ಚಿತ್ರದುರ್ಗ;
ವೈಶಿಷ್ಟ ಪೂರ್ಣ ಸಂಸ್ಕೃತಿಯನ್ನು ಹೊಂದಿರುವ ಬಂಜಾರ ಸಮುದಾಯದ ಧರ್ಮಗುರು ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವವನ್ನು ನಗರದಲ್ಲಿ ಭಾನುವಾರಂದು ಅದ್ದೂರಿಯಾಗಿ ಆಚರಿಸಲಾಯಿತು
ತಮ್ಮ ಆರಾಧ್ಯದೈವ ಸಂತಸೇವಾಲಾಲ್ ಮಹಾರಾಜರ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಭವ್ಯ ಮೆರವಣಿಗೆಯಲ್ಲಿ ಸಮಾಜದ ಯುವಕರು, ಮಹಿಳೆಯರು ಮತ್ತು ಮುಖಂಡರುಗಳು ಪಾಲ್ಗೊಂಡಿದ್ದರು. ತಾಲ್ಲೂಕಿನ ವಿವಿಧ ಲಂಬಾಣಿ ತಾಂಡಗಳಿಂದ ನೂರಾರು ಮಂದಿ ಮಹಿಳೆಯರು ತೀಜ್ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು
ನಗರದ ಶ್ರೀನಿಲಂಕಠೇಶ್ವರ ದೇವಸ್ಥಾನದ ಬಳಿ ಜಮಾಯಿಸಿದ್ದ ಬಂಜಾರ ಸಮಾಜದ ಯುವಕರು, ಮುಖಂಡರು ಹಾಗೂ ಮಹಿಳೆಯರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸರ್ಕಾರಿ ವಿಜ್ಞಾನ ಕಾಲೇಜು ಆವರಣಕ್ಕೆ ತೆರಳಿದರು. ಮೆರವಣಿಗೆಯ ಉದ್ದಕ್ಕೂ ವಿವಿಧ ಕಲಾತಂಡಗಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದವು. ಯುವಕರು ಮತ್ತು ಯುವತಿಯರು ಹುಚ್ಚೆದ್ದು ಕುಣಿದರು
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ಎನ್.ಚಂದ್ರಪ್ಪ, ನಗರದಲ್ಲಿ ಸಂತಸೇವಾಲಾ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸಬೇಕು ಎನ್ನುವ ಬಂಜಾರ ಸಮಾಜದ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು
ನಾವುಗಳು ಇಲ್ಲಿ ನಿಂತುಕೊಳ್ಳಲು ಅಂಬೇಡ್ಕರ್ ಕಾರಣರಾಗಿದ್ದಾರೆ. ಅವರು ನೀಡಿದ ಸಂವಿಧಾನದಿಂದ ದೇಶದ ಕಟ್ಟ ಕಡೆಯ ವ್ಯಕ್ತಿಯೂ ಸಹಾ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ಧಾರೆ. ಇದರೊಂದಿಗೆ ಸಂತ ಸೇವಾಲಾಲ್ ರವರು ಸಹಾ ಜನಾಂಗದ ಅಭೀವೃದ್ದಿಗೆ ಮುಂದಾಗಿದ್ದಾರೆ. ಇವರ ಆರ್ಶಿವಾದ ಇಲ್ಲದಿದ್ದರೆ ಸಮಾಜ ಇಷ್ಟೂಂದು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ನುಡಿದರು.
ರಾಜ್ಯ ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಎಲ್ಲಾ ದಾರ್ಶನಿಕರ ಜಯಂತಿಗಳನ್ನು ಆಚರಣೆ ಮಾಡುವುದರ ಮೂಲಕ ಆವರ ತತ್ವ ಅದರ್ಶಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಿದ್ದಾರೆ ಅಲ್ಲದೆ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಪೂರ್ಣ ಮಾಡಿದ್ದಾರೆ. ಈ ಜನಾಂಗವು ಸಹಾ ಶ್ರದ್ದಾ ಭಕ್ತಿಯಿಂದ ತೀಜ್ ಹಬ್ಬವನ್ನು ಆಚರಣೆ ಮಾಡುವುದರ ಮೂಲಕ ಗೋಧಿ ಬೆಳೆಯನ್ನು ಬೆಳೆದಿದ್ಧಾರೆ ಇದರೊಂದಿಗೆ ಬೇರೆ ಸಮಾಜದವರೊಂದಿಗೂ ಸಹಾ ಉತ್ತಮವಾದ ಸಹಬಾಳ್ವೆಯನ್ನು ನಡೆಸುವುದರ ಮೂಲಕ ಅವರನ್ನು ಸಹಾ ಜೊತೆಗೂಡಿಸಿಕೊಂಡು ಮುನ್ನೆಡೆಯುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಜಿ.ಪಂ. ಸದಸ್ಯ ನಾಗೇಂದ್ರ ನಾಯ್ಕ್ ಮಾತನಾಡಿ, ಸರ್ಕಾರ ಲಂಬಾಣಿ ಅಭೀವೃದ್ದಿ ನಿಗಮವನ್ನು ಸ್ಥಾಪನೆ ಮಾಡುವುದರ ಮೂಲಕ ಅದಕ್ಕೆ ಬೇಕಾದ ಸೌಕರ್ಯವನ್ನು ನೀಡಲಾಗಿದೆ ಇದರ ಮೂಲಕ ಜನಾಂಗದವರು ಸರ್ಕಾರದ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯಬೇಕಿದೆ, ಇದೇ ರೀತಿ ಸರ್ಕಾರ ಲಂಬಾಣಿ ತಾಂಡ, ಆಡಿಗಳು ಸೇರಿದಂತೆ ಇತರೆ ಲಂಬಾಣಿ ಜನಾಂಗ ವಾಸ ಮಾಡುವ ಸ್ಥಳಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವಂತೆ ಆದೇಶವನ್ನು ನೀಡಿದೆ ಆದರೆ ಆದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಈ ಬಗ್ಗೆ ಸರ್ಕಾರ ಶೀಘ್ರವಾಗಿ ಲಂಬಾಣಿ ಜನಾಂಗ ವಾಸ ಮಾಡುವ ಸ್ಥಳಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವಂತೆ ಆಗ್ರಹಿಸಿದರು.
ಜನಾಂಗದ ಅಭೀವೃದ್ದಿಗಾಗಿ ಜಿಲ್ಲೆಯಲ್ಲಿ ಕಸೂತಿ ಕೇಂದ್ರವನ್ನು ಸ್ಥಾಪನೆ ಮಾಡಬೇಕು, ನಗರದ ಯಾವುದಾದರೂ ವೃತ್ತದಲ್ಲಿ ಸಂತ ಸೇವಾಲಾಲ್‍ರವರು ಪ್ರತಿಮೆಯನ್ನು ಸ್ಥಾಪನೆ ಮಾಡಬೇಕು, ತಾಂಡ, ಹಟ್ಟಿ, ಆಡಿಗಳಲ್ಲಿ ಕ್ಯಾಂಪ್‍ಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡುವುದರ ಮೂಲಕ ಜನಾಂಗದವರು ಒಂದೆಡೆ ಸೇರಿ ಅಭೀವೃದ್ದಿಯ ಬಗ್ಗೆ ಚರ್ಚೆ ಮಾಡಲು ಸಹಾಯ ಮಾಡಬೇಕಿದೆ, ಇದೇ ರೀತಿ ಜಿಲ್ಲಾ ಕೇಂದ್ರದಲ್ಲಿಯೂ ಸಹಾ ಸೇವಾಲಾಲ್‍ರವರ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕೆಂದು ಸರ್ಕಾರವನ್ನು ನಾಗೇಂದ್ರ ನಾಯ್ಕ್ ಆಗ್ರಹಿಸಿದರು.
ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಭೀಮಾನಾಯ್ಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಶಿವಮೂರ್ತಿನಾಯ್ಕ್ ಚಿತ್ರದುರ್ಗ ತಾ.ಪಂ.ಸದಸ್ಯ ಸುರೇಶ್ ನಾಯ್ಕ್, ತಾಂಡ ಅಭೀವೃದ್ದಿ ನಿಗಮದ ನಿರ್ದೆಶಕ ಅನಿಲ್ ಕುಮಾರ್, ಮುಖಂಡರಾದ ಪ್ರಕಾಶರಾಜ್ ನಾಯ್ಕ್, ಲೋಕೇಶ್ ನಾಯ್ಕ್, ಮಾಧವ ನಾಯ್ಕ್, ರಾಜಾನಾಯ್ಕ್, ವಸಂತ ಬಾಯಿ ಸರೋಜ ಬಾಯಿ, ಸೇರಿದಂತೆ ಇತರರು ಭಾಗವಹಿಸಿದ್ದರು.