ಬೆಂಗಳೂರು
ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮಾಜಿ ಸಚಿವರು ಹಾಗೂ ಶಾಸಕರ ಹನಿಟ್ರ್ಯಾಪ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿಯರು ಭಾಗಿಯಾಗಿರುವ ಶಂಕೆ ಸಿಸಿಬಿ ಪೋಲೀಸರ ತನಿಖೆಯಲ್ಲಿ ವ್ಯಕ್ತವಾಗಿದೆ. ಹನಿಟ್ರ್ಯಾಪ್‍ನಲ್ಲಿ ಸ್ಯಾಂಡಲ್ ವುಡ್‍ನ ಮೂವರು ನಟಿಯರು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿ ಅದನ್ನು ಕೂಲಂಕಶ ತನಿಖೆ ನಡೆಸಲು ಸಿಸಿಬಿ ಪೋಲೀಸರು ಮುಂದಾಗಿದ್ದಾರೆ. ಹನಿಟ್ರ್ಯಾಪ್‍ನಲ್ಲಿ ಭಾಗಿಯಾಗಿರುವ ಮೂವರಲ್ಲಿ ಒಬ್ಬರು ಒಂದು ಕಾಲದ ಸ್ಟಾರ್ ನಟಿಯಾಗಿದ್ದರೆ, ಇನ್ನಿಬ್ಬರು ಎರಡು ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.
ಇವರ ಬಗ್ಗೆ ಮಾಹಿತಿ ಸಂಗ್ರಹಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಶೀಘ್ರವೆ ಮೂವರು ನಟಿಯರನ್ನು ವಿಚಾರಣೆ ನಡೆಸಲು ಪೋಲೀಸರು ಮುಂದಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹನಿಟ್ರ್ಯಾಪ್‍ನಲ್ಲಿ ಸಿಲುಕಿರುವ ಒಬ್ಬಾಕೆ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದು ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿದ್ದ ಈಕೆಗೆ ಇತ್ತೀಚೆಗೆ ಅವಕಾಶಗಳ ಕೊರತೆ ಕಂಡುಬಂತು. ಸ್ಟಾರ್ ಹೀರೋಗಳ ಜೊತೆಗೂ ಈಕೆ ನಟಿಸಿದ್ದಾಳೆ. ಅಲ್ಲದೆ ನಿರ್ಮಾಪಕರ ಜೊತೆಗೂ ಈಕೆ ನಂಟು ಹೊಂದಿದ್ದಾಳೆ. ಈಕೆ ಕನ್ನಡದ ನಟಿಯಲ್ಲ ಬದಲಾಗಿ ಪರರಾಜ್ಯ ನಟಿಯಾಗಿದ್ದಾಳೆ.
ಎರಡನೆಯ ನಟಿ ಕೂಡ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾಳೆ. ಹೀರೋಯಿನ್ ಜೊತೆಗೆ ಸಹನಟಿಯಾಗಿ ಅಭಿನಯ ಮಾಡಿದ್ದಾಳೆ. ಈ ನಟಿ ಕರ್ನಾಟಕ ಮೂಲದವಳು ಎಂದು ಹೇಳಲಾಗುತ್ತಿದ್ದು, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಬಹುಬೇಡಿಕೆ ನಟಿ ಅಲ್ಲದಿದ್ದರೂ ಈಕೆಗೆ ಬೇಡಿಕೆ ಬಹಳ ಇತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮೂರನೆಯವಳು ಒಂದು ರೀತಿ ಬಹುಭಾಷಾ ನಟಿಯಾಗಿದ್ದಾಳೆ. ಹಸಿಬಿಸಿ ದೃಶ್ಯಾವಳಿಗಳಿಗೆ ಈ ನಟಿ ಹೆಸರುವಾಸಿವಾಗಿದ್ದು, ಕನ್ನಡ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲೂ ನಟನೆ ಮಾಡಿದ್ದಾಳೆ. ಈಕೆಗೆ ಉದ್ಯಮಿಗಳು, ಅಧಿಕಾರಿಗಳ ಜೊತೆಗೂ ನಂಟಿದೆ. ಈ ಹಿಂದೆಯೂ ಈಕೆಯ ವ್ಯವಹಾರ ಭಾರಿ ಸುದ್ದಿಯಾಗಿತ್ತು ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
