ಸರ್ಕಾರಿ ಶಾಲೆಗಳ ಧನಾತ್ಮಕ ಕೊಡುಗೆ ಕುರಿತು ವಿಚಾರ ಸಂಕಿರಣ

ಹಾವೇರಿ :
 
         ಜಿಲ್ಲೆಯಲ್ಲಿ  ಶಾಲೆಗಳು ಧನಾತ್ಮಕವಾಗಿ ಅಭಿವೃದ್ದಿ ಯಾಗುತ್ತಿದ್ದು, ಅನೇಕ ಶಾಲೆಗಳಲ್ಲಿ ಬದಲಾವಣೆಗೆ ಶಿಕ್ಷಕರು ತುಂಬಾ ಶ್ರಮವಹಿಸಿ ಕೆಲಸ ಮಾಡುತಿದ್ದಾರೆ ಈ ನಿಟ್ಟಿನಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಸ್ಥೆ ವತಿಯಿಂದ ಅನೇಕ ಶಾಲೆಗಳನ್ನು ಗುರುತಿಸಿ ವರದಿ ಮಾಡಿರುವುದು ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದು ಸಾ,ಶಿ.ಇ,ಉಪನಿರ್ಧೆಶಕರಾದ ಅಂದಾನೆಪ್ಪ ವಡಗೇರಿ ಹೇಳಿದರು.
           ನಗರದ  ಸರ್ಕಾರಿ ಉರ್ದು ಫ್ರೌಢ ಶಾಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಧನಾತ್ಮಕ ಕೊಡುಗೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಹುತೇಕ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಸಮಾಜದ ಸಂಪನ್ಮೂಲ ವ್ಯಕ್ತಿ ಸಂಸ್ಥೆಗಳಿಂದ ಪ್ರೋತ್ಸಹ ದೊರೆಯುವಂತಾದರೆ ಮಕಕ್ಳ ಸರ್ವಾಗಿಣ ಅಭಿವೃದ್ಧಿ ಸಾಧ್ಯ ಎಂದರು. ಸರ್ಕಾರಿ ಉರ್ದುಪ್ರೌಢ ಶಾಲೆಯ ಮುಖ್ಯೋಪಾದ್ಯಯರಾದ  ಎಚ್ ಎಂ ಪಡ್ನೇಶಿ  ಮಾತನಾಡಿ ಸರ್ಕಾರಿ ಶಾಲೆ ಅನ್ನೋವ ಮನೊಭಾವನೆ ಜೊತೆಗೆ ನಮ್ಮ ಶಾಲೆ ಎಂಬ ಮನೋಭಾವ ಬೆಳೆಯ ಬೇಕು.
          ನಾವು ನಮ್ಮ ಶಾಲೆ ಅಭಿವೃದ್ದಿ ಮಾಡುವ ಸಲುವಾಗಿ 1ಲಕ್ಷ ಐವತ್ತು ಸಾವಿರ ರೂ ಗಳನ್ನು ನಮ್ಮ ಶಿಕ್ಷಕರೆಲ್ಲರೂ ಸೇರಿ ನಮ್ಮ ಸಂಬಳದ ಹಣದಲ್ಲಿ ಕರ್ಚು ಮಾಡಿದ್ದೇವೆ ಎಂದು  ತಿಳಿಸಿದರು ಸತೀಶ ಕುಲಕರ್ಣಿ  ರೇಣುಕಾ ಗುಡಿಮನಿ ಗುಲಬರ್ಗಾ ವಲಯ ಸಂಘಟಕರಾದ ವಿಠಲ್ ಚಿಕಣಿ ಪ್ರೋಪೆಸರ್ ಪ್ರಶಾಂತ್ ಎಚ್ ವಾಯ್ ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್‍ಪಿಜೆ ಜಿಲ್ಲಾ ಅಧ್ಯಕ್ಷರಾದ ಎಸ್ ಡಿ ಬಳಿಗಾರ,ನಗರಸಭೆ ಸದಸ್ಯ ಶ್ರೀಮತಿ ಕವಿತಾ ಯಲವಿಗಿಮಠ,ಎಸ್‍ಎಸ್ ನಡುವಿನಮಠ, ರೇಣುಕಾ ಗುಡಿಮನಿ. ಕುಮಾರಿ ಹಸೀನಾ ಹೇಡಿಯಾಲ್, ವಿಠಲ್ ಚಿಕಣಿ, ಭಾರತಿಯ ವಿದ್ಯಾರ್ಥಿ ಫೇಡರೇಶನ್ ಮುಖಂಡ ಬಸವರಾಜ ಭೋವಿ ರಾಜು ಶ್ರೀನಿವಾಸ, ಕಾಕೋಳ ಹತ್ತಿಮತ್ತೂರ ಆಲದಗೇರಿ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link