ಕೊಪ್ಪಳ
ದೇಶದ 130 ಕೋಟಿ ಜನರ ಕಾವುಲುಗಾರ ಪ್ರಧಾನಿ ನರೇಂದ್ರ ಮೋದಿ ಮೊತ್ತಮ್ಮೆ ಎಂದು ಸಿರುಗುಪ್ಪ ಕ್ಷೇತ್ರದ ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು. ಅವರು ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರ ಮಂಗಳವಾರ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು
ದೇಶದ ಅಭಿವೃಧ್ಧಿಗಾಗಿ ಮೋದಿಯವರ ಕೊಡುಗೆ ಅಪಾರವಾಗಿದೆ ಮಾತ್ರವಲ್ಲದೆ ದೇಶದ ಆರ್ಥಿಕ ಬಲವನ್ನು ಹೆಚ್ಚಿಸುವಲ್ಲಿ ಶ್ರಮಪಟ್ಟಿದ್ದಾರೆ. ಈ ಹಿಂದೆ ಕೊಪ್ಪಳ ಕ್ಷೇತ್ರದ ಸಂಸದರಾಗಿದ್ದ ಕರಡಿ ಸಂಗಣ್ಣ ರಸ್ತೆ, ಸೇತುವೆ ನಿರ್ಮಾಣ ಸೇರಿದಂತೆ ನಾನಾ ಅಭಿವೃಧ್ಧಿ ಕಾರ್ಯ ನೆರವೇರಿಸಿದ್ದಾರೆ. ಪ್ರತಿಯೊಬ್ಬ ಮತದಾರರು ಈ ಬಾರಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ. ಅದ್ದರಿಂದ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ಸದೃಡ ಭಾರತವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ನಂತರ ಅಡಿವೆಯ್ಯ ಸ್ವಾಮಿ ಹಾಗೂ ಚೊಕ್ಕಬಸವನಗೌಡ ಮಾತನಾಡಿ. ದೇಶದ ಪ್ರದಾನಿ ನರೇಂದ್ರ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಪ್ರದಾನಿ ಬಗ್ಗೆ ಹಗುರವಾಗಿ ಮಾತನಾಡುವ ಹಕ್ಕಿಲ್ಲ. ಇದಕ್ಕೆ ತಕ್ಕ ಉತ್ತರ ಈಗಿನ ಲೋಕಸಭಾ ಚುನಾವಣೆ ಉತ್ತರ ನೀಡಲಿದೆ.
ಈ ಸಂದರ್ಭದಲ್ಲಿ ದಮ್ಮೂರು ಸೋಮಪ್ಪ. ನೆನಕ್ಕಿ ವಿರುಪಾಕ್ಷಪ್ಪ. ಸೂರಿಬಾಬು.ಗೋಡೆ ಸಂಪತ್‍ಕುಮಾರ್.ಮುದಿಯಪ್ಪ.ಬಕ್ಕಾಟೆ ಈರಯ್ಯ. ರಾಮಚಂದ್ರಪ್ಪ. ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.