ತಾಲ್ಲೂಕು ಕಛೇರಿಯಲ್ಲಿ ಸವಿತಾ ಮಹಾರ್ಷಿ ಜಯಂತಿ ಆಚರಣೆ.

ಹಿರಿಯೂರು :

      ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದವರಲ್ಲಿ ಸವಿತಾಮಹಾರ್ಷಿ ಕೂಡ ಒಬ್ಬರು. ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಹೇಳಿದರು.ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

       ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಈ ಸಮಾಜದ ಶೋಷಿತರ, ನೋಂದವರ ಹಿಂದುಳಿದವರ ಬಡವರ ಕಣ್ಣೀರು ಒರೆಸುವ ಮೂಲಕ ಸಮಾನತೆ ಸಮಾಜ ನಿರ್ಮಿಸುವಲ್ಲಿ ಸವಿತಾ ಮಹರ್ಷಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದರು.

        ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಸ್. ಚಂದ್ರಪ್ಪ, ಸದಸ್ಯರಾದ ಓಂಕಾರಪ್ಪ, ನಗರಸಭೆ ಪೌರಾಯುಕ್ತಾರದ ಮಹಂತೇಶ್ , ಸಮಾಜಕಲ್ಯಾಣ ಅಧಿಕಾರಿ ವಿ.ಕೃಷ್ಣಮೂರ್ತಿ, ಪಿ.ಎಸ್.ಐ ಮಂಜುನಾಥ್, ಸಬ್‍ರಿಜಿಸ್ಟರ್ ವೆಂಕಟೇಶ್, ಶ್ರೀನಿವಾಸ್‍ರೆಡ್ಡಿ, ಸವಿತಾ ಸಮಾಜದ ಮುಖಂಡರಾದ ಬಸವರಾಜ್, ನಿರಂಜನ್, ಧನಂಜಯ್, ಮನೋಹರ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link