ಕೊಟ್ಟೂರು:
ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿನ ಮುಸ್ಲಿಂ ಭಾಂದವರು ಬುಧವಾರ ಸಡಗರ ಸಂಭ್ರಮಗಳೊಂದಿಗೆ ಆಚರಿಸಿದರು, ಇಲ್ಲಿನ ನಾಲ್ಕು ಪ್ರಮುಖ ಮಸೀದಿಗಳಲ್ಲಿ ಹಬ್ಬದ ನಿಮಿತ್ತವಾಗಿ ಮುಸ್ಲಂ ದೈವ ಅಲ್ಲಾವುನ ನಾಮಸ್ಮರಣೆ ಬೆಳೆಗ್ಗೆ 9 ರಿಂದಲೇ ಮಾರ್ದನಿಸಿದವು.
ಪಟ್ಟಣದ ಬಿಲಾಲ್, ಉಸ್ಮಾನಿಯ, ಜಾಮೀಯ ಮಸೀದಿಗಳಿಂದ ಮುಸ್ಲಂ ಜನಾಂಗದವರು ನೂರಾರು ಸಂಖ್ಯೆಯಲ್ಲಿ ಜಮವಣೆ ಗೊಂಡು ಅದ್ದೂರಿ ಪಾದಯಾತ್ರೆಯ ಮೆರವಣಿಗೆ ಕೈಗೊಂಡರು. ನಂತರ ಇಲ್ಲಿನ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿನ ಖಬರಸ್ತಾನದಲ್ಲಿ ಕೂಡಿಕೊಂಡು ಸಾಮೂಹಿಕ ಪ್ರಾರ್ಥನೆ ಕೈಗೊಂಡರು.
ಧರ್ಮಗುರು ಮುಫ್ತಿಮಹಮ್ಮದ್ ಯಾಸೀನ್ ನೆರೆದಿದ್ದ ಭಾಂದವರಿಗೆ ಧರ್ಮೊಪದೇಶ ನೀಡಿ ಪ್ರಾರ್ಥನೆಯನ್ನು ಭೋದಿಸಿದರು. ಇವರ ಅಜ್ಞಾನುಸಾರ ಜನಾಂಗದ ಭಾಂದವರು ರಾಗಬದ್ದವಾಗಿ ಅಲ್ಲಾಹುನನ್ನು ಸ್ಮರಿಸಿ ನಮಸ್ಕರಿಸಿದರು. ಮಳೆಗಾಗಿ ಪ್ರಾರ್ಥಿಸಿ ಅಲ್ಲಾಹುನಲ್ಲಿ ಮೊರೆಹೋದರು. ನಂತರ ಪರಸ್ಪರ ಒಬ್ಬರನ್ನು ಒಬ್ಬರು ಆಲಂಗಿಸಿಕೊಂಡು ಈದ್-ಮುಬರಕ್ ಹೇಳಿಕೊಂಡರು.
ಹಯೂಬ್ ಖಾನ್, ನೂರುಲ್ಲಾ ಖಾನ್, ಎನ್. ಖಾಜ ಸಾಬ್, ರೆಹಮತುಲ್ಲಾ ಸಾಹೇಬ್, ನಜೀರ್, ಹೆಗಡೆ ಮಾಬುಸಾಬ್, ಖಾಸೀಮ್ ಸಾಹೇಬ್, ಬಾಗಳಿ ಹಾಸನ್ ಸಾಬ್. ಅನನ್ ಸಾಬ್ ಜಾಮೀರ್, ಸಲಾಂ ಸಾಬ್, ಸಾಲೀಹ, ರಾಜಾಭಕ್ಷಿ, ಕಲಾಂದರ್, ಅಮಾನೂಲ್ಲಾ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ