ಹೊಸದುರ್ಗ:
ಸಾವು ಸಮೀಸುವ ಮುನ್ನವೇ ಸಾರ್ಥಕ ಮತ್ತು ಸಮರ್ಪಕ ಜೀವನವನ್ನು ಸಾಗಿಸಬೇಕು ಎಂದು ಕುಂಚಿಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಎಸ್.ನೇರಲಕೆರೆ ಗ್ರಾಮದಲ್ಲಿ ನಡೆದ ತಾಪಂ ಸದಸ್ಯ ದಿ.ಈಶ್ವರಪ್ಪನವರ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬದುಕಿಗೆ ಶ್ರೇಷ್ಠತೆಯನ್ನು ತಂದು ಕೊಳ್ಳುವ ವ್ಯಕ್ತಿಗಳು ಸಮಾಜದಲ್ಲಿ ಶ್ರೇಷ್ಠರಾಗಿ ಬದುಕುತ್ತಾರೆ ಮತ್ತು ಬಾಳುತ್ತಾರೆ. ಜನನ ಮತ್ತು ಮರಣಗಳ ಮಧ್ಯೆ ಇರುವ ಜೀವನವನ್ನು ರೂಪಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು, ಸಾವೆಂಬುದು ಸರ್ವರಿಗೂ ಸಮನಾಗಿ ಕಾಣುತ್ತದೆ ಎಂದರು.
ಸಾವು ಬರುವುದು ಸಹಜ ಆ ಸಾವಿನ ಅಂಜದೆ ಸಾರ್ಥಕತೆ ಕಡೆಗೆ, ಪರಿಪೂರ್ಣ ಕಡೆಗೆ ಮತ್ತು ಪರಮಾತ್ಮನ ಕಡೆಗೆ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನಮ್ಮ ಬದುಕಿಗೆ ಅರ್ಥ ತಂದುಕೊಳ್ಳಬೇಕು ಎಂದರು.ಜೀವನದಲ್ಲಿ ನಮಗೆ ಒದಗಿ ಬರುವ ಯಾವುದೇ ಕ್ಷೇತ್ರವಾದರೂ ಆ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಆಶ್ರ್ರೀವಚನ ನೀಡಿದರು.ಇದೇ ವೇಳೆ ಕೋಡಿಹಳ್ಳಿ ತಮ್ಮಣ್ಣ, ರಂಗನಾಥ್, ಬೋಮ್ಮೇನಹಳ್ಳಿ ಶಿವಮೂರ್ತಿ, ಹನುಮಂತಪ್ಪ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ