ಸಂಸ್ಕೃತಿ ನಾಶಮಾಡುವ ಉದ್ದೇಶಗಳಿಗೆ ರಾಜನಾಥ್ ಸಿಂಗ್ ಅವಕಾಶ ಮಾಡಿಕೊಡಲಿಲ್ಲ : ಡಾ.ಎಸ್.ಎಲ್.ಭೈರಪ್ಪ

ಬೆಂಗಳೂರು

         ಹಿಂದೂ ಸಮಾಜಕ್ಕೆ ಪೆಟ್ಟುಬೀಳುವ ಹಾಗೂ ಸಂಸ್ಕೃತಿಯನ್ನು ನಾಶಮಾಡುವ ಇಂತಹ ಉದ್ದೇಶಗಳಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಅವಕಾಶ ಮಾಡಿಕೊಡಲಿಲ್ಲ.ಒಂದು ವೇಳೆ ಅಂತಹ ಪ್ರಯತ್ನಗಳು ಸಫಲವಾಗಿದೆ ಆದಲ್ಲಿ ಹೆಂಡತಿಯನ್ನು ಮುಟ್ಟುವ ಮುನ್ನ ಆಕೆಯ ಅಸಮಾಧಾನವಿಲ್ಲ ಎಂದು ರುಜು ಮಾಡಿಸಿಕೊಳ್ಳಬೇಕು ಎಂದು ಎಂದು ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

       ಪತ್ನಿಯ ಒಪ್ಪಿಗೆ ಇಲ್ಲದೇ ಪತಿ ಬಲವಂತವಾಗಿ ಮುಟ್ಟಿದರೇ ಅದು ಬಲತ್ಕಾರ ಎಂದು ಪರಿಗಣಿಸಲಾಗುತ್ತದೆ. ಎಂಬುದರ ಬಗ್ಗೆ ಸಂಸತ್‍ನಲ್ಲಿ ವಿಧೇಯಕ ಮಂಡಿಸುವ ಪ್ರಯತ್ನದ ಹಿಂದೆ ಕೆಲ ಮಹಿಳೆಯರಿದ್ದಾರೆ. ಇದು ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಎಂದರು.
ನಗರದ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಸಭಾಂಗಣದಲ್ಲಿ ಹಿರಿಯ ಸಾಹಿತಿ ದಿ. ಸುಮತೀಂದ್ರ ನಾಡಿಗರ ಕೊನೆಯ ಕೃತಿ ಶ್ರೀವತ್ಸ ಸ್ಮೃತಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಹಿಂದೂ ಸಮಾಜವನ್ನು ಒಡೆಯುವ ಇಂತಹ ಪ್ರಯತ್ನಗಳ ಹಿಂದೆ ಮ್ಯಾಟಿಕನ್ ನಗರದ ಮಹಿಳೆಯೊಬ್ಬಳು ಇದ್ದಾಳೆ.

       ಇಂತಹ ಯೋಜನೆಗಳು ಸಮಾಜವನ್ನು ಗಟ್ಟಿಗೊಳಿಸಲಾರವು ಎಂದು ಹೇಳಿದರು.ಇಂತಹ ಪ್ರಯತ್ನಗಳು ಹಿಂದೂ ಸಮಾಜದಲ್ಲೇಕೆ, ಅಲ್ಪ ಸಂಖ್ಯಾತ ವರ್ಗಗಳಲ್ಲಿ ಏಕೆ ಅನುಷ್ಟಾನಕ್ಕೆ ತರುವುದಿಲ್ಲ ಎಂದು ಹೇಳಿದ ಅವರು ಹಿಂದೂ ಸಮಾಜದ ದಾಂಪತ್ಯ ಜೀವನದ ಆದರ್ಶಗಳು ಗಟ್ಟಿಯಾಗಿರಬೇಕು ಈ ಪರಿಸ್ಥಿತಿಯಲ್ಲಿಯೇ ನಾಡಿಗರು ಇಂತಹ ಕೃತಿಗಳನ್ನು ರಚಿಸಿದ್ದಾರೆ ಎಂದರು.

          ಬ್ರಿಟಿಷರು ನಮ್ಮನ್ನು ಆಳಲು ಬಂದಾಗ ಅವರ ನೆಲದ ಸಂಸ್ಕೃತಿಯ ವಿವಾಹ ಮತ್ತು ಭೂ ಸುಧಾರಣೆ ಕಾನೂನುಗಳನ್ನು ಜಾರಿತರಲು ಹೋರಟಾಗ ಬಾರಿ ವಿರೋಧ ಎದುರಾಯಿತು. ಆಗ ಅದನ್ನು ಅರ್ಥ ಮಾಡಿಕೊಳ್ಳಲು ಬ್ರಿಟಿಷ್ ನ್ಯಾಯಾಧೀಶರು ನಡೆಸಿದ ಪ್ರಯತ್ನವನ್ನು ವಿವರಿಸಿದರು.

        ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಇರುವ ತಾರತಮ್ಯ ವನ್ನು ಪ್ರಸ್ತಾಪಿಸಿದ ಅವರು ದುಷ್ಟರ ಧಮನಕ್ಕಾಗಿ ದೇವತೆಗಳು ಚಾಮುಂಡೇಶ್ವರಿಯ ಮೊರೆ ಹೋದರು. ಇದು ಕೂಡ ಗಂಡಸರಿಗೆ ಆದ ಅವಮಾನ. ಇದನ್ನು ಗಮನದಲ್ಲಿಟ್ಟುಕೊಂಡು ಚಾಮುಂಡೇಶ್ವರಿ ದೇವಾಲಯವನ್ನು ನಿಷೇಧಿಸುವಂತೆ ಕೆಲವರು ನ್ಯಾಯಾಲಯಕ್ಕೆ ಹೋದರೆ ಗತಿ ಏನು ಎಂದು ಪ್ರಶ್ನಿಸಿದ ಅವರು ಸರಸ್ವತಿಯನ್ನು ವಿದ್ಯಾಧಿ ದೇವತೆ ಎನ್ನುತ್ತಾರೆ. ಹೆಣ್ಣನ್ನು ಆರಾಧಿಸುತ್ತಾರೆ. ಇದು ಗಂಡಸರಿಗೆ ಆದ ಅವಮಾನವಲ್ಲವೇ ಎಂದು ಹೇಳಿದರು.

         ನವೋದಯ ಕಾಲದಿಂದಲೂ ನಮ್ಮ ಸಾಹಿತ್ಯದಲ್ಲೂ ಇಂಗ್ಲಿಷ್ ಪ್ರಭಾವ ಆಗಿದೆ. ಆರಂಭದಲ್ಲಿ ಇಂಗ್ಲಿಷ್ ಕಾವ್ಯಗಳು ಪ್ರಭಾವ ಬೀರಿದ್ದರೂ ಮೂಲ ಸ್ವರೂಪಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಯಿತು ಆದರೆ ನಂತರದಲ್ಲಿ ಬಂದ ನವ್ಯ ಕವಿಗಳು ಇಂಗ್ಲಿಷ್ ಮೂಲವನ್ನೇ ಬಳಸಿಕೊಂಡರು ಎಂದರು. ನಾಡಿಗರು ತಮ್ಮ ಪದ್ಯಗಳಲ್ಲಿ ಕಿಟ್ಟಲೆ ರಸವನ್ನು ಸೇರಿಸಿದ್ದಾರೆ.ಮೊದಲೇ ಕಿಟ್ಟಲೆ ಸ್ವಭಾವರಾದ ಅವರು ಪದ್ಯಗಳಲ್ಲಿ ಅವರ ಸೃಜನಾಶೀಲತೆ ಕಾಣಬಹುದು ಎಂದರು.

        ಸುಮತೀಂದ್ರ ನಾಡಿಗರ ಪತ್ನಿ ಮಾಲತಿ ನಾಡಿಗ ಮಾತನಾಡಿ ಶ್ರೀ ವತ್ಸ ಸ್ಮೃತಿ ಮೊದಲೇ ಲೋಕಾರ್ಪಣೆಯಾಗಬೇಕಿತ್ತು. ಆದರೆ ನಾಡಿಗರು ನಿಧನದ ನಂತರ ಬಿಡುಗಡೆ ಯಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.ಸಾಹಿತಿ ಕೋರ್ಗಿ ಶಂಕರ ನಾರಾಯಣ ಉಪಾಧ್ಯಾಯ ಕೃತಿ ಕುರಿತು ಮಾತನಾಡಿದರು. ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ, ಹುಬ್ಬಳ್ಳಿ ಸಾಹಿತ್ಯ ಪ್ರಕಾಶನ ಎಂ.ಎ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link