಅಂಗವಾಗಿ ಮುಂಜಾನೆ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವರಚಿತ ಕವನ ವಾಚನ, ಕರಕುಶಲ ವಸ್ತು ಪ್ರದರ್ಶನ ಹಾಗೂ ವಿ.ಎಸ್.ಆರ್. ಕಾನೂನು ಕಾಲೇಜಿನಲ್ಲಿ ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಸಂಜೆ ಸಮಾರೋಪ ಸಮಾರಂಭದ ನಂತರ ವೀರಶೈವ ವಿದ್ಯಾವರ್ಧಕ ಸಂಘದ ಎಲ್ಲ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link