ಸಮಸ್ಯೆಗಳ ಕೂಪವಾದ ಪಾವಗಡ ಸರ್ಕಾರಿ ಆಸ್ಪತ್ರೆ..!!

ಪಾವಗಡ :

       ವಿವಿಧ ಪ್ರಕರಣಗಳಲ್ಲಿ ಸತ್ತ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ತಂದಾಗ ಶವಗಾರದಲ್ಲಿ ಬೆಕ್ಕು ಇಲಿ ಹೆಗ್ಗಣಗಳು ಮೃತ ದೇಹಗಳನ್ನು ತಿನ್ನುತ್ತಿವೆ ಎಂದು ಆರ್.ಕೆ.ಆಂಬುಲೆನ್ಸ್ ಚಾಲಕರು ಹಾಗೂ ಸಮಾಜ ಸೇವಕರಾದ ರಾಮಕೃಷ್ಣಪ್ಪ ಗಂಬೀರವಾದ ಆರೋಪ ಮಾಡಿದ್ದಾರೆ.

       ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ರಿಕಾ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಇಲ್ಲಿನ ಶವಗಾರ ಆತಂತ್ರವಾಗಿದ್ದು ಗಿಟಕಿ ಬಾಗಿಲುಗಳು ಹಾಳಗಿದ್ದು ಆಪಘಾತ ಮತ್ತು ಇತರೆ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾ ಮೃತದೇಹಗಳನ್ನು ಶವ ಪರಿಕ್ಷೆಗೆಂದು ತಂದಾಗ ಶವಗಾರದ ದುರ್ನಾತದಿಂದ ಸ್ವಚ್ಚತೆ ಇಲ್ಲದೆ ಗಬ್ಬುನಾರುತ್ತಿರುವ ಕಾರಣದಿಂದ ಇಲ್ಲಿಗೆ ತಂದಾ ಶವಗಳನ್ನು ಬೆಕ್ಕು ಇಲಿ ಹೆಗ್ಗಣಗಳು ತಿನ್ನುವಂತಾಗಿದ್ದು ಇದರಿಂದ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದರು.

       ಶವಗಾರ ಕಟ್ಟಡ ನಿರ್ಮಾಣ ಮಾಡಿ ಹಲವು ವರ್ಷಗಳೆ ಕಳೆದಿದೆ ಇದಕ್ಕೆ ಕಾಯಕಲ್ಪವಿಲ್ಲದ ಕಾರಣದಿಂದ ಕಿಟಕಿ ಮತ್ತು ಬಾಗಿಲ ಸಂದಿಗಳಲ್ಲಿ ಬೆಕ್ಕು ಇಲಿ ಹೆಗ್ಗಣಗಳು ಸತ್ತ ಮನುಷ್ಯನನ್ನು ತಿನ್ನುವಂತಾಗಿದೆ ಸಂಬಂದ ಪಟ್ಟ ಮೇಲಾದಿಕಾರಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಶವಗಾರದ ದುರಸ್ಥಿಗೆ ಅನುದಾನ ನೀಡಿ ಇವುಗಳಿಂದ ಮೃತದೇಹಗಳ ರಕ್ಷಣೆ ಮಾಡಬೇಕೆಂದರು.

       ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 250 ರಿಂದ 300 ಜನ ಬಾಣಂತಿಯರಿಗೆ ಸಂತಾನ ಹರಣ ಶಸ್ರ ಚಿಕಿತ್ಸೆ ಮಾಡಲಾಗುತ್ತಿದೆ ಇಲ್ಲಿ ಶಸ್ರ ಚಿಕಿತ್ಸೆಗೆ ಬರುವ ಬಾಣಂತಿಯರು ಮಕ್ಕಳ ಜೋಲಿಗೆ ಜಾಗವಿಲ್ಲದೆ ಹಳೆಯ ದ್ವೀಚಕ್ರವಾಹನ ಪಾರ್ಕ್ ಮಾಡುವ ಸ್ಥಳದಲ್ಲಿ ಜೋಲಿ ಹಾಕಲಾಗುತ್ತಿದೆ ಇಂತಹ ಸಮಯದಲ್ಲಿ ಯಾವುದೆ ಆವಘಡ ಸಂವಿಸಿದರೂ ಜೀವಕ್ಕೆ ಹಾನಿಯಾಗಲಿದೆ ಸಂಬಂದಪಟ್ಟವರು ಹಲವು ವರ್ಷಗಳಿಂದ ನೋಡಿ ಕಾಣದಣತೆ ವರ್ತಿಸುತ್ತಿದ್ದಾರೆಂದು ಬಾಣಂತಿ ನಾಗಮ್ಮ ತಿಳಿಸಿದ್ದಾರೆ.

       ಸರ್ಕಾರಿ ಆಸ್ಪತ್ರೆಯ ಹಿಂಬಾಗದಲ್ಲಿ ವಿಶಾಲವಾದ ಸ್ಥಳವಿದ್ದು ಇಲ್ಲಿ ಸಂತಾನ ಹರಣ ಶಸ್ರ ಚಿಕಿತ್ಸೆಗೆ ಬರುವ ಬಾಣಂತಿಯರಿಗೆ ವಿಶ್ರಾಂತಿ ಭವನ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡಿರುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap