ಚಿನ್ನಹಳ್ಳಿ ಜನಸಂಪರ್ಕ ಸಭೆಯಲ್ಲಿ ಜನರಿಂದ ಸಮಸ್ಯೆಗಳ ಸರಮಾಲೆ

ಕೊರಟಗೆರೆ-

      ಲ್ಯಾಂಡ್ ಆರ್ಮಿಯ ಹಿರಿಯಇಂಜಿನಿಯರ್ ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದಿರಾ.. ಕಾಮಗಾರಿ ವಿಳಂಬ ಮತ್ತು ಪರಿಶೀಲನೆಯ ಬಗ್ಗೆ ಕ್ರಮ ಕೈಗೊಳ್ಳಲು ನಿಮಗೆ ನಿರ್ಲಕ್ಷವೇಕೆ.. ನೀವು ಕ್ರಮ ಕೈಗೊಳ್ಳದಿದ್ದರೇ ನಾನೇ ಕ್ರಮಕ್ಕೆ ಮುಂದಾಗುತ್ತೇನೆಎಂದು ಡಿಸಿಎಂ ಡಾ.ಜಿ.ಪರಮೇಶ್ವರ್‍ಆಕ್ರೋಶ ವ್ಯಕ್ತಪಡಿಸಿದರು.

     ತಾಲೂಕಿನ ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಮದಲ್ಲಿತಾಪಂ ಮತ್ತು ಜಿಲ್ಲಾಡಳಿತದ ವತಿಯಿಂದ ಭಾನುವಾರಏರ್ಪಡಿಸಲಾಗಿದ್ದ ಡಿಸಿಎಂ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

      ಬೆಸ್ಕಾಂ ಇಲಾಖೆ ಅಧಿಕಾರಿ ವರ್ಗ ಕೋಳಾಲ ವ್ಯಾಪ್ತಿಯರೈತರಿಂದ 5ರಿಂದ 10ಸಾವಿರ ಹಣ ಪಡೆದುಕಾಮಗಾರಿಯು ವಿಳಂಬದ ಬಗ್ಗೆ ಹತ್ತಾರು ದೂರುಗಳು ಬಂದಿದೆ. ರೈತರ ಕೆಲಸ ವಿಳಂಬ ಮಾಡಿ ವಿನಾಕಾರಣಕಚೇರಿಗೆ ಅಲೆದಾಡಿಸಿದರೇ ನಾನು ಸಹಿಸುವುದಿಲ್ಲ. ವಿದ್ಯುತ್ ಸೌಲಭ್ಯಇಲ್ಲದಿರುವಗ್ರಾಮಅಥವಾ ಮನೆಯನ್ನು ಗುರುತಿಸಿ ನನಗೆ ಮಾಹಿತಿ ನೀಡಬೇಕು. ಸರಕಾರದ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿಎಂದು ಸೂಚಿಸಿದರು.

      ವಿರೋಧ ಪಕ್ಷಗಳಿಗೆ ಸೆಡ್ಡುಒಡೆಯುವದೃಷ್ಟಿ ಮತ್ತು ಆಡಳಿತ ಯಂತ್ರದಚುರುಕಿಗಾಗಿ ಸರಕಾರವೇಜನರ ಮನೆಯ ಮುಂದೆ ಬಂದಿದೆ. ರಾಜ್ಯದ ಮುಖ್ಯಮಂತ್ರಿಗ್ರಾಮ ವಾತ್ಸವ್ಯ ಮಾಡುತ್ತೀದ್ದಾರೆ. ನಾನು ಜನಸಂಪರ್ಕ ಸಭೆಯಲ್ಲಿಜನರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಯನ್ನು ಸ್ಥಳದಲ್ಲಿಯೇ ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ. ಕೊರಟಗೆರೆಯಒಟ್ಟುಆರುಕಡೆಯಲ್ಲಿಆಧಾರ್‍ಕೇಂದ್ರ ಸ್ಥಾಪಿಸಿ ಸಮಸ್ಯೆ ಸರಿಪಡಿಸಲು ಈಗಾಗಲೇ ಸೂಚಿಸಿದ್ದೇನೆ ಎಂದರು.

      ರೈತರಿಗೆ ಅನ್ಯಾಯ ಆಗಲು ಬಿಡೋಲ್ಲ: ಎತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕೆ 13500ಕೋಟಿ ಮೀಸಲು ಇಡಲಾಗಿದೆ. 300ಕೀಮೀ ದೂರದಿಂದ ನೀರುತರಲು ಈಗಾಗಲೇ 6ಸಾವಿರ ಕೋಟಿಖರ್ಚಾಗಿದೆ. ಬಫರ್‍ಡ್ಯಾಂ ನಿರ್ಮಾಣಕ್ಕಾಗಿ 5ಸಾವಿರ ಎಕರೇ ಭೂಮಿ ಭೂಸ್ವಾಧೀನಆಗಲಿದೆ. ನನ್ನಕ್ಷೇತ್ರದರೈತರಿಗೆಅನ್ಯಾಯ ಆಗಲು ನಾನು ಬಿಡೋದಿಲ್ಲ. ರೈತರು ಭಯ ಪಡುವಅಗತ್ಯವಿಲ್ಲ. ನೀರಾವರಿಯೋಜನೆ ಅನುಷ್ಠಾನಕ್ಕೆ ರೈತರ ಸಹಕಾರಅಗತ್ಯವಾಗಿದೆಎಂದು ಮನವಿ ಮಾಡಿದರು.

      ಜನರಿಂದ ಅಹವಾಲು ಸ್ವೀಕಾರ: ಜನಸಂಪರ್ಕ ಸಭೆಗೆತಮ್ಮ ಅಹವಾಲು ನೀಡಲುಜನಸಾಗರವೇ ಹರಿದು ಬಂದಿತ್ತು. ಕೇಲವರುತಮ್ಮ ಸ್ವಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಮನವಿ ಮಾಡಿದರೇ ಮತ್ತೇ ಕೆಲವರುಗ್ರಾಮದಅಭಿವೃದ್ದಿಗೆ ಸಹಕಾರ ನೀಡುವಂತೆ ಕೇಳಿಕೊಂಡರು. ಪಶು ಇಲಾಖೆ, ಸರಕಾರಿ ಶಾಲೆ ಮತ್ತು ಶಿಕ್ಷಕರ ನೇಮಕ್ಕಾಗಿ ಡಿಸಿಎಂ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಇನ್ನೂಳಿದ ರೈತರು ನಮಗೆ ನಮ್ಮಜಮೀನು ಉಳಿಸಿ ಕೊಡುವಂತೆಕೈಮುಗಿದ ಪ್ರಸಂಗವು ನಡೆಯಿತು.

      ಸಭೆಯಲ್ಲಿ ತುಮಕುರು ಜಿಲ್ಲಾಧಿಕಾರಿ ಡಾ.ರಾಕೇಶಕುಮಾರ್, ಪೊಲೀಸ್‍ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ, ಪಿಡ್ಲ್ಯೂಡಿ ಎಇಇ ಜಗದೀಶ್, ಜಿಪಂ ಸದಸ್ಯ ಶಿವರಾಮಯ್ಯ, ತಾಪಂಅಧ್ಯಕ್ಷಕೆಂಪರಾಮಯ್ಯ, ಜಿಪಂಅಧಿಕಾರಿ ಪ್ರೇಮಕುಮಾರ್, ಬ್ಲಾಕ್‍ಕಾಂಗ್ರೇಸ್‍ಅದ್ಯಕ್ಷಅರಕೆರೆ ಶಂಕರ್, ಗ್ರಾಪಂಅಧ್ಯಕ್ಷ ಸೀತರಾಮು ಸೇರಿದಂತೆಜಿಲ್ಲಾ ಮತ್ತುತಾಲೂಕು ಮಟ್ಟದಅಧಿಕಾರಿ ವರ್ಗ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap