ಸಮಯ ನೋಡಿ ಕನ್ನಾ ಹಾಕಿದ ಕಳ್ಳರು…!!!!

ಹರಪನಹಳ್ಳಿ:

      ಬೆಳ್ಳಿ, ಬಂಗಾರ ಆಭರಣಗಳನ್ನು ಕಳ್ಳರು ದೋಚಿಕೊಂಡು ಹೋದ ಘಟನೆ ತಾಲೂಕಿನ ಬಾಗಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಮೆಗಳಮನೆ ಶೇಖರಪ್ಪ ಎನ್ನುವವರ ಮನೆಯಲ್ಲಿ ಭಾನುವಾರ ಕೂಲಹಳ್ಳಿ ಶ್ರೀ ಗೋಣಿಬಸವೇಶ್ವರ ರಥೋತ್ಸವಕ್ಕೆ ಕುಟುಂಬದ ಸದಸ್ಯರೊಂದಿಗೆ ತೆರಳಿದ ಸಂದರ್ಭದಲ್ಲಿ, ಸಮಯ ನೋಡಿಕೊಂಡ ಕಳ್ಳರು ಮನೆಯಲ್ಲಿನ ಅಲಮೇರಾದಲ್ಲಿ ಇಡಲಾಗಿದ್ದ 1.97ಲಕ್ಷ ರೂ.ಗಳ ಬೆಳ್ಳಿ, ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

      ಸ್ಥಳಕ್ಕೆ ಡಿವೈಎಸ್‍ಪಿ ನಾಗೇಶ್ ಐತಾಳ್, ಪಿಎಸ್‍ಐ ಶ್ರೀಧರ ಬೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಹರಪನಹಳ್ಳಿ ಪೋಲಿಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link