ಗುತ್ತಲ:
ಮಾನವನ ಜೀವನದಲ್ಲಿ ಬರುವ ನಾಲ್ಕು ಆಶ್ರಮಗಳಲ್ಲಿ ಗ್ರಹಸ್ಥಾಶ್ರಮ ಶ್ರೇಷ್ಠವಾದದ್ದು ಎಂದು ನೆಗಳೂ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ನೆಗಳೂರ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ಗ್ರಾಮ ಸುಧರಣಾ ಸಮಿತಿ ವತಿಯಿಂದ ಮಂಗಳವಾರ ಜರುಗಿದ ಉಚಿತ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಸಂತ ಮಹಾತ್ಮರು ಸೈನಿಕ ವೈಣಿಕ ಕೃಷಿಕರೆಲ್ಲರು ಗೃಹಸ್ಥಾಶ್ರಮ ದಿಂದಲೇ ಬಂದವರಾಗಿದ್ದಾರೆ ಗ್ರಾಮ ಸುಧರಣಾ ಸಮಿತಿಯವರ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಗುರುಶಾಂತಯ್ಯ.
ದಿಗಂಬರಮಠ ಮಂಜಯ್ಯ ದಿಗಂಬರಮಠ ಅಭಿಜಿತ್ ದಿಗಂಬರಮಠ ಸಿದ್ದಮಲ್ಲಪ್ಪ ಬಾಲಣ್ಣನವರ ರಾಜಪ್ಪ ತಾವರೆ ಸಿದ್ದನಗೌಡ ಹರಕಂಗಿ ಬಸನಗೌಡ ಸುಕುಳಿ ಭರಮಣ್ಣ ದೊಡ್ಡಿರಪ್ಪನವರ ರುದ್ರಗೌಡ ರೊಡ್ಡಗೌಡ್ರ ರವಿಚಂದ್ರ ಬಾಲಣ್ಣನವರ ಸೇರಿದಂತೆ ಗ್ರಾಮ ಸುಧರಣಾ ಸಮಿತಿಯ ಸದಸ್ಯರು ಇದ್ದರು. ಇದೇ ಸಂದರ್ಭದಲ್ಲಿ 4 ಜೋಡಿ ವಿವಾಹ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಭದ್ರಾವತಿಯ ಯಶ್ ಮೆಲೋಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ಜರುಗಿತು