ಸಂವಿಧಾನ ಗೌರವಿಸದೇ ಇರುವರು ದೇಶದ ಪ್ರಜೆಯಾಗಲು ನಾಲಾಯಕ್

ಹಾವೇರಿ :

       ಸಂವಿಧಾನ ಗೌರವಿಸದೇ ಇರುವರು ದೇಶದ ಪ್ರಜೆಯಾಗಲು ನಾಲಾಯಕ್. ಡಾ|| ಬಿ,ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಿದ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ನಾಮಪತ್ರ ಸಲ್ಲಿಸುವ ನಿಮಿತ್ಯ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಅವರು ಬಿಜೆಪಿ ಪಕ್ಷದ ವಿರುದ್ಧ ವಾಕ್ ಸಮರ ನಡೆಸಿದರು.

       2014 ರಲ್ಲಿ ಬಿಜೆಪಿ ಪಕ್ಷದ ಜನರಿಗೆ ಆಕಾಶ ತೊರಿಸುವ ಹಾಗೂ ಜನರಿಗೆ ಸುಳ್ಳು ಭರವಸೆ ನೀಡಿ ದೇಶ ಜನರಿಗೆ ಮೋಸ ಮಾಡಿದ್ದಾರೆ. ಕಪ್ಪು ಹಣ ಎಲ್ಲಿ ? ಪ್ರತಿ ವರ್ಷ 2 ಕೋಟಿ ಉದ್ಯೋಗ ಎಲ್ಲಿ ? ಅಚ್ಚೇ ದಿನಾ ಎಲ್ಲಿ ? ಬಂಡವಾಳಶಾಹಿಗೆ ಮಾತ್ರ ಅಚ್ಚೇ ದಿನಾ ಬಂದಿದೆ. ಸಂವಿಧಾನದಿಂದ ಈ ಎಲ್ಲ ಅಧಿಕಾರ ಪಡೆದ ಬಿಜೆಪಿ ಪಕ್ಷ ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಹೇಳುವ ಅವರು ಇವರದು ಯಾವ ಸಿದ್ದಾಂತ ? ಜವಾಬ್ದಾರಿಯುತ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಇತಿಹಾಸ ಓದಿ ತಿಳಿಯಲಿ, ಗ್ರಾಮ ಪಂಚಾಯತ ಸದಸ್ಯರಾಗಲು ಅನರ್ಹ ವ್ಯಕ್ತಿ ಎಂದು ಟೀಕಿಸಿದರು.

         ಬಿಜೆಪಿ ಪಕ್ಷ 28 ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗದವರಿಗೆ ಒಂದು ಸೀಟ್ ನೀಡಿಲ್ಲಾ,ಕೆಎಸ್ ಈಶ್ವರಪ್ಪಗೆ ಮಾನ ಮರ್ಯಾದೆ ಇದ್ದರೆ ಬಿಜೆಪಿ ಪಕ್ಷ ತೊರೆಯಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.ಬಿಜೆಪಿ ಪಕ್ಷದವರು ಕೇಂದ್ರದಲ್ಲಿ 5 ವರ್ಷ ಆಡಳಿತದಲ್ಲಿ ಜನಪರ ಅಭಿವೃದ್ದಿಪರ ಕೆಲಸ ಮಾಡದೇ ಎಲ್ಲ ಜನರಿಗೆ ಸಾಮಾಜಿಕ ನ್ಯಾಯ ಒದಗಿಸದೇ ಜನರನ್ನು ಭ್ರಮನಿರಸರನ್ನಾಗಿ ಮಾಡಿದ್ದಾರೆ.

ರೈತರ ಬಗ್ಗೆ ಉದಾಸಿ ಉದಾಸೀನತೆ :

        ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಸಂಸದರಾಗಿ ಸಂಸತ್ತಿನಲ್ಲಿ ರೈತರ ಬಡವರ ಹಿಂದುಳಿದವರು ಸಮಸ್ಯೆಗಳಿಗೆ ಧ್ವನಿ ಎತ್ತಿರುವುದನ್ನು ನಾವು ಕಂಡಿಲ್ಲ.ಬಿಜೆಪಿ ಪಕ್ಷದ ಶಿವಕುಮಾರ ಉದಾಸಿ ಹಾಗೂ ಕಾಂಗ್ರೇಸ್ ಪಕ್ಷದ ಡಿಆರ್ ಪಾಟೀಲ ತೂಕ ಮಾಡಿದರೆ ಗಾಂಧೀ ತತ್ವದ ಡಿಆರ್ ಪಾಟೀಲ ಜಾಸ್ತಿ ಮೌಲ್ಯಯುತ ಉತ್ತಮ ಜನಪರ ಕೆಲಸ ಮಡುವ ಕ್ರೀಯಾಶೀಲ ವ್ಯಕ್ತಿಗಳಾಗಿದ್ದಾರೆ.

          ಡಿಆರ್ ಪಾಟೀಲ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೇಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದು ಬಡವರ ದಿನ ದಲಿತರ ಹಿಂದುಳಿದವರ ಸರ್ವಾಂಗಿಣ ಅಭಿವೃದ್ಧಿಗಾಗಿ ತಾವೆಲ್ಲರೂ ಕೈ ಜೋಡಿಸಬೇಕು. ಈ ಕ್ಷೇತ್ರ ಅಭಿವೃದ್ದಿ ಆಗಬೇಕಾದರೆ ಡಿಆರ್ ಪಾಟೀಲ ಸಂಸತ್ತಿಗೆ ಹೋಗಲು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿ ಎತ್ತಲು ನೀವೆಲ್ಲರೂ ಶ್ರಮ ಹಾಕಿ ಕೆಲಸ ಮಾಡುವ ಡಿಆರ್ ಪಾಟೀಲ ಅವರನ್ನು ಗೆಲ್ಲಿಸಿ ಎಂದು ವಿನಿಂತಿಸಿದರು.

           ಕಾಂಗ್ರೇಸ್ ಮುಖಂಡ ಸಿಎಂ ಇಬ್ರಾಹಿಂ ಮಾತನಾಡಿ ಸಜ್ಜನ ಹಾವೇರಿ ನಾಡಲ್ಲಿ ಧಾರವಾಡ ಭಾಗದ ಗಾಂಧಿ ಡಿಆರ್ ಪಾಟೀಲರಂತಹ ಮೌಲ್ಯಯುತ ಹಾಗೂ ಜನಪರ ಕೆಲಸ ಮಾಡುವ ಹಾಗೂ 4 ಬಾರಿ ಶಾಸಕರಾಗಿ ಅನುಭವ ಹೊಂದಿರುವ ಇವರನ್ನು ಎಲ್ಲರ ಆರ್ಶಿವಾದದಿಂದ ಆಯ್ಕೆ ಮಾಡುತ್ತಿರಿ ಎಂಬ ನಂಬಿಕೆ ಇದೆ.ಅರವತ್ತಾರು ಇಂಚು ಎದೆ ಇದ್ದರೆ ಸಾಲದು, ಅನ್ನ ನೀಡುವ ಹಾಗೂ ಎಲ್ಲ ವರ್ಗದ ಜನರನ್ನು ಏಕರೂಪವಾಗಿ ಅಭಿವೃದ್ದಿ ಮಾಡುವ ಕಾಂಗ್ರೇಸ್ ಪಕ್ಷದ ಸಿದ್ದರಮಯ್ಯರವರಂತಹ ಹೃದಯ ಇರಬೇಕು. ಭಾವನಾತ್ಮಕ ವಿಷ ಬೀಜ ಭಿತ್ತಿ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದರೆ ದೇಶದ ಜನರಿಗೆ ಮಾಡು ಮೋದಿ ಮಾಡುವ ಮೋಸ ಎಂದು ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

          ಬಿಜೆಪಿ ಪಕ್ಷದ ಬಣ್ಣ ಬಯಲು ಮಾಡಿದ ಮಾಜಿ ಸೈನಾಧಿಕಾರಿ : ಭಾರತೀಯ ಸೈನ್ಯದ ಮಾಜಿ ಉಪ ದಂಡಾಧಿಕಾರಿಗಳಾದ ರಮೇಶ್ ಹನಗಲಿ ಮಾತನಾಡಿ ಬಿಜೆಪಿ ಪಕ್ಷ ದೇಶದ ಮುಖ್ಯ ವಿಷಯವನ್ನು ಮಾತನಾಡಲು ತಯಾರಿಲ್ಲಾ,ಬಡತನ, ನಿರುದ್ಯೋಗ,ರೈತರ ಸಮಸ್ಯೆ ಈ ವಿಚಾರ ಬಿಜೆಪಿ ಪಕ್ಷಕ್ಕೆ ಬೇಕಾಗಿಲ್ಲ.ರಾಷ್ಟೀಯತೆ, ರಾಷ್ಟ ರಕ್ಷಣೆ ಅಂತಾರೆ. ಪ್ರಧಾನ ಮಂತ್ರಿಗಳು ಎಷ್ಟು ಸುಳ್ಳು ಹೇಳಿದರು. ಚುನಾವಣೆ ಗೆಲ್ಲಲು ಪ್ರಧಾನ ಮಂತ್ರಿಗಳು ಸರ್ಜಿಕಲ್ ಸ್ಟ್ರೈಕ್ ಮಾಡಲು ಮುಂದಾಗಿದ್ದಾರೆ.

         ಕಾಶ್ಮೀರ ಭಾಗದಲ್ಲಿ ದಾಳಿ ಆಗುವ ವಿಷಯ ಗೊತ್ತಿದ್ದರೂ ಉತ್ತರ ಪ್ರದೇಶದಲ್ಲಿ ಪೀಲ್ಮ ಸೊಟಿಂಗ್ ಮಾಡತ್ತಿದ್ದರು. ರಾತ್ರಿ ಎಂಟು ಗಂಟೆ ಆದರೂ ಇದರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರಲಿಲ್ಲಾ. 40 ಕ್ಕೂ ಹೆಚ್ಚು ಸೈನಿಕರ ಹುತಾತ್ಮರಾದ ವಿಷಯವನ್ನು ಪ್ರಧಾನಿಯವರು ಮುಚ್ಚಿ ಇಡುತ್ತಾರೆ.ಸರಿಯಾದ ಪ್ಲಾನ್ ಇಲ್ಲದೇ ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ಎಲ್ಲಿ ಏನು ನಡಿತು ಎಂಬುವುದು ಗೊತ್ತಾಗುತ್ತಿಲ್ಲಾ ಆದರೆ ಬಿಜೆಪಿಯವರು ಅಲ್ಲಿ ಅಷ್ಟು ಜನ ಸತ್ತರು ಎಂದು ಗೊಬ್ಬೆ ಹೊಡೆಯುತ್ತಿದ್ದಾರೆ. ಪ್ರಧಾನಮಂತ್ರಿಗಳು ಸುಳ್ಳು ಹೇಳುತ್ತಾರೆ.ಎಲ್ಲದರಲ್ಲಿ ಪ್ರಧಾನಿಗಳು ಪೇಲ್ ಆಗಿದ್ದಾರೆ.

        25 ಲಕ್ಷ ಕೊಟ್ ಹಾಕಬಹುದು. ಆದರೆ ಸೈನಿಕರ ಮೌಲ್ಯಯುತ ಸಮವಸ್ತ್ರ ಹಾಕಬಾರದು ಇದರ ವಿರುದ್ಧ ರಾಷ್ಟ್ರಪತಿಗೆ ದೂರ ನೀಡಲಾಗುತ್ತದೆ. ಭಾರತ ಸೇನಾ ನಾವು, ನರೇಂದ್ರ ಮೋದಿ ಸೇನಾ ಅಲ್ಲಾ ಎಂದು ಸೇನಾಧಿಕಾರಿಗಳು ಬಿಜೆಪಿ ಪಕ್ಷ ಹಾಗೂ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್,ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ,ಮಾಜಿ ಸಚಿವ ಬಸವರಾಜ ಶಿವಣ್ಣನವರ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ ಆರ್ ಪಾಟೀಲ.ಶಾಸಕ ಬಿಸಿ ಪಾಟೀಲ.ಎಚ್ ಕೆ ಪಾಟೀಲ ಬಿಜೆಪಿ ಪಕ್ಷದ ವಿಫಲತೆಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

         ಈ ಸಂದರ್ಭದಲ್ಲಿ ಸಚಿವ ಜಿ,ಟಿ ಪರಮೇಶ್ವರ ನಾಯ್ಕ,ಮಾಜಿ ಸಚಿವ ರುದ್ರಪ್ಪ ಲಮಾಣಿ,ಮುಖಂಡರಾದ ಕೆಬಿ ಕೋಳಿವಾಡ.ಐ,ಜಿ ಸನದಿ.ಶ್ರೀನಿವಾಸ್ ಮಾನೆ,ಈರಣ್ಣ ಮತ್ತಿಕಟ್ಟಿ.ಮನೋಹರ್ ತಹಶೀಲ್ದಾರ,ಜಿಎಸ್ ಪಾಟೀಲ,ಅಜೀಂಪೀರ್ ಖಾದ್ರಿ,ಕೋನರಡ್ಡಿ,ಜಯಸಿಂಹ,ಕೆ ಎಸ್ ಸಿದ್ದಬಸಪ್ಪ ಯಾದವ್,ಅಶೋಕ ಬೇವಿನಮರದ.ಎಂಎಂ ಹಿರೇಮಠ,ಕೊಟ್ರೇಶಪ್ಪ ಬಸೇಗಣ್ಣಿ,ಸಂಜೀವಕುಮಾರ ನೀರಲಗಿ ಸೇರಿದಂತೆ ರಾಜ್ಯ,ಜಿಲ್ಲೆಯ ಸೇರಿದಂತೆ ಉಭಯ ಪಕ್ಷದ ಮುಖಂಡರು ಹಾಗೂ ಅಪಾರ ಪ್ರಮಾಣದ ಕಾರ್ಯಕರ್ತರು ಭಾಗಿಯಾಗಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link