ಇವಿಎಂ ಬಳಸಿ ಶಾಲಾ ಸಂಸತ್ ಚುನಾವಣೆ..!!

ಹುಳಿಯಾರು :

      ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ 2019-20 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ವಿನೂತನ ತಂತ್ರಜ್ಞಾನ ಆಧಾರಿತ ಮೊಬೈಲ್ ವೋಟಿಂಗ್ ಆಪ್ ಮೂಲಕ ನಡೆಸಿ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಕುತೂಹಲ ಮತ್ತು ಆಸಕ್ತಿ ಮೂಡಿಸಲಾಯಿತು.

     ಲೋಕಸಭೆ ಮತ್ತು ವಿದಾನಸಭೆ ಚುನಾವಣೆ ನಡೆಸುವ ಮಾದರಿಯಲ್ಲೇ 8, 9, ಮತ್ತು 10 ನೇ ತರಗತಿಗಳ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಚುನಾವಣೆಗೆ 40 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಇವರಲ್ಲಿ 20 ವಿದ್ಯಾರ್ಥಿಗಳನ್ನು ಚುನಾಯಿಸಲಾಯಿತು. ಈ ಚುನಾವಣೆಗಾಗಿ ಇಲ್ಲಿಯ ಸಮಾಜ ಶಿಕ್ಷಕರು ರಚಿಸಿದ ಇವಿಎಂ ಆಪ್ ಬಳಕೆ ಮಾಡಲಾಗಿತ್ತು.

       ಮೊಬೈಲ್‍ನಲ್ಲಿನ ಈ ಆಪ್‍ನÀಲ್ಲಿ ಅಭ್ಯರ್ಥಿಗಳ ಹೆಸರು, ಅಭ್ಯರ್ಥಿಗಳ ಪೋಟೋ, ಅಭ್ಯರ್ಥಿಗಳ ಚಿಹ್ನೆ ಹೀಗೆ ಲೋಕಸಭೆ ಮತ್ತು ವಿದಾನಸಭೆ ಚುನಾವಣೆಗಳಲ್ಲಿನ ಇವಿಎಂ ನಂತೆಯೇ ಸಿದ್ಧಪಡಿಸಲಾಗಿತ್ತು. ಅಲ್ಲದೆ ಮತದಾನ ಹಾಕಿದ ಕೂಡಲೇ ಮತ ಯಾರಿಗೆ ಹಾಕಿದ್ದೇವೆ ಎನ್ನುವ ಮಾಹಿತಿ ಹಾಗೂ ಸುಲಭ ರೀತಿಯ ಕೌಂಟಿಂಗ್ ವ್ಯವಸ್ಥೆಯನ್ನು ಕೂಡ ಅಳವಡಿಸಲಾಗಿತ್ತು.

       ಅಚ್ಚರಿ ಎನ್ನುವಂತೆ ಒಂದು ಬಾರಿ ಎರಡು ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕುವಂತ ವ್ಯವಸ್ಥೆಯನ್ನು ಇದರಲ್ಲಿ ಮಾಡಿ ತರಗತಿಗಿಬ್ಬರಂತೆ ಆಯ್ಕೆ ಮಾಡಲಾಯಿತು. ಅಲ್ಲದೆ ಹೆಣ್ಣುಮಕ್ಕಳಿಗೊಂದು, ಗಂಡು ಮಕ್ಕಳಿಗೊಂಡು ಓಟು ಹಾಕುವಂತೆ ಸೂಚಿಸಲಾಗಿತ್ತು. ಮತದಾನ ಮಾಡಿದ್ದ ಕುರುಹುವಾಗಿ ಬೆರಳಿಗೆ ಶಾಯಿ ಸಹ ಹಚ್ಚಲಾಯಿತು. ಶಾಲಾ ಗುರುತಿನ ಚೀಟಿ ತೋರಿಸದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಒಟ್ಟಾರೆ ಚುನಾವಣೆಯ ಪ್ರಕ್ರಿಯೆಗಳನ್ನು ಅಚ್ಚು ಕಟ್ಟಾಗಿ ಮಾಡಲಾಯಿತು.

       ವಿದ್ಯಾರ್ಥಿಗಳಿಗೆ ಇದೊಂದು ಹೊಸ ಅನುಭವ ನೀಡಿತು. ಎರಡು ಗಂಟೆಗಳ ಕಾಲ ನಡೆದ ಮತದಾನದಲ್ಲಿ 8 ನೇ ತರಗತಿಯ ‘ಎ’ ವಿಭಾಗದಿಂದ ದೇವರಾಜು, ಚೇತನ, ‘ಬಿ’ ವಿಭಾಗದಿಂದ ಹರ್ಷಿತ, ಚೇತನ, ‘ಸಿ’ ವಿಭಾಗದಿಂದ ಮೇಘನ, ಕಿಶೋರ್, ‘ಡಿ’ ವಿಭಾಗದಿಂದ ಸಂಗೀತ. ತೇಜ್ ಪಾಲ್, 9 ನೇ ತರಗತಿಯ ‘ಎ’ ವಿಭಾಗದಿಂದ ಪವಿತ್ರ, ಜೀಶಾನ್, ‘ಬಿ’ ವಿಭಾಗದಿಂದ ದಿಶಾ, ಬಿ.ಕೆ.ಚಂದನ, ‘ಸಿ’ ವಿಭಾಗದಿಂದ ಸಂಜಯ್, ಸ್ಪೂರ್ತಿ, 10 ನೇ ತರಗತಿ ‘ಎ’ ವಿಭಾಗದಿಂದ ಮೇಘನ, ಚೇತನ್, ‘ಬಿ’ ವಿಭಾಗದಿಂದ ಅರ್ಜುನ್, ಧನುಶ್ರೀ, ‘ಸಿ’ ವಿಭಾಗದಿಂದ ಪ್ರೀತಿ, ಪೃಥ್ವಿರಾಜ್ ಆಯ್ಕೆಯಾದರು.

         ಒಟ್ಟಾರೆ ಇವಿಎಂ ಬಳಸಿ ಸಾರ್ವತ್ರಿಕ ಚುನಾವಣೆಯಂತೆ ಶಾಲಾ ಸಂಸತ್ ಚುನಾವಣೆ ನಡೆಸು ಮೂಲಕ ಮಕ್ಕಳಿಗೆ ಚುನಾವಣೆಯ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮನವರಿಕೆ ಮಾಡಲಾಯಿತು. ಉಪ ಪ್ರಾಂಶುಪಾಲರಾದ ಇಂದಿರಾ ಅವರು ಮುಖ್ಯಚುನಾವಣಾಧಿಕಾರಿಗಳಾಗಿ, ಶಿಕ್ಷಕರಾದ ಮೋಮೀನಬಾನು, ಸುದೀಂದ್ರ, ಶಿವಣ್ಣ ಹಾಗೂ ಇತರೆ ಶಿಕ್ಷಕರುಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ ಶಾಲಾ ಸಂಸತ್ ಚುನಾವಣೆ ನಡೆಸಿಕೊಟ್ಟರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap