ಸರ್ಕಾರಿ ಆಸ್ಪತ್ರೆ ಭ್ರಷ್ಟಾಚಾರ ಅವ್ಯವಹಾರ ಬಯಲಿಗೆಳದ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯೆ

ಕೊಟ್ಟೂರು

     ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಭ್ರಷ್ಟಾಚಾರ, ಅವ್ಯವಹಾರವನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯೆ ಅಟವಾಳಿಗಿ ಎ. ಬಸಮ್ಮ ಬಯಲು ಮಾಡಿದ್ದಾರೆ.

      ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ, ಪ್ರತಿ ತಿಂಗಳು ಆರೋಗ್ಯ ರಕ್ಷಾ ಸಭೆ ಮಾಡಬೇಕು. ಸಭೆ ನಡೆಯದೆ ಎಷ್ಟೋ ತಿಂಗಳಾಗಿವೆ. ಆಡಳಿತ ವೈದ್ಯಾಧಿಕಾರಿ ಡಾ. ಬದ್ಯಾನಾಯ್ಕ ಸದಾ ಸ್ವಂತ ಕ್ಲಿನಿಕ್‍ನಲ್ಲಿರುತ್ತಾರೆ. ರಾತ್ರಿ ಡ್ಯೂಟಿಗೆ ಬರುವುದೇ ಇಲ್ಲ. ಬೆಳಗ್ಗೆ ಅಪರೂಪಕ್ಕೆ ಆಸ್ಪತ್ರೆಗೆ ಬರ್ತಾರೆ ಎಂದು ದೂರಿದರು.

     ಹೆರಿಗೆ ಬರೋರು ಕೈಯಲ್ಲಿ ಹಣ ಹಿಡಿದುಕೊಂಡೆ ಆಸ್ಪತ್ರೆಗೆ ಬರಬೇಕು. ಎರಡು ಸಾವಿರ ರು. ಕೊಟ್ರೇ ಮಾತ್ರ ಹೆರಿಗೆ ಆಗೋದು ಇಲ್ಲಾಂದ್ರೆ ಇಲ್ಲ. ಈ ದಂಧೆ ಈ ಆಸ್ಪತ್ರೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಬಡವರು, ಕೂಲಿಕಾರರು ಆಸ್ಪತ್ರೆ ಬರ್ತಾರೆ. ಅವರೆಲ್ಲಿಂದ ಹಣ ತರಬೇಕು ಎಂದು ಪ್ರಶ್ನಿಸಿದರು.

     ರಾಷ್ಟ್ರೀಯ ಆರೋಗ್ಯ ಅಭಿಯಾನ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಮುಕ್ತ ನಿಧಿ ಸೇರಿ ವರ್ಷಕ್ಕೆ 10 ಲಕ್ಷ ರು. ಅನುದಾನ ಬರುತ್ತದೆ. ಈ ಅನುದಾನವನ್ನು ಆರೋಗ್ಯ ರಕ್ಷಾ ಸಮಿತಿ ಸಭೆ ಕರೆದು ಸದಸ್ಯೆರೊಂದಿಗೆ ಚರ್ಚಿಸಿ ಆಸ್ಪತ್ರೆ ಅಭಿವೃದ್ದಿಗೆ ಆಗತ್ಯ ಔಷಧಿ ಖರೀದಿಸಲು ಬಳಸಬೇಕು. ಇದ್ಯಾವುದು ಸಮಿತಿ ಗಮನಕ್ಕೆ ತಾರದೆ ಡಾ. ಬದ್ಯಾನಾಯ್ಕ ಆಸ್ಪತ್ರೆಗೆ ಬೇಕಾದ ಸಾಮಗ್ರಿ, ಔಷಧಿಗಳನ್ನು ಖರೀದಿಸುತ್ತಾರೆ ಎಂದು ಖಾರವಾಗಿ ನುಡಿದರು.

     ಆರೋಗ್ಯ ರಕ್ಷಾ ಸಮಿತಿ ಮತ್ತೊಬ್ಬ ಸದಸ್ಯ ಕನ್ನಾಕಟ್ಟಿ ಪ್ರದೀಪ್ ಹಾಗೂ ಡಾ. ಬದ್ಯಾನಾಯ್ಕ ಇವರಿಬ್ಬರೇ ರಕ್ಷಾ ಸಮಿತಿ ಸಭೆ ಮಾಡ್ತಾರೆ. ಇತರೆ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಡಾ. ಬದ್ಯಾನಾಯ್ಕಮ ಕನ್ನಾಕಟ್ಟಿ ಪ್ರದೀಪಗೆ ಪ್ರತಿ ತಿಂಗಳು ಆಪ್ತಾ ಕೊಡ್ತಾರೆ ಎಂಬ ಮಾಹಿತಿ ಇದೆ ಗಂಭೀರವಾಗಿ ಆರೋಪಿಸಿದರು.

     ರೋಗಿಗಳನ್ನು ಹೆಚ್ಚಿನ ಚಿಕಿತ್ಸೆ ಬೇರೆ ಆಸ್ಪತ್ರೆಗೆ ಉಚಿತವಾಗಿ ಅಂಬ್ಯುಲೆನ್ಸನಲ್ಲಿ ಕರೆದುಕೊಂಡು ಹೋಗಬೇಕು. ಡಿಜಲ್‍ಗೆ ಸರ್ಕಾರ ಹಣ ಕೊಡುತ್ತದೆ. ಆದರೆ ಅಂಬ್ಯುಲೆನ್ಸ್‍ವರು ರೋಗಿಗಳಿಂದ ಹಣವಸೂಲಿ ಮಾಡ್ತಾ ಇದ್ರು, ನನ್ನ ಗಮನಕ್ಕೆ ಬಂದ ಮೇಲೆ ಅದನ್ನು ನಿಲ್ಲಿಸಿದ್ದೇನೆ ಎಂದರು.

     ಆಸ್ಪತ್ರೆಗೆ ರಾತ್ರಿ ಕಾವಲುಗಾರರಿರಲಿಲ್ಲ. ನಾನು ಒತ್ತಾಯ ಮಾಡಿದ್ದಕ್ಕೆ ಇಬ್ಬರನ್ನು ತೆಗೆದುಕೊಂಡಿದ್ದೇವೆ. ಎಂದು ಡಾ. ಬದ್ಯಾನಾಯ್ಕ ಹೇಳಿದರು. ಆದರೆ ರಾತ್ರಿ ಯಾವ ಕಾವಲುಗಾರನೂ ಇಲ್ಲ. ಆ ಹಣವೂ ದುರುಪಯೋಗವಾಗಿದೆ ಎಂದರು.

      ನೀವು ಒಮ್ಮೆ ಆಸ್ಪತ್ರೆ ಬೆಡ್‍ಗಳನ್ನು ನೋಡಬೇಕು. ಅವೆಲ್ಲ ಹರಿದಿವೆ. ಬೆಡ್ ಮೇಲೆ ಬೆಡ್‍ಶೀಟ್ ಇಲ್ಲ. ಹೊಸ ಬೆಡ್ ತರಿಸಿ ಎಂದು ಹೇಳಿದ್ದೆ. ಆದರೆ ಇಲ್ಲಿಯ ತನಕ ಹೊಸ ಬೆಡ್‍ಗಳು ಬಂದಿಲ್ಲ. ಬೆಡ್‍ಶೀಟ್ ಇಲ್ಲ. ಇಲ್ಲಿ ಕುಡಾ ಗೋಲ್‍ಮಾಲ್ ನಡೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.ಆಸ್ಪತ್ರೆಯ ಭ್ರಷ್ಟಾಚಾರ, ಅವ್ಯವಹಾರ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು. ಎಂದು ಆಗ್ರಹಪಡಿಸಿದರು.ಕನ್ನಾಕಟ್ಟಿ ಪ್ರದೀಪ್, ಅಲ್ತಫ್, ದುರುಗಪ್ಪ, ಅಟವಾಳಿಗಿ ಎ.ಬಸಮ್ಮ ಇವರನ್ನು ಶಾಸಕ ಭೀಮಾನಾಯ್ಕ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನಾಗಿ ನೇಮಿಕಮಾಡಿದ್ದಾರೆ.

       ಉಳಿದಂತೆ ಈ ಸಮಿತಿಯಲ್ಲಿ ಸರ್ಕಾರದಿಂದ ತಹಶೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ. ಜೆಸ್ಕಾಂ ಇಲಾಖೆ ಇಂಜಿನೀಯರ್, ಸರ್ಕಲ್ ಇನ್ಸಫೆಕ್ಟರ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ. ಪ.ಪಂ. ಮುಖ್ಯಾಧಿಕಾರಿ. ಆಡಳಿತ ವೈದ್ಯಾಧಿಕಾರಿ ಸದಸ್ಯರಾಗಿರುತ್ತಾರೆ.ಈ ಸಮಿತಿಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಕಾರ್ಯದರ್ಶಿ ಆಗಿರುತ್ತಾರೆ.

       ಸಮಿತಿ ಸರ್ಕಾರಿ ಅಧಿಕಾರಿಗಳ್ಯಾರು. ಆಸ್ಪತ್ರೆ ಇಷ್ಟು ಅದೋಗತಿ ಇಳಿದಿದ್ದು, ರಾಜಾರೋಷವಾಗಿ ಅವ್ಯವಹಾರ. ಭ್ರಷ್ಟಾಚಾರ ತಾಂಡವಾಡುತ್ತಿದ್ದರೂ ಇತ್ತ ತಿರುಗಿಯೂ ನೋಡದಿರುವ ಬಗ್ಗೆ ಸಾರ್ವಜನಿಕರು ಹಲವು ವಿಧವಾಗಿ ಯೋಚಿಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link