ಚಳ್ಳಕೆರೆ
ಕಳೆದ ನೂರಾರು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಹಳೇ ಸಂಪ್ರದಾಯ ಪದ್ದತಿಗಳನ್ನು ರೂಢಿಸಿಕೊಂಡು ಹೋಗುವಲ್ಲಿ ನಾವು ಯಶಸ್ಸಿಯಾಗಿದ್ದೇವೆ. ಹಿರಿಯರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸುವುದರಲ್ಲಿ ಯಾವುದೇ ಲೋಪವಿಲ್ಲ. ಕಾರಣ ಸಮಾಜದ ಹಿತಕ್ಕಾಗಿ ಸಮುದಾಯದಗಳ ಒಳಿತಿಗಾಗಿ ಮಾಡುವ ಪ್ರತಿಯೊಂದು ಕಾರ್ಯವು ಶ್ರೇಷ್ಠತೆಯಿಂದ ಕೂಡಿರುತ್ತದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ತಡರಾತ್ರಿ ಸಾಣೇಕೆರೆ ಗ್ರಾಮದ ಕಟ್ಟೆಮನೆ ವಂಶಸ್ಥರು ನಡೆಸಿದ ಕುಂಬಮೇಳ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಇಂದಿಗೂ ಸಹ ಸಮುದಾಯದ ಜೊತೆಗೆ ಸಮಾಜವನ್ನು ಒಗ್ಗೂಡಿಸುವಲ್ಲಿ ಯಶಸ್ಸಿಯಾಗಿವೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಗ್ರಾಮದಲ್ಲಿ ಸಾಮರಸ್ಯ ಮೂಡಿಸಲಿ ಎಂದು ಅವರು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ಈ ಒಂದು ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರಕಿದ್ದು, ಸಂತಸ ತಂದಿದೆ. ಸಾಣೀಕೆರೆ ಕಟ್ಟೆಮನೆ ವಂಶಸ್ಥರ ಕುಂಬಮೇಳ ತನ್ನದೇಯಾದ ವೈಶಿಷ್ಟ್ಯತೆಯನ್ನು ಹೊಂದಿದೆ. ರಾಜ್ಯದಲ್ಲಿರುವ ಈ ಕಟ್ಟೆಮನೆಯ ಎಲ್ಲಾ ಸಹೋದರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಿರಿಯರಿಗೆ ಗೌರವ ಸೂಚಿಸುವ ಈ ಕಾರ್ಯ ಅಭಿನಂದನಿಯವೆಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಆಂಜನೇಯ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್, ಕಟ್ಟೆ ಮನೆ ವಂಶದ ಹಿರಿಯ ಮುಖಂಡ, ನಿವೃತ್ತ ಮುಖ್ಯೋಪಾದ್ಯಾಯ ಹನುಮಂತಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
