ಮಲೇಬೆನ್ನೂರು
ಹೋಬಳಿ ವ್ಯಾಪ್ತಿತಲ್ಲಿ ಆಲಿಕಲ್ಲು ಮಳೆಗೆ ಸಿಲುಕಿ ನೆಲಕಚ್ಚಿದ ಭತ್ತದಗದ್ದೆಗಳಿಗೆ ಸಂಸದ ಜಿ.ಎಂ.. ಸಿದ್ದೇಶ್ವರ ಹಾಗೂ ಶಾಸಕ ಎಸ್ ರಾಮಪ್ಪ ಹಾಗೂ ಮಾಜಿ ಶಾಸಕ ಎಚ್ ಶಿವಶಂಕರ್ ಬುಧವಾರ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿದರು ಹರಳಹಳ್ಳಿ ಹಿರೆಹಾಲಿವಾಣ ಮಲ್ಲನಾಯ್ಕನಹಳ್ಳಿ ಕ್ಯಾಂಪ್ ಗುಳದಹಳ್ಳಿ ನಿಟ್ಟೂರು ಹಾಗೂ ಹೊನ್ನಾಳಿ ತಾಲ್ಲೂಕು ಯರಲ ಬನ್ನಿಕೋಡು ಯರೆಚಿಕ್ಕನಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ಆಲಿಕಲ್ಲು ಮಳೆಗೆ ಭತ್ತದ ಬೆಳೆ ನಾಶವಾಗಿದೆ
ಪ್ರಕೃತಿ ವಿಕೋಪ ಪರಿಹಾರ ಯೋಜನೆ ಅಡಿ ಕೇಂದ್ರ ಸರ್ಕಾರದಿಂದ ರೂ 13,500 ಪ್ರತಿ ಹೆಕ್ಟರಿಗೆ ಪರಿಹಾರ ಕೊಡಿಸುವ ಭರವಸೆಯನ್ನು ಸಂಸದರು ನೀಡಿದರು. ಬೆಳೆ ನಷ್ಟವಾಗಿರುವ ರೃತರು ಅಧಿಕಾರಿಗೆ ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ನೀಡುವಂತೆ ಕೋರಿದರು.
ಅತಿವೃಷ್ಟಿ ಯಾದರೂ ಕಷ್ಟ ಅನಾವೃಷ್ಟಿಯಾದರೂ ಕಷ್ಟ ಅಕಾಲಿಕ ಗಾಳಿಮಳೆ ಅಪಾರ ನಷ್ಟ ಉಂಟುಮಾಡಿದೆ 40 ಚೀಲ ಭತ್ತ ಬರುವ ಬದಲು 4ಚೀಲ ಬರುತ್ತಿದೆ. ಪ್ರಕೃತಿ ವಿಕೋಪಕ್ಕೆ ಅಡಿಕೆ ಬಾಳಿ ನೆಲಚ್ಚಿವೆ.
ಫನಲ್ ಬಿಮಾ ಯೋಜನೆ ಅಡಿ ನೊಂದಾಯಿಸಿದರಿಗೂ ಪರಿಹಾರ ಸಿಗಲಿದೆ. ಬೆಳೆಹಾನಿಗೊಳಗಾದ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಸರ್ಕಾರ ನಿಮ್ಮ ನೆರವಿಗೆ ಬರಲಿದೆ ಗಂಗಾವತಿಯಲ್ಲಿ ಪ್ರತಿ ಹೆಕ್ಟೇರಿಗೆ ನೀಡಿದ ರೂ 15,300 ಮಾದರಿಯಲ್ಲಿ ಪರಿಹಾರ ಕೊಡಿಸಲು ಯತ್ನಿಸುತ್ತೇನೆ ಎಂದು ಸಾಂತ್ವನ ಹೇಳಿದರು ಕಂದಾಯ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಜೊತೆಗೂಡಿ ನಷ್ಟದ ಅಂದಾಜು ಮಾಡುವಂತೆ ಶಾಸಕ ಎಸ್ ರಾಮಪ್ಪ ಸೂಚಿಸಿದರು.
ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಪರಿಹಾರ ಕೊಡಿಸುವ ಆಶ್ವಾಸನೆ ನೀಡಿದರು.ಮಾಜಿ ಶಾಸಕ ಬಿ.ಪಿ. ಹರೀಶ್, ಜಿ.ಪಂ. ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಎಪಿಎಂಸಿ ನಿರ್ದೇಶಕ ಮಂಜುನಾಥ್ ಪಟೇಲ್ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ರೈತರು ಇದ್ದರು.