ಬೆಂಗಳೂರು:
ಮೈಸೂರು ರಸ್ತೆಯ ಕುಂಬಳಗೋಡಿನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ವಾಶ್ ರೂಂನಲ್ಲಿ ಮೊಬೈಲ್ ಇಟ್ಟಿದ್ದ ಆರೋಪದ ಮೇಲೆ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಕುಂಬಳಗೋಡು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಯನ್ನು ಅದೇ ಕಾಲೇಜಿನ ಏಳನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಕುಶಾಲ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ 10:30ರ ಸುಮಾರಿಗೆ ಕುಶಾಲ್ ಬಾಲಕಿಯರ ವಾಶ್‌ರೂಮ್‌ಗೆ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶೌಚಾಲಯವೊಂದರಲ್ಲಿ ಬೀಗ ಹಾಕಿಕೊಂಡು, ರೆಕಾರ್ಡ್ ಮಾಡಲು ಪಕ್ಕದ ಶೌಚಾಲಯದ ಮೇಲೆ ತನ್ನ ಫೋನ್ ಹಿಡಿದಿದ್ದಾನೆ. ಆದರೆ 10: 45 ಕ್ಕೆ ಫೋನ್ ರಿಂಗ್ ಆಗಿದೆ. ಇದರಿಂದ, ವಾಶ್‌ರೂಮ್‌ನಲ್ಲಿದ್ದ ಹುಡುಗಿಯರು ಎಚ್ಚೆತ್ತುಕೊಂಡಿದ್ದಾರೆ.
ಶೌಚಾಲಯವೊಂದರೊಳಗೆ ಕುಶಾಲ್‌ನನ್ನು ಕಂಡಾಗ ಆಕೆ ಆತನನ್ನು ಹೊರ ಬರುವಂತೆ ತಿಳಿಸಿದ್ದಾರೆ. ಆದರೆ ಅವನು ಹೊರಗೆ ಬರಲು ನಿರಾಕರಿಸಿದನು. ಹಲವಾರು ಪ್ರಯತ್ನಗಳ ನಂತರ ಆತ ಬಾಗಿಲು ತೆರೆದರು. ಇದರಿಂದ ಕುಪಿತಗೊಂಡ ಬಾಲಕಿಯರು ಪ್ರಾಂಶುಪಾಲರಿಗೆ ದೂರು ನೀಡಿ ಕಾಲೇಜು ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಂತರ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದರೆ, ಪೊಲೀಸರು ಸ್ಥಳಕ್ಕೆ ಧಾವಿಸುವ ಮುನ್ನವೇ ವಿದ್ಯಾರ್ಥಿಗಳು ಆರೋಪಿಗೆ ಥಳಿಸಿದರು.
ಕುಶಾಲ್‌ನನ್ನು ಬಂಧಿಸಿರುವ ಕುಂಬಳಗೋಡು ಪೊಲೀಸರು, ರೆಕಾರ್ಡಿಂಗ್‌ಗೆ ಬಳಸಿದ್ದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಅವರು ಎರಡು ವೀಡಿಯೊಗಳು ಇರುವುದನ್ನು ದೃಢ ಪಡಿಸಿದ್ದಾರೆ. ಮೊಬೈಲ್ ಫೋನ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲು ನಿರ್ಧರಿಸಿದ್ದಾರೆ. “ಅವನು ತುಂಬಾ ದಿನಗಳಿಂದ ಈ ರೀತಿಯ ಕೆಲಸ ಮಾಡುತ್ತಿದ್ದಾನೆಯೇ ಎಂಬುದನ್ನು ತಿಳಿದುಕೊಳ್ಳಲು ನಾವು ಫೋನ್‌ನಲ್ಲಿರುವ ಡೇಟಾವನ್ನು ವಿಶ್ಲೇಷಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯ ಸೆಕ್ಷನ್ 77 (ವೋಯರಿಸಂ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.