ಹೊಸದುರ್ಗ
20 ಲಕ್ಷ ಜನಸಂಖ್ಯೆ ಹೊಂದಿರುವ ಕುಂಚಿಟಿಗರು ರಾಜಕೀಯ ಶೋಷಣೆಗೆ ಒಳಗಾಗಿದ್ದಾರೆ ಜನಸಂಖ್ಯೆ ಹಾಗೂ ಪ್ರಬಲವಾದ ಜಾತಿವಾರು ನಮ್ಮ ಕ್ಷೇತ್ರಗಳಲ್ಲಿ ಬರುತ್ತಿದ್ದಾರೆ ಇದು ಪ್ರಜಾಪ್ರಭುತ್ವಕ್ಕ ಹಿನ್ನಡೆ ನಮ್ಮ ಸಮಾಜದವರು ಬಹಳಷ್ಟು ಶ್ರಮದಿಂದ ರೈತಾಪಿ ಕೆಲಸ ಮಾಡುತ್ತಿದ್ದಾರೆ ಅವರಿಗಾಗಿ ಮೀಸಲಾತಿ ಅನಿವಾರ್ಯ ಆ ಕಾರಣಕ್ಕೆ ಸಂಘಟಿತರಾಗಿ ಎಂದು ಸಮಾವೇಶ ಮಾಡುತ್ತಿದ್ದೇವೆ ಎಂದು ಕುಂಚಟಿಗ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.
ಬೆಂಗಳೂರು ನಗರದ ರಾಜರಾಜೇಶ್ವರಿ ನಗರದ ಯೂತ್ ಲೀಡರ್ ಕ್ಯಾಂಪಸ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕುಂಚಿಟಿಗ ಸಮಿತಿ ಟ್ರಸ್ಟ್ (ರಿ) ವತಿಯಿಂದ ನಡೆದ ಕುಂಚಿಟಿಗ ಸಮಾಜದ ಸಂಘಟನಾ ಕಾರ್ಯಕಾರಿಣಿ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಇತ್ತೀಚೆಗೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಪ್ರತಿಷ್ಠೆಗಾಗಿ ಸಂಘ ಸಂಸ್ಥೆಗಳನ್ನು ಕಟ್ಟಿ ವ್ಯಕ್ತಿ ವ್ಯಕ್ತಿ ಗಳ ನಡುವೆ ಜಾತಿ ಜಾತಿಗಳ ನಡುವೆ ಸಂಘರ್ಷ ತರುತ್ತಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಒಳ್ಳೆಯವರನ್ನು ಒಳ್ಳೆಯರೆಂದು ಹೇಳುವ ಬದಲು ಕೆಟ್ಟವರನ್ನು ಒಳ್ಳೆಯರೆಂದು ಬಿಂಬಿಸುವ ಜನರೆ ಜಾಸ್ತಿಯಾಗಿದ್ದಾರೆ. ತಮ್ಮ ವೈಯಕ್ತಿಕ ಬೆಳವಣಿಗೆ ಹಿತಸಕ್ತಿಗಾಗಿ ಸಮಾಜ ಸಂಸ್ಥೆ ಸೌಹಾರ್ದತೆಯನ್ನು ಹಾಳು ಮಾಡಬಾರದು. ಕುಂಚಿಟಿಗ ಸಮಾಜ ಸಂಘಟನೆಯ ಮೂಲಕ ಹೋರಾಟ ಮಾಡಬೇಕು ಮತ್ತು ನಮಗೆ ಸಿಗಬೇಕಾದ ಮೀಸಲಾತಿ ಸಾಮಾಜಿಕ ನ್ಯಾಯವನ್ನು ಪಡೆಯಬೇಕು. ಸಹೋದರ ಸಮಾಜಕ್ಕೆ ನೋವು ತರಬಾರದು ಸಂಘಟನೆ ಬೇಕಾಗಿರುವುದು ಬಡವರ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸೇವೆ ಮಾಡಲು ಎಂದರು.
ಸೌಹಾರ್ದ ಸಮಾಜದ ನಿರ್ಮಾಣಕ್ಕೆ ಸಂಘಟನೆ ಮಾಡಬೇಕೆ ವಿನಃ ವಿಂಗಡಣೆಗಾಗಿ ಅಲ್ಲ. ಕುಂಚಿಟಿಗರು ಬುಡಕಟ್ಟು ಜನಾಂಗ ತಮಿಳುನಾಡು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪಡೆಯುತ್ತಿದ್ದಾರೆ ಕರ್ನಾಟಕದಲ್ಲಿ ಪ್ರವರ್ಗ 1 ಸೇರಿಸಲು ಮಠ ಮೊದಲಿಗೆ ಧ್ವನಿ ಎತ್ತುವ ಕೆಲವನ್ನು ನಿರಂತರ ಪ್ರಯತ್ನ ಮಾಡುತ್ತಿದೆ ಕುಂಚಿಟಿಗ ಪ್ರಗತಿಯತ ಸಾಗಲು ಎಲ್ಲ ರಾಗ ದ್ವೇಷ ಬದಿಗಿಟ್ಟು ಎಲ್ಲರು ಮಠದ ಮಾರ್ಗದರ್ಶನದಲ್ಲಿ ಮುನ್ನೇಯಿರಿ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ರವಿಕೂಮರ್ ವಹಿಸಿದ್ದರು. ರಾಷ್ಟ್ರೀಯ ಕುಂಚಿಟಿಗ ಸಮಿತಿ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಅನೇಕ ಜಿಲ್ಲೆಗಳ ಕುಂಚಿಟಿಗ ಸಮಾಜದ ಭಾಂದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ