ಹೊಸಪೇಟೆ :
ಇಲ್ಲಿನ ಅರವಿಂದ ನಗರದ ಶಾದಿಮಹಲ್‍ನಲ್ಲಿ “ನೂರೆ ರಿದಾಯಿ ಫಾತಿಮಾ’ ಟ್ರಸ್ಟ್‍ನಿಂದ ಗುರುವಾರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ 14 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನೂತನ ವಧು-ವರರನ್ನು ಆಶೀರ್ವದಿಸಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆ ಮಾಡಿಕೊಳ್ಳುವುದ ರಿಂದ ತಂದೆ ತಾಯಿಗಳಿಗೆ ಆರ್ಥಿಕ ಹೊರೆಯಾಗುವುದಿಲ್ಲ.
ಜೊತೆಗೆ ಸಾಲ ತೀರಿಸುವ ತಾಪತ್ರಯ ಇಲ್ಲದೇ ದಂಪತಿಗಳು ಸಹ ನೆಮ್ಮದಿಯಿಂದ ಜೀವನ ನಡೆಸಬಹುದು. ಇಸ್ಲಾಂ ಧರ್ಮವೂ ಸಹ ಇದೇ ರೀತಿ ವಿವಾಹಗಳನ್ನು ಪ್ರೋತ್ಸಾಹಿಸುತ್ತದೆ ಎಂದರು.
ನಂತರ ಧರ್ಮಗುರು ಮೌಲಾನಾ ಅಬುಬಕರ್‍ರವರು ಆಶೀರ್ವಚನ ನೀಡಿ, ನೂತನ ವಧು-ವರರು ಆಸ್ತಿ, ಹಣ, ಯಾವುದು ಶಾಶ್ವತವಲ್ಲ. ಅವುಗಳ ಮೇಲೆ ಜಾಸ್ತಿ ಅವಲಂಬಿತರಾಗದೇ, ಪ್ರೀತಿ ವಿಶ್ವಾಸ ನಂಬಿಕೆ ಭಯ ಭಕ್ತಿಗಳಿಂದ ಜೀವನ ಸಾಗಿಸುವಂತಾಗಬೇಕು. ಹಾಗಾದಾಗ ಮಾತ್ರ ಧೀರ್ಘಕಾಲದವರೆಗೆ ಸುಖ ಶಾಂತಿ ಸಮೃಧ್ಧಿಯಿಂದ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಟ್ರಸ್ಟ್‍ನ ಅಧ್ಯಕ್ಷ ಆಲಮ್ ಬಾಷಾ, ನಬಿಸಾಬ್ ಫಯಾಜ್ ಬೇಗ್, ಸಾದಿಕ್ ವಲಿ ಸದ್ದಾಮ್ ಹುಸೇನ್ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ