ಬೆಂಗಳೂರು
ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಎಲ್ಲ ಜನನಾಯಕರಿಗೆ ನೇರವಾದ ಪ್ರಶ್ನೆಯೊಂದು ಕೇಳಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಉಪೇಂದ್ರ ಅವರು, ಕರೋನಾ ಮುಕ್ತ ಭಾರತ ಎಂದು ಯಾವಾಗ ಘೋಷಿಸುವಿರಿ(?) ನೂರಾ ಮೂವತ್ತು ಕೋಟಿ ಜನರನ್ನೂ ತಪಾಸಣೆ ಮಾಡಿದ ನಂತರವೇ(?) ಅಲ್ಲಿಯವರೆಗೂ ಲಾಕ್ಡೌನ್ ಮುಂದುವರೆ ಯುವುದೇ (?) ಅದಕ್ಕೆ ಮುಂಚೆ ಲಾಕ್ಡೌನ್ ತೆರವು ಮಾಡಿದರೆ ಪ್ರಜೆಗಳಿಗೆ ಅಪಾಯವಲ್ಲವೇ(?) ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈಗಾಗಲೇ ಕೊರೊನಾ ಸೋಂಕು ನಿಯಂತ್ರಿಸಲು ದೇಶವ್ಯಾಪಿ ಏ. 14ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ, ಕೊರೊನಾ ವೈರಸ್ ಸೋಂಕಿತ ಸಂಖ್ಯೆ ಹೆಚ್ಚುತ್ತಲೇ ಇದೆ ಹೊರತಾಗಿ ಕಡಿಮೆ ಆಗುತ್ತಿಲ್ಲ. ಇದರಿಂದ ಜನರಲ್ಲಿ ಇನ್ನಷ್ಟು ಆತಂಕ ಮನೆ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
