ಏ.17ರಂದು ಸಾಮೂಹಿಕ ಉಪನಯನ-ವಿವಾಹ

ದಾವಣಗೆರೆ:

         ಜಿಲ್ಲಾ ವಿಶ್ವಕರ್ಮ ಸಮಾಜ ಸಂಘ ಮತ್ತು ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಏ.17ರಂದು 36ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಸಂಘದ ವಿ.ಎಂ.ಕೊಟ್ರೇಶಾಚಾರ್ ತಿಳಿಸಿದರು.

        ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಾಳಿಕಾದೇವಿ ರಸ್ತೆಯ ಶ್ರೀಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಅಂದು ಬೆಳಿಗ್ಗೆ 4.28ರಿಂದ 5.16ರ ವರೆಗೆ ಉಪನಯನ ಸ್ವೀಕರಿಸುವ ವಟುಗಳಿಗೆ ಯಜ್ಞೋಪವೀತ ಧಾರಣೆ ಮತ್ತು ಬ್ರಹ್ಮೋಪದೇಶ ಹಾಗೂ ಬೆಳಿಗ್ಗೆ 8.05ರಿಂದ 9.30ರ ವರೆಗೆ ಸಲ್ಲುವ ವೃಷಭ ಲಗ್ನದಲ್ಲಿ ಸಾಮೂಹಿಕ ವಿವಾಹ ನೆರವೇರಲಿದೆ ಎಂದು ಹೇಳಿದರು.

        ನಂತರ ಬೆಳಿಗ್ಗೆ 11.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಕ್ಷೇತ್ರ ನವಲಗುಂದ ಶ್ರೀಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಮಠದ ಶ್ರೀವೀರೇಂದ್ರ ಸ್ವಾಮೀಜಿ ಹಾಗೂ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ವಹಿಸುವರು.

           ಸಂಘದ ಅಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ಬಿಐeಟಿ ಕಾಲೇಜು ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ, ಜವಳಿ ವರ್ತಕ ಬಿ.ಸಿ.ಉಮಾಪತಿ, ಪತ್ರಕರ್ತ ಎಂ.ಎಸ್.ವಿಕಾಸ್, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಬಿ.ಎಲ್.ಸೀತಾರಾಮಾಚಾರ್, ಜಿಲ್ಲಾಧ್ಯಕ್ಷ ಕೆ.ಪಿ.ಮರಿಯಾಚಾರ್ ಮತ್ತಿತರರು ಭಾಗವಹಿಸಲಿದ್ದಾರೆಂದು ಅವರು ವಿವರಿಸಿದರು.

        ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಸಾಪುರದ ಬಿ. ನಾಗೇಂದ್ರಾಚಾರ್, ನಿರ್ದೇಶಕರುಗಳಾದ ಬೇತೂರು ಆರ್. ವಿಜಯಕುಮಾರ್, ಬೇತೂರು ಎಂ.ಮಂಜುನಾಥಾಚಾರ್, ಜಿ.ಬಿ.ಬ್ರಹ್ಮಾಚಾರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link