ಬಳ್ಳಾರಿ
ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹರ್ಷಿಗಳು ದೇವಾನ್ ದೇವತೆಗಳ ಕಾಲದಲ್ಲಿ ಆಯುಷ್ ಎಂಬ ಸೇವೆಯನ್ನು ಮಾಡುತ್ತಿದ್ದರು ಎಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಈ ದೇಶದಲ್ಲಿ ನಾನಾ ಹೆಸರುಗಳಿಂದ ಕರೆಯಲ್ಪಡುವ ಸವಿತಾ ಸಮುದಾಯದ ಮೂಲ ಪುರುಷನೇ ಶ್ರೀ ಸವಿತಾ ಮಹರ್ಷಿ ಎಂದು ಪುರಾಣ ಗ್ರಂಥಗಳಲ್ಲಿ ತಿಳಿದು ಬರುತ್ತದೆ ಹಾಗೂ ಶಿವನ ಕಣ್ಣುಗಳನ್ನು ಸೂರ್ಯ-ಚಂದ್ರರಿಗೆ ಹೋಲಿಸುವುದು ಪುರಾಣಗಳಲ್ಲಿ ನಾವುಗಳು ಕಾಣಬಹುದು.
ಅಂತಹ ಶಿವನ ಕಣ್ಣಿನ ಕಣ್ಣಿರಿನಿಂದ ಹುಟ್ಟಿದ ದೈವ ಪುರುಷರೇ ಶ್ರೀ ಸವಿತಾ ಮಹರ್ಷಿ ಎಂದು ಹೇಳಿತ್ತಾ, ಸೂರ್ಯನ ಮತ್ತೊಂದು ಹೆಸರು ಸವಿತ್ರಾ ಆಗಿರುವುದರಿಂದ ಸವಿತಾ ಮಹರ್ಷಿ ಎಂಬ ಹೆಸರು ಬಂದಿರುವುದು ನಾವುಗಳು ಪೌರಾಣಿಕ ಕತೆಗಳಲ್ಲಿ ಹಾಗೂ ಇತಿಹಾಸಕಾರರ ಪುಸ್ತಕಗಳಲ್ಲಿ ಉಲ್ಲೇಖಿತವಾಗಿರುತ್ತದೆ ಎಂದು ಬಳ್ಳಾರಿ ತಹಸಿಲ್ದಾರ್ ನಾಗರಾಜ್ ಅವರು ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಶ್ರೀ ಶ್ರೀ ಶ್ರೀ ಸವಿತಾ ಮಹರ್ಷಿ ಜಯಂತಿಯನ್ನು ಮಂಗಳವಾರದಂದು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರು ಹಾಗೂ ಸಮಾಜದ ಮುಖಂಡರೆಲ್ಲರು ಸೇರಿ ಪ್ರತಿಯೊಂದು ಹಳ್ಳಿಗಳಲ್ಲಿ ಜಯಂತಿ ಆಚರಿಸಿ ಇವರ ತತ್ವಾದರ್ಶಗಳನ್ನು ಪಾಲನೆ ಮಾಡಬೇಕೆಂದು ಮಹಾ ನಗರ ಪಾಲಿಕೆ ಮಾಜಿ ಉಪ ಮಹಾಪೌರ ಬೆಣಕಲ್ಲು ಬಸವರಾಜ್ ಅವರು ಹೇಳಿದರು.
ವಿಶ್ರಾಂತ ಚಿತ್ರಕಲಾ ಶಿಕ್ಷಕ ಕೆ.ಬಿ. ಸಿದ್ದಲಿಂಗಪ್ಪ ವಿಶೇಷ ಉಪನ್ಯಾಸ ನೀಡಿದರು. ಎಸ್. ಲಕ್ಷ್ಮಿ ಅವರು ಭಕ್ತಿ ಗಾಯನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಮಹಾನಗರ ಪಾಲಿಕೆಯ ಸದಸ್ಯ ವೆಂಕಟ್‍ರಾವ್ ಎಮ್, ಜಿಲ್ಲಾ ಸವಿತಾ ಸಮಾಜ ಸಂಘ ಜಿಲ್ಲಾಧ್ಯಕ್ಷ ಶರಣಪ್ಪ, ತಾಲೂಕು ಅಧ್ಯಕ್ಷ ಆರ್. ಶೇಖಣ್ಣ, ಎಮ್. ರಾಜಶೇಖರ, ಡಾ. ತಿಪ್ಪೇಸ್ವಾಮಿ ವಡ್ಡು, ವೆಂಕಟೇಶಲು ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.