ಶಿರಾ
ರಾಜ್ಯ ಸರ್ಕಾರಿ ನೌಕರರ ಸಂಘದ ಶಿರಾ ಶಾಖೆಯ ನಿರ್ದೇಶಕರ ಸ್ಥಾನಕ್ಕಾಗಿ ಜೂನ್ 13 ರಂದು ಚುನಾವಣೆ ನಡೆಸಲಾಯಿತು. ತಾಲ್ಲೂಕಿನಲ್ಲಿ ಒಟ್ಟು ಸರ್ಕಾರಿ ಇಲಾಖೆಗಳ ಪೈಕಿ 2416 ಮತದಾರರಿದ್ದು, 75 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 19 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, 54 ಮಂದಿ ಕಣದಲ್ಲಿ ಉಳಿದಿದ್ದರು. 16 ಮಂದಿ ಅವಿರೋಧವಾಗಿ ಆಯ್ಕೆಯಾದ ಪರಿಣಾಮ, ಉಳಿದ 14 ಸ್ಥಾನಗಳಿಗಾಗಿ ಜೂನ್ 13 ರಂದು ಚುನಾವಣೆ ನಡೆಸಲಾಗಿದ್ದು ಈ ಕೆಳಕಂಡ ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ.
ಕಂದಾಯ ಇಲಾಖೆಯ 2 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಕಾಂತರಾಜು 41 ಮತ ಹಾಗೂ ಎಂ.ಸುದರ್ಶನ್ 45 ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ.
ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ 3 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 12 ಮಂದಿ ಕಣದಲ್ಲಿ ಉಳಿದಿದ್ದು, ಈ ಪೈಕಿ ಟಿ.ಎನ್.ಓಂಕಾರೇಶ್ವರ್ 634, ಕೆ.ಸಿ.ಜೀವನ್ ಪ್ರಕಾಶ್ 480, ಆರ್.ದೇವರಾಜು 545 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಪ್ರೌಢಶಾಲೆಯ 1 ಸ್ಥಾನಕ್ಕಾಗಿ 3 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು ರಾಮಣ್ಣ 103 ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ. ಕಿರಿಯ ಕಾಲೇಜು ಮತ್ತು ಪ.ಪೂ. ಕಾಲೇಜುಗಳ 1 ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು ಡಿ.ಗಿರೀಶ್ 87 ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯ 1 ಸ್ಥಾನಕ್ಕಾಗಿ ಹೆಚ್.ಭಾನುಮತಿ ಹಾಗೂ ಜಿ.ಈ.ಮಲ್ಲಿಕಾರ್ಜುನ ಈ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಈರ್ವರಿಗೂ ತಲಾ 37 ಮತಗಳು ಬಂದು ಸಮ ಮತಗಳು ಲಭ್ಯವಾದಾಗ ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ ಲಾಟರಿ ಮೂಲಕ ವಿಜೇತರಾದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ 1 ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು ಆರ್.ರಂಗನಾಥ್ 5 ಮತಗಳನ್ನು ಪಡೆದು ಆಯ್ಕೆಗೊಂಡರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 4 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 8 ಮಂದಿ ಕಣದಲ್ಲಿ ಉಳಿದಿದ್ದು, ಈ ಪೈಕಿ ಚಂದ್ರಪ್ಪ 126, ಎಸ್.ಮಂಜುನಾಥ್ 117, ಸಿ.ರವಿ 129, ಎ.ಎಂ.ವಿನೋದ್ 144 ಮತಗಳನ್ನು ಪಡೆದು ಆಯ್ಕೆಗೊಂಡಿದ್ದಾರೆ.
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳು ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ 1 ಸ್ಥಾನಕ್ಕಾಗಿ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು ಈ ಪೈಕಿ ಭೂಮಾಪನ ಇಲಾಖೆಯ ಬಿ.ಎಂ.ಲಕ್ಷ್ಮೀಶ್ 17 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ಅವಿರೋಧ ಆಯ್ಕೆ:
ಚುನಾವಣೆಗೂ ಮುನ್ನವೇ ವಿವಿಧ ಇಲಾಖೆಗಳಲ್ಲಿ ನಾಮ ಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ನಾಮ ಪತ್ರಗಳನ್ನು ವಾಪಸ್ ಪಡೆದ ಪರಿಣಾಮ ಜಿ.ಪಿ.ನಾಗರಾಜು, ಡಾ.ಹೆಚ್.ನಾಗೇಶ್, ಟಿ.ಆರ್.ಲೋಕೇಶ್, ಎಸ್.ಆರ್.ಸುಜಾತ, ಜಿ.ದೇವರಾಜು, ಸಿ.ಮೋಹನ್‍ರಾಮ್, ಶರತ್‍ಕುಮಾರ್, ರವಿಶಂಕರರಾವ್, ಅಶ್ವತ್ಥಪ್ಪ, ವೀರಕ್ಯಾತರಾಯ, ರಾಜಶೇಖರಮೂರ್ತಿ, ಶಿವಣ್ಣ, ಶಿವರಾಮಯ್ಯ, ಚೌಡಪ್ಪ, ಶ್ರೀನಿವಾಸ್, ಸಂತೋಷ್‍ಕುಮಾರ್ ಸೇರಿದಂತೆ ಒಟ್ಟು 16 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
