ಸಮಾಜದ ಕಣ್ಣು ತೆರೆಸಿದ ಸಾವಿತ್ರಿಬಾಯಿ ಪುಲೆ.

ಹೊಸಪೇಟೆ :

       ಇಲ್ಲಿಗೆ ಸಮೀಪದ ಕಾರಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಹಾಗು ಸಾವಿತ್ರಿಬಾಯಿಪುಲೆಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

      ಈ ವೇಳೆ ಕುವೆಂಪು ಅವರ ಕುರಿತು ಉಪನ್ಯಾಸ ನೀಡಿದ ಡಾ.ಕೃಷ್ಣವೇಣಿ, ಎದೆಯ ದನಿ ಬಗ್ಗೆ ನವೋದಯದ ಹಲವರಂತೆ ಕುವೆಂಪು ಅವರಿಗೂ ಮಾನವ ಹೃದಯದ ಕಣ್ಣಿನ ಬಗ್ಗೆ ನಂಬಿಕೆ ಇತ್ತು. ಮಾನವನ ಅಂತರಂಗ ವಿಕಾಸ ಮೂಲಬೀಜ ಹುಟ್ಟುವುದು ಮಾನವನ ಎದೆಯ ದನಿಯಲ್ಲಿಯೇ. ಕವಿಯ ಒಳಗಣ್ಣು ತೆರೆದಾಗ ವಿಶ್ವದ ಹೃದಯವೇ ಅವನಿಗೆ ತೆರೆಯುತ್ತದೆ ಎಂಬುದು ಮಾನವನ ಯೋಗ್ಯ ಪ್ರತಿಭೆಯಾಗಿದೆ. ವಿದ್ಯಾರ್ಥಿಗಳು ಕುವೆಂಪು ಅವರಂತೆ ಇಂಥ ಸಾಹಿತ್ಯಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

       ಮುಖ್ಯಗುರು ಗಾದಿಲಿಂಗಪ್ಪ ಮಾತನಾಡಿ, ಜಿಡ್ಡುಗಟ್ಟಿದ ಅಂದಿನ ಕಾಲಘಟ್ಟದಲ್ಲಿ ಶಿಕ್ಷಣ ಎನ್ನುವುದು ಬಡವರಿಗೆ ಮರೀಚಿಕೆಯಾಗಿತ್ತು. ಅದು ಕೇವಲ ಉಳ್ಳವರ ಸ್ವತ್ತಾಗಿತ್ತು. ಬಡವರಿಗೆ ಶಿಕ್ಷಣ ಸುಲಭವಾಗಿ ಸಿಗುವಂಥದ್ದಾಗಿರಲಿಲ್ಲ. ಅಂಥ ಕಾಲದಲ್ಲಿ ಸಾವಿತ್ರಿಬಾಯಿಪುಲೆಯವರು ಶಿಕ್ಷಣಕ್ಕಾಗಿ ಅನೇಕ ಕಷ್ಟಗಳನ್ನು ಎದುರಿಸಿ, ದೇಶದ ಮೊದಲ ಶಿಕ್ಷಕಿಯಾಗಿ ಸಮಾಜದ ಕಣ್ಣು ತೆರೆಸಿದರು ಎಂದರು.

         ಇದೇ ವೇಳೆ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಎಂ.ಎ.ರಾಜ್ಯಶಾಸ್ತ್ರದಲ್ಲಿ ರ್ಯಾಂಕ್ ಪಡೆದು, 2ಚಿನ್ನದ ಪದಕ ಗಳಿಸಿದ ಹಳೇ ವಿದ್ಯಾರ್ಥಿ ನಿಂಗಪ್ಪ, ರಾಷ್ಟ್ರ ಪ್ರಶಸ್ತಿ ಪದಕ ಪಡೆದ ಅಗ್ನಿಶಾಮಕ ಠಾಣಾಧಿಕಾರಿ ಕೃಷ್ಣಸಿಂಗ್, ಉಪನ್ಯಾಸ ನೀಡಿದ ಡಾ.ಕೃಷ್ಣವೇಣಿಯವರನ್ನು ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಶಿಕ್ಷಕರಾದ ಪ್ರಕಾಶ್, ವಿರುಪಜ್ಜ, ಶಿಕ್ಷಿಯರಾದ ಜರೀನಾಬೇಗಂ, ಭಾಗ್ಯಲಕ್ಷ್ಮಿ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link